
ಶಿವಮೊಗ್ಗ : ಜಿಲ್ಲಾ ವಿಶ್ವ ಹಿಂದೂ ಪರಿಷತ್, ಬಜರಂಗದಳದ ವತಿಯಿಂದ ರಾಮನವಮಿ ಹಾಗೂ ಹನುಮ ಜಯಂತಿ ಪ್ರಯುಕ್ತ ಬೃಹತ್ ಶೋಭ ಯಾತ್ರೆಯನ್ನು ನಾಳೆ (ಏ.07 ರ) ಸಂಜೆ 4.00 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಹ ಸಂಯೋಜಕ ಸುರೇಶ್ ಬಾಬು ಹೇಳಿದರು.
ಇದನ್ನೂ ಓದಿ » ನಾವೀನ್ಯಯುತ ಚಿಂತನೆ ಸಮಾಜ ಉನ್ನತಿಕರಣದ ಶಕ್ತಿ: ಅಶೀಷ್ ತ್ರಿಪಾಠಿ
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೋಭ ಯಾತ್ರೆಯು ಸಂಜೆ 4.00 ಗಂಟೆಗೆ ಗೋಪಿ ವೃತ್ತದಿಂದ ಆರಂಭಗೊಂಡು ಜೈಲ್ ಸರ್ಕಲ್, ಶಿವಮೂರ್ತಿ ವೃತ್ತ ಮಾರ್ಗವಾಗಿ ಉಷಾ ನರ್ಸಿಂಗ್ ಹೋಂ ವೃತ್ತದ ಬಳಿ ಸಮಾಪ್ತಿಯಾಗುತ್ತದೆ. ಶೋಭಯಾತ್ರೆಯಲ್ಲಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಶೋಭಾಯಾತ್ರೆಯಲ್ಲಿ ಏನೆಲ್ಲಾ ಕಾರ್ಯಕ್ರಮ ನಡೆಯಲಿವೆ ?
ಹಿಂದೂ ಧರ್ಮದ ಗಣ್ಯರು ವಿಶ್ವಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು, ಸಕಲ ಹಿಂದೂ ಧರ್ಮ ಅಭಿಮಾನಿಗಳು ಶೋಭಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಮೇಶ್ ಬಾಬು, ರಾಜೇಶ್ ಗೌಡ, ಶಶಿಕಲಾ, ಯೋಗೀಶ್ ನಾಯ್ಕ, ವಡಿವೇಲು ರಾಘವನ್ ಮುಂತಾದವರಿದ್ದರು.
ಇದನ್ನೂ ಓದಿ » ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ರೈಲಿಗೆ ಏ.08 ರಿಂದ ಅತ್ಯಾಧುನಿಕ LHB ಬೋಗಿಗಳ ಅಳವಡಿಕೆ
