
ಶಿವಮೊಗ್ಗ : ಅರೆಬಿಳಚಿ ಗ್ರಾಮದಲ್ಲಿ ಎಕೆ ಕಾಲೊನಿಯ ರಸ್ತೆ ಅಕ್ರಮ ಒತ್ತುವರಿ ತೆರವು ಮಾಡುವಂತೆ ಆಗ್ರಹಿಸಿ ಡಿಎಸ್‌ಎಸ್ (ಅಂಬೇಡ್ಕರ್ ವಾದ) ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ ಶನಿವಾರ ಎರಡನೇ ದಿನಕ್ಕೆ ಕಾಲಿಟ್ಟಿತ್ತು.
ಇದನ್ನೂ ಓದಿ » ಉದ್ಯೋಗಾಕಾಂಕ್ಷಿಗಳಿಗೆ Good News: ಪ್ರತಿಷ್ಠಿತ ಖಾಸಗಿ ಕಂಪನಿಗಳಿಂದ ನೇರ ಸಂದರ್ಶನ, ಎಲ್ಲಿ, ಯಾವಾಗ?
ಭದ್ರಾವತಿ ತಾಲೂಕಿನ ಅರೆಬಿಳಚಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಆದಿ ಕರ್ನಾಟಕ ಕಾಲೊನಿಯ ರಸ್ತೆಗೆ ಮೀಸಲಿಟ್ಟ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ತೆರವು ಮಾಡದ ಗ್ರಾಪಂ ಪಿಡಿಒ ಹಾಗೂ ಭದ್ರಾವತಿ ತಾಪಂ ಇಒ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೈಗೊಂಡಿರುವ ಆಮರಣಾಂತ ಉಪವಾಸ ಸತ್ಯಾಗ್ರಹ ಶನಿವಾರ ಎರಡನೆ ದಿನಕ್ಕೆ ಕಾಲಿಟ್ಟಿದೆ.
ಅರೆಬಿಳಚಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಆದಿಕರ್ನಾಟಕ ಜನಾಂಗದವರು ಇರುವ ಮೂರು ಬೀದಿಗಳಿವೆ. ಇದರಲ್ಲಿ 3ನೇ ಬೀದಿಗೆ ರಸ್ತೆ ಇಲ್ಲ. ಇರುವ ನಿವೇಶನದಲ್ಲಿ ಅಣ್ಣ ತಮ್ಮಂದಿರು ವಿಭಾಗ ಮಾಡಿಕೊಂಡು ಮನೆ ಕಟ್ಟಿಕೊಂಡಿದ್ದಾರೆ. ಈ ಎಲ್ಲ ನಿವೇಶನಗಳಿಗೂ ಚಕ್ಕು ಬಂದಿಯಲ್ಲಿ ಉತ್ತರಕ್ಕೆ ಪರಿಶಿಷ್ಟ ಜಾತಿ ಕೇರಿಗೆ ಓಡಾಡುವ ರಸ್ತೆ ಎಂದಿದೆ. ಆದರೆ, ರಾಜಕೀಯ ಬಲ, ಹಣ ಬಲ ಉಪಯೋಗಿಸಿ ಒತ್ತುವರಿ ಮಾಡಿ ಕೊಂಡಿದ್ದಾರೆ. ಇದಕ್ಕೆ ಅಕ್ರಮ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಪರಿಶಿಷ್ಟ ಜಾತಿಯವರಿಗೆ ಓಡಾಡಲು ಕನ್ಸರ್‌ವೆನ್ಸಿ ರಸ್ತೆ ಇಲ್ಲದಂತೆ ಮಾಡಿ ಹಲವು ವರ್ಷಗಳಿಂದ ದೌರ್ಜನ್ಯ ನಡೆಸುತ್ತಾ ಬಂದಿದ್ದಾರೆ ಎಂದು ದೂರಿದರು.
ಮಾಡುವಂತೆ ತಾ.ಪಂ. ಇಒ ನ್ಯಾಯಾಲಯದಲ್ಲಿ ಮಾರ್ಚ್ 27 ರಂದು 15 ದಿನದಲ್ಲಿ ಒತ್ತುವರಿ ತೆರವು ನೋಟಿಸ್ ನೀಡಲಾಗಿದೆ. ಮೂರು ತಿಂಗಳಾದರೂ ಆದೇಶದ ಪಾಲನೆಯಾಗಿಲ್ಲ ಎಂದು ದೂರಿದರು.
ಟಿ.ಹೆಚ್.ಹಾಲೇಶಪ್ಪ, ಪರಮೇಶ್ವರ ಸೂಗೂರು, ಶೇಷಪ್ಪ ಹುಣಸೋಡು, ಹನುಮಂತಪ್ಪ, ಕೃಷ್ಣಪ್ಪ ಮಂಡ್ಲಿ, ಕೀರ್ತಿ ಪ್ರಸನ್ನ, ರುದ್ರೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ » ಸಹಕಾರ ಕ್ಷೇತ್ರದಲ್ಲಿ ಪಾರದರ್ಶಕತೆ ಅಗತ್ಯ : ಬಿ.ಎಸ್.ಯಡಿಯೂರಪ್ಪ