
ಶಿವಮೊಗ್ಗ : ಶಿವಮೊಗ್ಗ ನಗರ ಸೇರಿದಂತೆ ಸುತ್ತ ಮುತ್ತ ಪ್ರದೇಶಗಳಲ್ಲಿ ರಾಶಿರಾಶಿ ಆಲಿಕಲ್ಲು ಸಹಿತ ಸುರಿದ ವರ್ಷಧಾರೆಗೆ ಎಲ್ಲೆಡೆ ತಂಪನೆ ವಾತಾವರಣ ಸೃಷ್ಟಿ ಆಗಿದೆ.
ಇದನ್ನೂ ಓದಿ ~ ಬಡವರ ಆರೋಗ್ಯದ ಜೊತೆ ಸರ್ಕಾರದ ಚೆಲ್ಲಾಟ, 7 ತಿಂಗಳಾದರೂ ಔಷಧಿ ಪೂರೈಕೆ ಇಲ್ಲ, ಸರ್ಕಾರದ ವಿರುದ್ಧ ಡಾ. ಧನಂಜಯ ಸರ್ಜಿ ವಾಗ್ದಾಳಿ
ಬುಧವಾರ ಸಂಜೆ 4.45 ರ ಸುಮಾರಿಗೆ ಶಿವಮೊಗ್ಗ ನಗರ ಸೇರಿದಂತೆ ಸುತ್ತಮುತ್ತ ಪ್ರದೇಶದಲ್ಲಿ ರಸ್ತೆಗಳು, ಮನೆಗಳು, ಉದ್ಯಾನ ಸೇರಿದಂತೆ ಹಲವು ಕಡೆ ಏಕಾಏಕಿ ಗುಡುಗು ಸಹಿತ ಧಾರಾಕಾರ ಆಲಿಕಲ್ಲು ಮಳೆ ಸುರಿದಿದೆ.
ಪ್ರತಿ ವರ್ಷ ಯುಗಾದಿ ಹಬ್ಬದ ಸಂದರ್ಭದಲ್ಲಿ ಮಳೆ ಬರುವುದು ವಾಡಿಕೆ. ಅದೇ ರೀತಿ ಈ ಬಾರಿಯು ಹಬ್ಬದ ಮುನ್ನವೇ ಮಳೆಯಾಗಿದೆ. ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನರಿಗೆ ಈ ಮಳೆ ತಂಪೆರೆದಿದ್ದರೂ, ಆಲಿಕಲ್ಲುಗಳ ಅಬ್ಬರಕ್ಕೆ ಸಾರ್ವಜನಿಕರು ಅಚ್ಚರಿಗೊಂಡಿದ್ದಾರೆ.

ಜನರು ಆಲಿಕಲ್ಲುಗಳನ್ನು ಕೈಯಲ್ಲಿ ಹಿಡಿದು ಸಂಭ್ರಮಿಸುತ್ತಿರುವ ಮತ್ತು ರಸ್ತೆಗಳಲ್ಲಿ, ಮನೆಯ ಮುಂದೆ ಮಂಜಿನಂತೆ ಹರಡಿರುವ ಆಲಿಕಲ್ಲು ರಾಶಿಗಳ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.
