
ಶಿವಮೊಗ್ಗ : ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ರಾಹುಲ್ ಗಾಂಧಿ ಅವರ ಹುಟ್ಟುಹಬ್ಬದ ಅಂಗವಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಸ್ತ್ರೀರೋಗ ವಿಭಾಗದ ಗರ್ಭಿಣಿಯರ ವಾರ್ಡಿನಲ್ಲಿ ವಿವಿಧ ರೀತಿಯ ಹಣ್ಣುಗಳನ್ನು ವಿತರಿಸುವ ಮೂಲಕ ಆಚರಿಸಲಾಯಿತು.
ರಾಹುಲ್ ಗಾಂಧಿಯವರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪಾದಯಾತ್ರೆ ಮೂಲಕ ಭಾರತ್ ಜೋಡೋ ಐತಿಹಾಸಿಕ ಕಾರ್ಯಕ್ರಮ ನೀಡಿ ಒಡೆದ ಮನಸ್ಸುಗಳ ಜೋಡಿಸುವ ಕೆಲಸ ಮಾಡಿದಂತಹ ಧೀಮಂತ ನಾಯಕರು. ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಮೇಲೆತ್ತುವ ಆಲೋಚನೆ ಹೊಂದಿರುವ ಬಡವರ ಬಂಧು ನಮ್ಮ ರಾಹುಲ್ ಗಾಂಧಿಯವರು ಮುಂದಿನ ದಿನಗಳಲ್ಲಿ ನಮ್ಮ ದೇಶದ ಪ್ರಧಾನಿ ಆಗುವ ಎಲ್ಲಾ ಗುಣಗಳು ಅವರಲ್ಲಿ ಇದೆ.
– ಗಿರೀಶ್, ಉತ್ತರ ಬ್ಲಾಕ್ ಅಧ್ಯಕ್ಷ
ಈ ಸಂದರ್ಭದಲ್ಲಿ ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷರು ಗಳಾದ ಶಿವಕುಮಾರ್, ಕಲೀಂಪಾಶ, ಆಶ್ರಯ ಸಮಿತಿ ಸದಸ್ಯರಾದ ಯಮನಾರಂಗೇಗೌಡ, ಹಿಂದುಳಿದ ವರ್ಗದ ರಾಜ್ಯಪ್ರಧಾನ ಕಾರ್ಯದರ್ಶಿಯಾದ ಕಾಶಿ ವಿಶ್ವನಾಥ್, ಯುವ ಮುಖಂಡರುಗಳಾದ ಮಧುಸೂಧನ್, ಅಕ್ಬರ್ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರ್ಷಿತ್ ಗೌಡ, ನಗರ ಅಧ್ಯಕ್ಷ ಚರಣ್, ಎನ್.ಎಸ್.ಯು.ಐ ರಾಜ್ಯ ಕಾರ್ಯದರ್ಶಿ ಬಾಲಾಜಿ, ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಗಳಾದ ಗೌತಮ್, ಮಲಗೊಪ್ಪ ಶಿವು, ನಾಗೇಂದ್ರ ಹಾಗೂ ಯುವ ಕಾಂಗ್ರೆಸ್ನ ಪದಾಧಿಕಾರಿಗಳು ಪಾಲ್ಗೊಂಡಿದ್ದರು.