ಬಡಾವಣೆಗಳ ಮೂಲಸೌಕರ್ಯಗಳ ಕೊರತೆಯನ್ನು ನಿವಾರಿಸುವುದು ನಮ್ಮ ಅಜೆಂಡಾ: ಚೆನ್ನಿ

ಶಿವಮೊಗ್ಗ : ಕ್ಷೇತ್ರದ ಬಡ ಹಾಗೂ ಆಶ್ರಯ ರಹಿತ ಕುಟುಂಬಗಳ ಹಕ್ಕುಪತ್ರದ ಬೇಡಿಕೆಗೆ ನ್ಯಾಯ ಒದಗಿಸುವುದು ಹಾಗೂ ಬಡಾವಣೆಗಳ ಮೂಲಸೌಕರ್ಯಗಳ ಕೊರತೆಯನ್ನು ನಿವಾರಿಸುವುದು ನಮ್ಮ ನಗರಾಭಿವೃದ್ಧಿ ಯೋಜನೆಯ ಮಹತ್ವಾಕಾಂಕ್ಷಿ ಅಜೆಂಡಾವಾಗಿದೆ ಎಂದು ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.

ಇದನ್ನೂ ಓದಿ » ಸರ್ ಎಂ.ವಿ. ರಸ್ತೆಯಲ್ಲಿ ನಿರ್ಮಾಣಗೊಂಡ ಕಲಾ ಚಿತ್ರಣ ಲೋಕಾರ್ಪಣೆ

ಇಂದು ಬೆಳಗ್ಗೆ ಶಾಸಕರು ಕ್ಷೇತ್ರ ಪ್ರವಾಸ ಕೈಗೊಂಡು, ಶಿವಮೊಗ್ಗ ನಗರದ ವಾರ್ಡ್ ನಂಬರ್ 8ರ ವ್ಯಾಪ್ತಿಗೆ ಬರುವ ಹುಚ್ಚರಾಯ ಕಾಲೋನಿಗೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು. ಬಡಾವಣೆಯ ಗಲ್ಲಿಗಳಿಗೂ ಸಂಚರಿಸಿ, ಅಲ್ಲಿನ ಸಾರ್ವಜನಿಕ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಿದರು.

ಹಕ್ಕುಪತ್ರ ವಿತರಣೆಗೆ ಚುರುಕು : ಹುಚ್ಚರಾಯ ಕಾಲೋನಿಯಲ್ಲಿ ದಶಕಗಳಿಂದ ವಾಸಿಸುತ್ತಿದ್ದರೂ ತಾಂತ್ರಿಕ ಕಾರಣಗಳಿಂದ ಇಂದಿನವರೆಗೂ ಹಕ್ಕುಪತ್ರ ದೊರೆಯದ ನಿವಾಸಿಗಳ ಆತಂಕವನ್ನು ಶಾಸಕರು ಆಲಿಸಿದರು. ಈ ಸೂಕ್ಷ್ಮ ಸಮಸ್ಯೆಯನ್ನು ಕಂದಾಯ ಇಲಾಖೆಯ ನಿಯಮಾವಳಿಗಳ ಅನ್ವಯ ವಿಶೇಷ ಪ್ರಕರಣವೆಂದು ಪರಿಗಣಿಸಿ, ಅರ್ಹ ನಿವಾಸಿಗಳಿಗೆ ತಕ್ಷಣವೇ ಹಕ್ಕುಪತ್ರಗಳನ್ನು ವಿತರಿಸಲು ಕಂದಾಯ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಚರ್ಚಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದರು.

ಭೇಟಿಯ ವೇಳೆ ಪ್ರಮುಖರಾದ ಲಕ್ಷ್ಮಿಕಾಂತ್, ದಿನೇಶ್, ಪರಮೇಶ್ ನಾಯ್ಕ್, ವೆಂಕಟೇಶ ಗೌಡ, ಜಗದೀಶ್, ವಾಸು, ವೆಂಕಟೇಶ್ ನಾಯ್ಕ್ ಸೇರಿದಂತೆ ಹುಚ್ಚರಾಯ ಕಾಲೋನಿಯ ಭಾಜಪದ ಕಾರ್ಯಕರ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ » ನಾಳೆ ನಗರದ ಹಲವೆಡೆ ವಿದ್ಯುತ್ ವ್ಯತ್ಯಯ, ಎಲ್ಲೆಲ್ಲಿ?

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...