ಸಾಗರ ಪ್ರಸಿದ್ಧ ಮಾರಿಕಾಂಬ ದೇವಿ ಜಾತ್ರೆಗೆ ದಿನಾಂಕ ನಿಗದಿ, ಯಾವ ದಿನಾಂಕದಂದು ಏನೇನು ನಡೆಯಲಿದೆ?

ಸಾಗರ : ಇತಿಹಾಸ ಪ್ರಸಿದ್ಧವಾದ ಸಾಗರ ಮಾರಿಕಾಂಬಾ ದೇವಿ ಜಾತ್ರೆಯು 2026 ರ ಫೆಬ್ರವರಿ 03 ರಂದು ನಡೆಯಲಿದೆ ಎಂದು ಮಾರಿಕಾಂಬಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ತಿಳಿಸಿದರು.

ಸಾಗರದ ಮಾರಿಕಾಂಬಾ ದೇವಸ್ಥಾನದಲ್ಲಿ ಮಾರಿಕಾಂಬಾ ಜಾತ್ರಾ ವಿವರದ ನಾಮಫಲಕ ಅನಾವರಣ, ಜಾತ್ರೆ ನಡೆಸುವ ಕುರಿತು ಚರ್ಚೆ ಸಮಿತಿ ಚರ್ಚೆ ನಡೆಸಿ, ಮುಹೂರ್ತವನ್ನು ನಿಗದಿಪಡಿಸಿದೆ.

ಜಾತ್ರೆ ದಿನಾಂಕದ ವಿವರ :

  • 2025 ರ ಡಿಸೆಂಬರ್ 23 ರಂದು ಮರ ಕಡಿಯುವ ಶಾಸ್ತ್ರ.
  • 2026 ರ ಜನವರಿ 27 ರಂದು ಜಾತ್ರೆಗೆ ಅಂಕೆ ಹಾಕುವುದು.
  • 2026 ರ ಫೆ.03 ರಂದು ತವರು ಮನೆಯಲ್ಲಿ ಅಮ್ಮನ ಪ್ರತಿಷ್ಟಾಪನೆ, ರಾತ್ರಿ ಅಮ್ಮನವರ ಮೆರವಣಿಗೆ ನಂತರ ಗಂಡನ ಮನೆ ದೇವಸ್ಥಾನದಲ್ಲಿ ಅಮ್ಮನ ಪ್ರತಿಷ್ಟಾಪನೆ.
  • ಫೆ.11 ರಂದು ಅಮ್ಮನವರನ್ನು ವನಕ್ಕೆ ಬಿಡುವ ಶಾಸ್ತ್ರ.
  • ಫೆ.15 ರಂದು ಅಂಕೆ ತೆಗೆಯುವುದು ಮತ್ತು ಕೋಣವನ್ನು ಬಿಡುವ ಶಾಸ್ತ್ರ ನಡೆಯುತ್ತದೆ.

ಸಾರ್ವಜನಿಕರಿಗೆ ಮಾಹಿತಿ ಹಿನ್ನೆಲೆಯಲ್ಲಿ ಆರು ತಿಂಗಳ ಮೊದಲೇ ಜಾತ್ರಾ ದಿನಾಂಕ ಘೋಷಣೆ ಮಾಡಿದೆ ಎಂದು ಸಮಿತಿ ತಿಳಿಸಿದೆ.

ಇದನ್ನೂ ಓದಿ » ಜಿಲ್ಲೆಯಲ್ಲಿ ಸಡಗರ-ಸಂಭ್ರಮದ ಗೌರಿ ಗಣೇಶ ಹಬ್ಬ, ಮಾರುಕಟ್ಟೆಯಲ್ಲೀಗ ಗಣಪನದೇ ಮೆರಗು..

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

I consent to receive newsletter via email. For further information, please review our Privacy Policy

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...