
ಶಿವಮೊಗ್ಗ : ಆಪ್ತ ವಲಯದಲ್ಲಿ ‘ಚೆನ್ನಿ’ ಎಂದೇ ಹೆಸರಾಗಿರುವ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಈಗ ತಮ್ಮ ಸರಳ, ಸಜ್ಜನಿಕೆಯ ಕಾರಣದಿಂದಲೇ ಜನಾನುರಾಗಿ ‘ಸಿಂಪಲ್ ಶಾಸಕ’ ಎಂದೇ ಹೆಸರಾಗಿದ್ದಾರೆ.
ಇಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಅವರ 62ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಶಿವಮೊಗ್ಗ ನಗರ ಬಿಜೆಪಿ ವತಿಯಿಂದ ಶುಭ ಹಾರೈಸಲಾಯಿತು.
ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಅವರು ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆಯ ಮೂಲಕ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸಾರ್ವಜನಿಕ ಕ್ಷೇತ್ರಕ್ಕೆ ಬಂದದ್ದು. ಆಪ್ತ ವಲಯದಲ್ಲಿ ‘ಚೆನ್ನಿ’ ಎಂದೇ ಹೆಸರಾಗಿರುವ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಈಗ ತಮ್ಮ ಸರಳ, ಸಜ್ಜನಿಕೆಯ ಕಾರಣದಿಂದಲೇ ಜನಾನುರಾಗಿ ‘ಸಿಂಪಲ್ ಶಾಸಕ’ ಎಂದೇ ಹೆಸರಾಗಿದ್ದಾರೆ. ಶಾಸಕ ಎನ್ನುವ ಹುದ್ದೆಗೆ ವೈಟ್ ಕಾಲರ್ ಕಿರೀಟದ ಕಲೆ ಅಂಟಿಸಿಕೊಳ್ಳದೆ, ಸಾಮಾನ್ಯ ಜನರಂತೆ ಚನ್ನಬಸಪ್ಪ ಅವರು ಕ್ಷೇತ್ರದಲ್ಲಿ ತಿರುಗಾಡುವ ಪರಿಯೇ ಅಪಾರ ಜನ ಮೆಚ್ಚುಗೆ ಗಳಿಸಿಕೊಂಡಿದೆ.
ಸದಾ ಜನರಿಗೆ ಸ್ಪಂಧಿಸುವ ಸ್ವಭಾವ ಎಸ್.ಎನ್.ಚನ್ನಬಸಪ್ಪ ಅವರದು. ಶಿವಮೊಗ್ಗ ನಗರಕ್ಕೆ ನಿರಂತರ ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಹಲವು ವಿನೂತನ ಯೋಜನೆ ಅವರ ಪ್ರಯತ್ನದ ಫಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಪಕ್ಷದ ಅನೇಕ ಹಿರಿ-ಕಿರಿಯ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಅವರು, ಪಕ್ಷದ ಸಕ್ರಿಯ ಚಟುವಟಿಕೆಗಳಲ್ಲಿ ಸದಾ ಮುಂದು. ಆ ಮೂಲಕವೇ ಈಗ ಶಿವಮೊಗ್ಗ ನಗರವನ್ನು ಮಾದರಿ ನಗರವನ್ನಾಗಿ ಮಾಡಲು ಪಣ ತೊಟ್ಟ ನಾಯಕ. ತಾವು ಭಾರತೀಯ ಜನತಾ ಪಕ್ಷವನ್ನು ಪ್ರತಿನಿಧಿಸುತ್ತಿದ್ದರೂ, ಎಲ್ಲಾ ಪಕ್ಷ-ಸಮುದಾಯದ ಪ್ರೀತಿ-ವಿಶ್ವಾಸಕ್ಕೆ ಪಾತ್ರವಾಗಿರುವುದರ ಹಿಂದೆ, ಈ ಸೇವಾ ಮನೋಭಾವವೇ ಕಾರಣ ಎಂದರೆ ಉತ್ಪ್ರೆಕ್ಷೆಯಲ್ಲ. ಯಾವುದೇ ಕಾರ್ಯವಿರಲಿ, ಧೈರ್ಯದಿಂದ ಮುನ್ನುಗ್ಗಿ ತಮ್ಮ ಕಾಳಜಿ ಮೆರೆಯುವ ಅವರ ಸಾಹಸದ ಬದುಕು ಇತರರಿಗೂ ಪ್ರೇರಣದಾಯಕ.

ಈ ವೇಳೆ ಪ್ರಮುಖರಾದ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಬಿಜೆಪಿ ನಗರ ಉಪಾಧ್ಯಕ್ಷ ಪ್ರಭಾಕರ್.ಪಿ, ಬಿಜೆಪಿ ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಬಿಜೆಪಿ ನಗರ ಪ್ರಭಾರಿ ಆದ ಮಾಜಿ ಸೂಡಾ ಅಧ್ಯಕ್ಷ ಜ್ಞಾನೇಶ್ವರ್ ಹಾಗೂ ಮಾಜಿ ಸೂಡಾ ಅಧ್ಯಕ್ಷರಾದ ನಾಗರಾಜ್, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ದೀನದಯಾಳು, ಬಿಜೆಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ರಶ್ಮಿ, ಮಾಜಿ ಕಾರ್ಪೊರೇಟರ್ ಮಂಜುನಾಥ್, ವಿಶ್ವನಾಥ್, ಪ್ರಭಾಕರ್, ಸುರೇಖಾ ಮುರಳಿಧರ್, ಹಾಗೂ ಬಿಜೆಪಿ ನಗರದ ಮುಖಂಡರು ಮತ್ತು ಕರ್ತವ್ಯ ಭವನದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ ⇒ ಶಿವಮೊಗ್ಗ ಜಿಲ್ಲೆಗೆ ಯುದ್ಧ ವಿಮಾನ, ಶಾಸಕ ಚೆನ್ನಿ ನೇತೃತ್ವದಲ್ಲಿ ಸ್ಥಳ ಪರಿಶೀಲನೆ