ಬಾಯರ್ ಸಂಸ್ಥೆಯಿಂದ ಹೊಸ ಉತ್ಪನ್ನ ಬಿಡುಗಡೆ

ಜಾಗತಿಕ ಉದ್ಯಮವಾಗಿರುವ ಬಾಯರ್ (Bayer), ಕೃಷಿ ಮತ್ತು ಆರೋಗ್ಯ ರಕ್ಷಣೆಯ ಜೀವ ವಿಜ್ಞಾನ ಕ್ಷೇತ್ರಗಳಲ್ಲಿ ಪ್ರಮುಖ ಸಾಮರ್ಥ್ಯಗಳನ್ನು ಹೊಂದಿದ್ದು, ಭತ್ತದ ಬೆಳೆಗಾರರು ಕಾಂಡ ಕೊರೆಯುವ ಕೀಟಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಂತಾಗಲು ವಿನ್ಯಾಸಗೊಳಿಸಲಾದ ಬಿಕೋಟಾ (BICOTA) ಎಂಬ ಹೊಸ ಉತ್ಪನ್ನವನ್ನು ಬಿಡುಗಡೆ ಮಾಡಿರುವುದಾಗಿ ಘೋಷಿಸಿದೆ.

ಬಾಯರ್ ಸಂಸ್ಥೆಯ ವಿಶೇಷ ನಾವೀನ್ಯದ ಸಂಯೋಜನೆಯಲ್ಲಿ ಈ ಉತ್ಪನ್ನವು ಹಾನಿಕಾರಕ ಕೀಟಗಳ ವಿರುದ್ಧ ಬಲವಾದ ರಕ್ಷಣೆ ನೀಡುತ್ತದೆ. ಭತ್ತ ಬೆಳೆಯುವ ಪ್ರಮುಖ ರಾಜ್ಯಗಳಾದ ಪಂಜಾಬ್, ಹರಿಯಾಣ, ಉತ್ತರಾಖಂಡ, ಉತ್ತರ ಪ್ರದೇಶದ ಪಶ್ಚಿಮ ಭಾಗ, ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಬಿಕೋಟಾ ಉತ್ಪನ್ನ 2025 ರ ಜೂನ್ ನಿಂದ ಲಭ್ಯವಿರಲಿದೆ.

ಕಾಂಡಕೊರಕ ಕೀಟಗಳು ಭತ್ತದ ಬೇಸಾಯದಲ್ಲಿ ಗಮನಾರ್ಹ ಹಾನಿಗೆ ಕಾರಣವಾಗಿ, ಇಳುವರಿಯನ್ನು ಕಡಿಮೆ ಮಾಡುತ್ತವೆ. ಈ ಕೀಟಗಳು ಆಹಾರ ಸೇವನೆಯನ್ನು ನಿಲ್ಲಿಸಲು ಬಿಕೋಟಾ (BICOTA) ಕೀಟನಾಶಕವು ತ್ವರಿತವಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ಬೆಳೆಗಳಿಗೆ ದೀರ್ಘಕಾಲ ರಕ್ಷಣೆ ನೀಡುತ್ತದೆ. ಕೇವಲ ಒಂದು ಸಲ ಬೆಳೆಯ ನೆಲದಲ್ಲಿ ಚಲ್ಲಿದರೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಕೀಟನಾಶಕಗಳಿಗಿಂತ ದೀರ್ಘಾವಧಿಯವರೆಗೆ ಹೆಚ್ಚಿನ ಹಾಗೂ ಪರಿಣಾಮಕಾರಿ ರಕ್ಷಣೆಯನ್ನು ಒದಗಿಸುತ್ತದೆ. ಜೊತೆಗೆ, ಬೇರು ಮತ್ತು ತೆಂಡೆಗಳ ಬೆಳವಣಿಗೆಯನ್ನೂ ಪ್ರಚೋದಿಸುತ್ತದೆ. ಬೆಳೆಯ ಸಮಗ್ರ ಆರೋಗ್ಯವನ್ನು ಸುಧಾರಿಸುತ್ತದೆ. ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳ ನಡುವೆ ಕಾಂಡಕೊರಕ ಕೀಟದ ಬಾಧೆಯನ್ನು ನಿಯಂತ್ರಿಸುವ ಪ್ರಮುಖ ಸವಾಲಿಗೆ ಪರಿಹಾರವಾಗಿ, ಹೆಚ್ಚಿನ ಇಳುವರಿಯನ್ನು ಒದಗಿಸುತ್ತದೆ.

ಬಾಯರ್ ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾ, ಸಸ್ಯ ವಿಜ್ಞಾನ ವಿಭಾಗದ ಕ್ಲಸ್ಟರ್ ವಾಣಿಜ್ಯ ಮುಖ್ಯಸ್ಥರಾದ ಮೋಹನ್ ಬಾಬು, ಬಾಯರ್ ತನ್ನ ನಾವೀನ್ಯಗಳ ಮೂಲಕ ರೈತರ ಜೀವನವನ್ನು ಸುಲಭಗೊಳಿಸಲು ಪ್ರಯತ್ನಿಸುತ್ತಿದೆ. ಬಿಕೋಟಾ (BICOTA) ಕೀಟನಾಶಕ ಮೂಲಕ, ಭತ್ತದ ಬೆಳೆಗಾರರು ತಮ್ಮ ಬೆಳೆಯನ್ನು ಪರಿಣಾಮಕಾರಿಯಾಗಿ ರಕ್ಷಿಸಬಹುದು. ಇದು ಸಮಯ ಮತ್ತು ಕಾರ್ಮಿಕರ ವೆಚ್ಚವನ್ನು ಉಳಿಸುತ್ತದೆ. ಇಳುವರಿ ಮತ್ತು ಆದಾಯವನ್ನು ವೃದ್ಧಿಸಲು ಸಹಾಯ ಮಾಡುವ ಭರವಸೆಯನ್ನು ನಾವು ಹೊಂದಿದ್ದೇವೆ ಎಂದು ಹೇಳಿದ್ದಾರೆ.

ಬಿಕೋಟಾ (BICOTA) ಬಳಸಲು ಮತ್ತು ಪ್ರಯೋಜನಕಾರಿ ಕೀಟಗಳಿಗೆ ಸುರಕ್ಷಿತವಾಗಿದೆ. ಹೀಗಾಗಿ, ಅದು ರೈತರಿಗೆ ಆದರ್ಶ ಆಯ್ಕೆಯಾಗಿದೆ. ಹಾಗೆಯೇ, ಇದು ಸಮಗ್ರ ಕೀಟ ನಿರ್ವಹಣ (IPM) ಕ್ರಮಗಳಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಉತ್ಪನ್ನದ ಕುರಿತು ಇನ್ನಷ್ಟು ತಿಳಿದುಕೊಳ್ಳಲು Bayer FarmRise App ಗೆ ಭೇಟಿ ನೀಡಬಹುದಾಗಿದೆ.

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

I consent to receive newsletter via email. For further information, please review our Privacy Policy

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...