ಶಿವಮೊಗ್ಗ : ಶಿವಮೊಗ್ಗದಲ್ಲಿರುವ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನವು ಬಹಳ ಆಧ್ಯಾತ್ಮಿಕವಾದುದು. ಇದು ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದಾಗಿದ್ದು, ಈ ದೇವಸ್ಥಾನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ವೆಂಕಟರಮಣನ ಜೊತೆಗೆ ಶ್ರೀ ಲಕ್ಷ್ಮಿ ದೇವತೆ ಮತ್ತು ಶ್ರೀ ಗಣಪತಿ, ಆಂಜನೇಯ ದೇವರು, ಗರುಡ ದೇವರು ಇರುವುದು ವಿಶೇಷವಾಗಿದೆ.

ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ
ಶ್ರೀ ಲಕ್ಷ್ಮೀ ವೆಂಕಟರಮಣ ದೇವಮಂದಿರವು 7 ದಿನಗಳ ಕಾಲ ಬೆಳಗ್ಗೆ 06.30 ರಿಂದ ಮಧ್ಯಾಹ್ನ 12.45 ರವರೆಗೆ ತೆರೆದಿರುತ್ತದೆ. ಸಂಜೆಯ ಸಮಯದಲ್ಲಿಯೂ ಭಜನೆ ಜೊತೆಗೆ ಪೂಜೆ ನಡೆಯುತ್ತದೆ. ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ಬಹಳ ಆಧ್ಯಾತ್ಮಿಕ ಸ್ಥಳವಾಗಿದ್ದು, ಉತ್ತಮವಾಗಿ ನಿರ್ವಹಿಸಲ್ಪಟ್ಟ ದೇವಾಲಯವಾಗಿದೆ. ವೈಕುಂಠ ಏಕಾದಶಿಯಂದು ವಿಶೇಷ ಪೂಜೆಗಳನ್ನು ಆಯೋಜಿಸಲಾಗುತ್ತದೆ. ವರ್ಷದಲ್ಲಿ ಹಲವಾರು ಸಂದರ್ಭಗಳಲ್ಲಿ ಅನೇಕ ಉತ್ಸವಗಳನ್ನು ನಡೆಸಲಾಗುತ್ತದೆ. ಭಕ್ತರು ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ.