
ಶಿವಮೊಗ್ಗ : ಸಿಗಂದೂರಿನಲ್ಲಿರುವ ಎರಡು ಲಾಂಚ್ ಗಳನ್ನು ತೇಲುವ ಹೋಟೆಲ್ ಗಳಾಗಿ ಪರಿವರ್ತಿಸಬೇಕೆಂದು ಯೋಜನೆ ಮಾಡಿರುವುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಂಚ್ ಗೆ ಬೋಟ್ ವ್ಯವಸ್ಥೆ ಮಾಡಿ ಬೋಟ್ ಮೂಲಕ ಪ್ರವಾಸಿಗರು ಸುತ್ತಾಡಿ ನಂತರ ಲಾಂಚ್ ಬಳಿ ತೆರಳಿ ಊಟ ಮಾಡಬಹುದು. ಈ ತೇಲುವ ಹೋಟೆಲ್ ಗೆ ಕರೆದೊಯ್ಯಲು ಎರಡು ಬೋಟ್ ವ್ಯವಸ್ಥೆ ಮಾಡಲಾಗುವುದು ಎಂದರು.
![]()
ಈ ಯೋಜನೆಗೆ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಅನುಮೋದನೆ ನೀಡುತ್ತೇನೆ ಎಂದು ಹೇಳಿದ್ದಾರೆ. ಇದರಿಂದ ಲಾಂಚ್ ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೂ ಅಲ್ಲಿ ಉದ್ಯೋಗ ಅವಕಾಶ ನೀಡಲಾಗುತ್ತದೆ ಎಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.
ಪತ್ರಕಾಗೋಷ್ಠಿಯಲ್ಲಿ ಪ್ರಮುಖರಾದ ರವಿಕುಮಾರ್, ಶಿ.ಜು.ಪಾಷಾ ಉಪಸ್ಥಿತರಿದ್ದರು.