
ಶಿವಮೊಗ್ಗ : ದೇವರಾಜ್ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭಾ.ಕೆ.ಆರ್. ಅವರ ನಿವಾಸ ಹಾಗೂ ಕಚೇರಿ ಸೇರಿದಂತೆ ಆರು ಕಡೆಗಳಲ್ಲಿ ಇಂದು (ಮಂಗಳವಾರ) ಲೋಕಾಯುಕ್ತ ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಲೋಕಾಯುಕ್ತ ದಾಳಿ ಮುಕ್ತಾಯವಾಗಿದ್ದು, ರೂ.3.88 ಕೋಟಿ ಮೌಲ್ಯದ ಆದಾಯಕ್ಕೂ ಮೀರಿದ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ » ಲೋಕಾಯುಕ್ತ ಅಧಿಕಾರಿಗಳ ದಿಢೀರ್ ದಾಳಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗೆ ಲೋಕಾ ಶಾಕ್!
ಆದಾಯಕ್ಕೂ ಮೀರಿದ ಕೋಟಿ ಕೋಟಿ ಆಸ್ತಿ :
ಲೋಕಾಯುಕ್ತ ದಾಳಿ ವೇಳೆ ಶೋಭಾ ಅವರ ಬಳಿ 2 ನಿವೇಶನ, 1 ವಾಸದ ಮನೆ, 4.08 ಎಕರೆ ಕೃಷಿ ಜಮೀನು ಪತ್ತೆಯಾಗಿದೆ. ಇವುಗಳ ಮೌಲ್ಯ ರೂ.1,76,38,000 ಎಂದು ಅಂದಾಜಿಸಲಾಗಿದೆ.
ಇನ್ನೂ ರೂ.1,63,500 ನಗದು, ರೂ.57,40,000 ಮೌಲ್ಯದ ಚಿನ್ನಾಭರಣ, ರೂ.1,23,20,000 ಮೌಲ್ಯದ ವಾಹನಗಳು, ರೂ.30,21,435 ಮೌಲ್ಯದ ಇತರೆ ವಸ್ತುಗಳು ಪತ್ತೆಯಾಗಿವೆ. ಚರ ಆಸ್ತಿಯ ಒಟ್ಟು ಮೌಲ್ಯ ರೂ.2,12,44,935 ಎಂದು ಅಂದಾಜಿಸಲಾಗಿದೆ. ಅದಾಯಕ್ಕು ಮೀರಿದ ಆಸ್ತಿ ಪತ್ತೆಯಾದ ಹಿನ್ನೆಲೆ ಶಿವಮೊಗ್ಗ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » Job News: ಮುತ್ತೂಟ್ ಮನಿ, ಮಾರುತಿ ಸುಜುಕಿ ಕಂಪನಿಗಳಿಂದ ನೇರ ಸಂದರ್ಶನ, ಯಾವಾಗ?