ವಿದ್ಯಾಭ್ಯಾಸದ ಜೊತೆ ಕೌಶಲ್ಯವೂ ಅಗತ್ಯ: ಬಲ್ಕಿಷ್ ಬಾನು

Amrutha KHome4 months ago22 Views

ಶಿವಮೊಗ್ಗ : ಇತ್ತೀಚಿನ ದಿನಗಳಲ್ಲಿ ಬಹುತೇಕ ಯುವಕರ ಪರಿಸ್ಥಿತಿಗಳು ಹದಗೆಡುತ್ತಿರುವುದಕ್ಕೆ ನಮ್ಮ ಸಮಾಜದ ಪಾತ್ರವು ಬಹು ಮುಖ್ಯವಾಗಿದೆ. ವಿದ್ಯಾಭ್ಯಾಸ ದ ಜೊತೆಯಲ್ಲಿ ಯುವಕರಿಗೆ ಕೌಶಲ್ಯ ಅಗತ್ಯ ಎಂದು ವಿಧಾನ ಪರಿಷತ್ ಶಾಸಕಿ ಬಲ್ಕಿಷ್ ಬಾನು ಹೇಳಿದರು.

ಅವರು ಮಲ್ನಾಡ್ ಸ್ಕಿಲ್ ಸೆಂಟರ್ ನಲ್ಲಿ ಅಯೋಜಿಸಿದ್ದ ಯುವಜನರ ಉನ್ನತಿಗಾಗಿ ಸಮಾಜದ ಪಾತ್ರ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವಜನರ ಏಳಿಗಾಗಿ ಪೋಷಕರು ಎಷ್ಟು ಮುಖ್ಯವು ನಾವು ವಾಸಿಸುವ ಸಮಾಜವು ಬಹಳ ದೊಡ್ಡ ಪಾತ್ರ ವಹಿಸಿದೆ. ಸಮಾಜದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ವಿದ್ಯಾವಂತರು ಮುಂದೆ ಬರಬೇಕೆಂದು ಅಭಿಪ್ರಾಯ ಪಟ್ಟರು.

ಸರ್ಕಾರ ಯುವಕರ ಭವಿಷ್ಯವನ್ನು ಸುಧಾರಿಸಲು ಪ್ರಯತ್ನಿಸುತ್ತಿದೆ. ಇಂದಿನ ಯುಗದಲ್ಲಿ ಬಹುತೇಕ ಮಕ್ಕಳು ಬುದ್ಧಿವಂತರಾಗಿರತ್ತಾರೆ. ಆದರೆ ಕೆಲವು ಮಕ್ಕಳಿಗೆ ಅವರ ಜ್ಞಾನಕ್ಕೆ ತಕ್ಕ ವಾತಾವರಣ ಸಿಗುವುದಿಲ್ಲ. ಕೆಲ ಪೋಷಕರು ಅವರ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಕಾರ್ಯಗತರಾಗದೆ ಅವರ ಭವಿಷ್ಯ ಅಪಾಯಕ್ಕೆ ಸಿಲುಕಿಸುತ್ತಿದ್ದಾರೆ, ಇದು ದುಃಖಕರ ವಿಷಯ. ಈ ನಿಟ್ಟಿನಲ್ಲಿ ಪ್ರಾರ್ಥನ ಮಂದಿರಗಳು ಮತ್ತು ಸೇವಾ ಸಂಸ್ಥೆಗಳು ನಮ್ಮ ಸಮಾಜದ ಸುಧಾರಣೆಯ ಕೇಂದ್ರಗಳಾಗಬೇಕು. ಬಹುತೇಕ ಪ್ರಾರ್ಥನ ಮಂದಿರಗಳಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಇವೆ. ಆದರೆ ಅದನ್ನು ಯುವಜನರ ಏಳಿಗೆಗಾಗಿ ಸಮರ್ಪಿಸಿದಲ್ಲಿ ರಾಷ್ಟ್ರವು ಅಭಿವೃದ್ಧಿಯ ಪತದತ್ತ ಸಾಗಿಸುವಲ್ಲಿ ದೊಡ್ಡ ಕೊಡಗೆಯಾಗುತ್ತದೆ. ವಿದ್ಯಾಭ್ಯಾಸದ ಜೊತೆಯಲ್ಲಿ ಇಂತಹ ಕೌಶಲ್ಯ ಅಭಿವೃದ್ಧಿಯ ಸಂಸ್ಥೆಗಳಲ್ಲಿ ಯುವಕರನ್ನು ದಾಖಲಿಸಿ ಅವರ ಭವಿಷ್ಯವನ್ನು ಸುಧಾರಿಸಬಹುದು. ಶಿಕ್ಷಣದ ಜೊತೆ ಜೊತೆಯಲ್ಲಿ ಕೌಶಲ್ಯ ಪಡೆದಂತಹ ಯುವಕರು ಜೀವನದಲ್ಲಿ ಎಂತಹ ಕಠಿಣ ದಾರಿ ಇದ್ದಲ್ಲಿ ತಮ್ಮ ಪರಿಶ್ರಮದಿಂದ ಗೆಲ್ಲಬಹುದು ಹಾಗೂ ಮುಂದೆ ಸಾಗುತ್ತಾರೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಆತ್ಮ ವಿಶ್ವಾಸವೇ ಯಶಸ್ಸಿನ ಮೂಲ : ಡಾ. ಧನಂಜಯ ಸರ್ಜಿ

ಸಮಾಜದ ಸುಧಾರಣೆಗಾಗಿ ತಮ್ಮನ್ನು ತಾವು ಸುಧಾರಿಸಿಕೊಳ್ಳುವ ಅವಶ್ಯಕತೆಯಿದೆ. ಯುವಕರಲ್ಲಿ ಆತ್ಮವಿಶ್ವಾಸದ ಕೊರತೆ ಇದೆ, ಆತ್ಮವಿಶ್ವಾಸ ಇದ್ದಲ್ಲಿ ಯಶಸ್ಸು ಖಂಡಿತ ಸಿಗುತ್ತದೆ ಎಂದು ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ ಹೇಳಿದರು.

ಈ ಹಿಂದೆ ನಮ್ಮಲ್ಲಿ ಸಾಕಷ್ಟು ಪ್ರತಿಭೆಗಳಿದ್ದವು, ಅದರಿಂದಾಗಿ ಪ್ರಗತಿ ಸಾಧ್ಯವಾಯಿತು, ಈಗ ತಂತ್ರಜ್ಞಾನ ಮುಂದಿದೆ ಆದರೆ ಪ್ರತಿಭೆಯ ಕೊರತೆಯಿದೆ. ನಮ್ಮ ಶಿಕ್ಷಣ ವ್ಯವಸ್ಥೆ ದುರ್ಬಲವಾಗಿದೆ. ಯುವಕರು ಮುಂದುವರಿಯಲು ಪ್ರೋತ್ಸಾಹಿಸುವ ಅವಶ್ಯಕತೆಯಿದೆ. ಯಾವಾಗಲು ಯುವಕರು ದೊಡ್ಡ ಕನಸು ಕಾಣಬೇಕು. ಬರೀ ಕನಸ್ಸು ಕಂಡರೆ ಸಾಲದು ಅದನ್ನು ನನಸು ಮಾಡುವ ನಿಟ್ಟಿನಲ್ಲಿ ತಮ್ಮ ಪರಿಶ್ರಮ ಹಾಕಬೇಕು. ಈ ಜಗತ್ತಿನಲ್ಲಿ ಮೂರು ರೀತಿಯ ಜನರಿದ್ದಾರೆ, ಕೆಲವರು ಹೇಗೂ ತಮ್ಮ ಜೀವನ ಸಾಗಿಸಿ ಸಾಯುತ್ತಾರೆ, ಕೆಲವರು ಸತ್ತ ಮೇಲು ಹೃದಯಗಳಲ್ಲಿ ಉಳಿಯುತ್ತಾರೆ ಮತ್ತು ಕೆಲವರು ಸಾವಿನ ನಂತರವೂ ಬದುಕುತ್ತಲೇ ಇರುತ್ತಾರೆ. ನಾವು ಮಾಡುವ ಕಲ್ಯಾಣ ಕಾರ್ಯ ದೇವರನ್ನು ಮೆಚ್ಚಿಸುವುದಾಗಿರಬೇಕು. ನಮ್ಮ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಎಂಬುದು ಮುಖ್ಯವಲ್ಲ. ಆದರೆ ದೇವರನ್ನು ಮೆಚ್ಚಿಸಲು ನಾವು ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಮಲ್ನಾಡ್ ಸ್ಕಿಲ್ ಸೆಂಟರ್ ನ ವ್ಯವಸ್ಥಾಪಕರಾದ ಮೊಹಮ್ಮದ್ ಇಬ್ರಾಹಿಂ ಯುವಕರ ಅಭಿವೃದ್ಧಿಗಾಗಿ ತೆಗೆದುಕೊಂಡ ಕ್ರಮಗಳು ಶ್ಲಾಘನೀಯ ಎಂದರು.

ಮಲ್ನಾಡ್ ಟ್ರಸ್ಟ್‌ನ ಅಧ್ಯಕ್ಷ ಮೊಹಮ್ಮದ್ ಇಬ್ರಾಹಿಂ ಮಾತನಾಡಿ, ಒಬ್ಬ ವ್ಯಕ್ತಿ ಹುಟ್ಟಿದಾಗ ಅವನು ತನಗಾಗಿ ಬದುಕಬಾರದು, ಮಾನವೀಯತೆಗಾಗಿ ಬದುಕಬೇಕು. ಯಾವುದೇ ಗುರಿ ತಲುಪಲು ಶ್ರಮ ಹಾಕಿದಲ್ಲಿ ಮಾತ್ರ ಗುರಿ ತಲುಪಲು ಸಾಧ್ಯ. ಕೆಲ ಯುವಕರು ಪ್ರತ್ಯೇಕತೆಯ ಭಾವನೆಯನ್ನು ಅನುಭವಿಸಲು ಪ್ರಾರಂಭಿಸಿರುವ ಸ್ಥಿತಿಗೆ ತಂದಿದ್ದೇವೆ. ನಾವು ಅವರಿಗೆ ಜೀವನದ ಬಗ್ಗೆ ಅರಿವು ಮೂಡಿಸುತ್ತಿಲ್ಲ. ಈಗಿನ ಯುಗದಲ್ಲಿ ಯುವಕರು ರೋಬೋಟ್‌ಗಳಾಗುತ್ತಿದ್ದಾರೆ. ಯುವಕರು ಆಟವಾಡಲು ಸ್ಥಳವನ್ನು ಹುಡುಕುತ್ತಿದ್ದಾರೆ, ಆದರೆ ಆಟದ ಮೈದಾನಗಳಿಲ್ಲ. ಮಕ್ಕಳಿಗಾಗಿ ಆಟದ ಮೈದಾನಗಳನ್ನು ರಚಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಯುವ ಪೀಳಿಗೆ ಅಭಿವೃದ್ಧಿ ಹೊಂದಬೇಕಾದರೆ, ಅವರಿಗೆ ಮಾನಸಿಕ ತರಬೇತಿಯೂ ಬಹು ಮುಖ್ಯ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಯುವಕರಿಗೆ ಉದ್ಯೋಗ ಒದಗಿಸುವುದರಿಂದ ಸಮಾಜದ ಯಶಸ್ಸು ಸಾಧಿಸುವುದಲ್ಲದೆ, ಯುವಕರ ಮಾನಸಿಕ ಸುಧಾರಣೆಯೂ ಅಗತ್ಯ. ಸಮಾಜವು ಈ ದಿಕ್ಕಿನಲ್ಲಿ ಯೋಚಿಸಿ ಕೆಲಸ ಮಾಡಬೇಕಾಗಿದೆ. ಉದ್ಯೋಗ ಮತ್ತು ಆರ್ಥಿಕತೆ ಮಾತ್ರ ಉನ್ನತಿ ಅಲ್ಲ, ನೈತಿಕ ಮತ್ತು ಮೌಲ್ಯಾಧಾರಿತ ಶಿಕ್ಷಣ ಅಗತ್ಯ. ನಮ್ಮ ಶಿಕ್ಷಣ ಸಂಸ್ಥೆಗಳಿಗೆ ಬರುವ ಹೆಚ್ಚಿನ ವಿದ್ಯಾರ್ಥಿಗಳು ಬಲವಂತವಾಗಿ ಬರುವವರು. ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಎಂಜಿನಿಯರ್‌ಗಳಾಗುತ್ತಿದ್ದಾರೆ, ಆದರೆ ದೇಶದ ಅಭಿವೃದ್ಧಿ ಬರೀ ಇಂಜಿನಿಯರ್ ಗಳಲ್ಲ ಕೌಶಲ್ಯಧಾರಿತ ಇಂಜಿನಿಯರ್ ಗಳ ಅಗತ್ಯವಿದೆ. ನಮಗೆ ಉದ್ಯೋಗದ ಕೊರತೆಯಿಲ್ಲ, ಉದ್ಯೋಗ ಪಡೆಯುವ ಜನರ ಕೊರತೆಯಿದೆ ಎಂದರು.

ಮಾಜಿ ಕಾರ್ಪೊರೇಟರ್ ಸೈಯದ್ ವಾಹೀದ್ ಮಾತನಾಡಿ, ಮಲ್ನಾಡ್ ಸ್ಕಿಲ್ ಸೆಂಟರ್ ಮೂಲಕ ದೇಶದ ಉನ್ನತಿಗಾಗಿ ಮತ್ತು ಹೆಚ್ಚು ಯುವಕರಿಗೆ ಕೌಶಲ್ಯ ತರಬೇತಿಗಳ ಮೂಲಕ ನಿರುದ್ಯೋಗ ಹೋಗಲಾಡಿಸಿ ಸಮಾಜದ ಸುಧಾರಣೆಗಾಗಿ ಕೆಲಸ ಮಾಡುವುದಲ್ಲದೆ, ಅವರ ಪ್ರಯತ್ನಗಳು ಗಮನಾರ್ಹವಾಗಿವೆ ಎಂದು ಇಂತಹ ಅರ್ಥಪೂರ್ಣವಾದ ವಿಷಯದ ಬಗ್ಗೆ ಚಿಂತನೆ ಅತ್ಯವಶ್ಯಕ, ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ ಸಂಪೂರ್ಣ ಬೆಂಬಲ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯರಲ್ಲಿ ಮನವಿ ಮಾಡಿದರು.

ಜಿಲ್ಲಾ ಉದ್ಯೋಗ ಅಧಿಕಾರಿ ಖಲಂದರ್ ಖಾನ್ ಮಾತನಾಡಿ, ಯುವಕರ ತರಬೇತಿಗಾಗಿ ಸಮಾಜವು ಪ್ರಾಯೋಗಿಕವಾಗಿ ಬರುವ ಅವಶ್ಯಕತೆಯಿದೆ. ಸರ್ಕಾರದಿಂದ ಯುವಕರ ಏಳಿಗೆಗಾಗಿ ಹಲವಾರು ಯೋಜನೆಗಳು ಪರಿಚಿಯಸಲಾಗಿದೆ ಅದರ ಸದುಪಯೋಗಪಡೆದುಕೊಳಲ್ಲೂ ಕರೆ ನೀಡಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಆಜ್ ಕಾ ಇನ್ ಕಿಲಾಬ್‌ ದಿನಪತ್ರಿಕೆಯ ಸಂಪಾದಕ ಮುದಸ್ಸಿರ್ ಅಹ್ಮದ್, ಸಮಾಜದ ಅಭಿವೃದ್ಧಿಯಲ್ಲಿ ಯುವಕರ ಪಾತ್ರವನ್ನು ಮುಖ್ಯವೆಂದು ಪರಿಗಣಿಸಲಾಗಿತ್ತು, ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಈಗ ಯುವಕರ ಅಭಿವೃದ್ಧಿಯಲ್ಲಿ ಸಮಾಜದ ಪಾತ್ರ ಮುಖ್ಯವಾಗಿದೆ. ಈ ಉದ್ದೇಶದಿಂದ ಈ ಸಭೆಯನ್ನು ಆಯೋಜಿಸಲಾಗಿದೆ ಎಂದರು.

ಸಭಾ ಕಾರ್ಯಕ್ರಮದಲ್ಲಿ ಮಲ್ನಾಡ್ ಸುದ್ದಿ  ಭಾರತಿ ಕನ್ನಡ ಪತ್ರಿಕೆಯ ಸಂಪಾದಕ ಮಹಮ್ಮದ್ ಲಿಯಾಕತ್ ಸ್ವಾಗತಿಸಿದರು.  ಸೈಯದ್ ಜಾಫರ್ ನಿರೂಪಿಸಿದರು, ಅಥಣಿ ಅಸೋಸಿಯೇಟ್ಸ್ ನ ಮಾಲೀಕರಾದ ಮುರುಗೇಂದ್ರ ಪಾಟೀಲ್, ಮಲ್ನಾಡ್ ಸ್ಕಿಲ್ ಸೆಂಟರ್ ನ ಐಜಾಜ್ ಅಹ್ಮದ್, ಇಫ್ತಾಕಾರ್ ಅಹ್ಮದ್, ಮಹಮ್ಮದ್ ಎಜಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

I consent to receive newsletter via email. For further information, please review our Privacy Policy

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...