ಶಿಕಾರಿಪುರ: ಬಸ್ ವ್ಯವಸ್ಥೆ ಕಲ್ಪಿಸುವಂತೆ ಡಿಪೋ ವ್ಯವಸ್ಥಾಪಕರಿಗೆ ಮನವಿ

ಶಿವಮೊಗ್ಗ : ಶಿಕಾರಿಪುರ ತಾಲೂಕಿನ ದೊಡ್ಡತಾಂಡ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸುವಲ್ಲಿ ವಿಳಂಬ ಧೋರಣೆಯನ್ನು ತಾಳಿದರೆ, ಶಿಕಾರಿಪುರ ಡಿಪೋ ಎದುರು ಉಗ್ರ ಸ್ವರೂಪದ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಗ್ರಾಮಸ್ಥರು ಶಿಕಾರಿಪುರ ಘಟಕ ವ್ಯವಸ್ಥಾಪಕಿ ಅಂಬಿಕಾ ರವರಿಗೆ ಮನವಿಯಲ್ಲಿ ಎಚ್ಚರಿಸಿದ್ದಾರೆ.

ಇದನ್ನೂ ಓದಿ » ಗೃಹಲಕ್ಷ್ಮೀ” ಯೋಜನೆಗೆ ಇ-ಕೆವೈಸಿ ಕಡ್ಡಾಯವಲ್ಲ, ವದಂತಿಗಳಿಗೆ ಕಿವಿಗೊಡದಂತೆ ಮನವಿ

ಶಿಕಾರಿಪುರ ಪಟ್ಟಣಕ್ಕೆ ಶಿಕಾರಿಪುರ ತಾಲೂಕಿನ ದೊಡ್ಡ ತಾಂಡ, ಸದಾಶಿವಪುರ ಕ್ರಾಸ್, ವಡ್ಡಗೆರೆ, ಬೇಗೂರು, ಬಗನಕಟ್ಟೆ, ಬೈರನಹಳ್ಳಿ ಮತ್ತು ಆಪನಕಟ್ಟೆ ಗ್ರಾಮಗಳು ಕೂಗಳತೆಯ ದೂರದಲ್ಲಿದ್ದರೂ, ಅಲ್ಲಿನ ಸಾವಿರಾರು ಮಂದಿ ಗ್ರಾಮಸ್ಥರಿಗೆ ಸಾರಿಗೆ ಸಂಪರ್ಕವಿಲ್ಲದೆ ಅಭಿವೃದ್ಧಿಯ ಮುಖ್ಯವಾಹಿನಿಯಿಂದ ಅತಂತ್ರ ಸ್ಥಿತಿಯಲ್ಲಿ ಇರುವಂತಾಗಿದೆ. ತಮ್ಮ ಬದುಕಿನ ನೋವಿನ ಕೂಗು ಮತ್ತು ಆಡಳಿತದ ನಿರ್ಲಕ್ಷ್ಯದ ವಿರುದ್ಧದ ಅಂತಿಮ ಎಚ್ಚರಿಕೆ ಇದಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಗ್ರಾಮಗಳ ಜನರು ದೈನಂದಿನ ಬದುಕಿನ ಪ್ರತಿ ಸಣ್ಣ ಪುಟ್ಟ ಅವಶ್ಯಕತೆಗಳಿಗೂ ಶಿಕಾರಿಪುರ ಪಟ್ಟಣವನ್ನೇ ಆವಲಂಬಿಸಿದ್ದಾರೆ. ಆದರೆ ಸಾರಿಗೆ ವ್ಯವಸ್ಥೆಯಿಲ್ಲದೆ ಅನುಭವಿಸುತ್ತಿರುವ ಸಂಕಷ್ಟಗಳು ಅಸಹನೀಯ.

ರೈತರು ಮತ್ತು ಕಾರ್ಮಿಕರ ಸಂಕಷ್ಟ : ಬೆವರು ಸುರಿಸಿ ಬೆಳೆದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೆ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕೂಲಿ ಕಾರ್ಮಿಕರು ಕೆಲಸಕ್ಕೆ ಸಕಾಲದಲ್ಲಿ ತಲುಪಲಾಗದೆ ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳುತ್ತಿದ್ದಾರೆ.

ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ : ಶಿಕ್ಷಣವೇ ಬದುಕಿನ ದಾರಿ ಎಂದು ನಂಬಿರುವ ಮಕ್ಕಳು, ಸಾರಿಗೆ ಸೌಲಭ್ಯವಿಲ್ಲದೆ ದೂರದ ಪಟ್ಟಣಕ್ಕೆ ಸಕಾಲಕ್ಕೆ ತಲುಪಲಾಗದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ರೋಗಿಗಳು ಮತ್ತು ವೃದ್ಧರ ನರಕಯಾತನೆ : ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳಲು ವಾಹನವಿಲ್ಲದೆ, ಅನೇಕ ರೋಗಿಗಳು ಮತ್ತು ವೃದ್ಧರು ಜೀವನ್ಮರಣದ ಹೋರಾಟ ನಡೆಸಿದ ದಾರುಣ ಘಟನೆಗಳು ಈ ಗ್ರಾಮಗಳಲ್ಲಿ ನಡೆದಿವೆ. ಇದು ನಾಗರಿಕ ಸಮಾಜವೇ ತಲೆತಗ್ಗಿಸಬೇಕಾದ ವಿಷಯವಾಗಿದೆ.

ಪ್ರತಿದಿನದ ಅವಲಂಬನೆ ಪೊಲೀಸ್ ಠಾಣೆಯ ಕೆಲಸವಿರಲಿ, ಸಂತೆಗೆ ಹೋಗುವುದಿರಲಿ, ಕಚೇರಿ ಕೆಲಸಗಳಿಗಿರಲಿ ಅಥವಾ ಆರೋಗ್ಯ ತಪಾಸಣೆಯಿರಲಿ-ಪ್ರತಿ ಕ್ಷಣವೂ ಶಿಕಾರಿಪುರ ಪಟ್ಟಣವನ್ನು ಅವಲಂಬಿಸಿರುವ ಗ್ರಾಮಸ್ಥರು ಬಸ್ ಸೌಲಭ್ಯವಿಲ್ಲದೆ ನರಕಯಾತನೆ ಅನುಭವಿಸುತ್ತಿರುವುದಾಗಿ ತಿಳಿಸಿದ್ದಾರೆ.

ಸುರಕ್ಷತೆ ಮತ್ತು ಭದ್ರತೆ : ಅಪನಕಟ್ಟೆ ವಡಗೆರೆಯವರು ಹೊಸನಗರ ಕ್ರಾಸ್ ಅಥವಾ ಬೇಗೂರಿನಲ್ಲಿ ಬಸ್ ಇಳಿದು ಮೈಲುಗಟ್ಟಲೆ ಕತ್ತಲಿನಲ್ಲಿ ನಡೆದುಕೊಂಡು ಹೋಗಬೇಕಿದೆ. ದೊಡ್ಡತಾಂಡ ಮಾರ್ಗದಲ್ಲಿ ಪುರಸಭೆಯ ಘನತ್ಯಾಜ್ಯ ನಿರ್ವಹಣಾ ಘಟಕದ ಸಮೀಪದ ಬೀದಿ ನಾಯಿಗಳ ಮಾರಣಾಯಕ ಹಾವಳಿಯಿಂದಾಗಿ ಜನರು ಭಯದ ನೆರಳಿನಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಸುರಕ್ಷತೆಯ ವಿಷಯದಲ್ಲಿ ಈಗಾಗಲೇ ನಡೆದಿರುವ ಅಹಿತಕರ ಘಟನೆಗಳು ನಮ್ಮ ಮನಸ್ಸನ್ನು ಕಲಕುತ್ತಿವೆ. ನಾವು ಈ ಹಿಂದೆಯೂ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಸಹಾ ಕಚೇರಿಯು ಅವುಗಳನ್ನು ಕೇವಲ ಕಸದ ಬುಟ್ಟಿಗೆ ಸೇರಿಸುತ್ತಾ ಬಂದಿರುವುದು ನಮಗೆ ತೀವ್ರ ಬೇಸರ ಮತ್ತು ಆಕ್ರೋಶವನ್ನು ಉಂಟುಮಾಡಿದೆ. ಇದು ನಿಮಗೆ ಸಲ್ಲಿಸುತ್ತಿರುವ ಅಂತಿಮ ಎಚ್ಚರಿಕೆ ಪತ್ರ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಇನ್ನು ಮುಂದೆ ಈ ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸುವ ವಿಷಯದಲ್ಲಿ ವಿಳಂಬ ಧೋರಣೆಯನ್ನು ತಾಳಿದರೆ, ನಾವು ಶಿಕಾರಿಪುರ ಡಿಪೋ ಎದುರು ಉಗ್ರ ಸ್ವರೂಪದ ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಅಂದು ನಡೆಯುವ ಯಾವುದೇ ಕಾನೂನು-ಸುವ್ಯವಸ್ಥೆಯ ಸಮಸ್ಯೆ ಅಥವಾ ಸಾರ್ವಜನಿಕ ಆಡಚಣೆಗೆ ಸಂಪೂರ್ಣವಾಗಿ ನಿಮ್ಮ ಕಚೇರಿಯ ನಿರ್ಲಕ್ಷ್ಯವೇ ನೇರ ಹೊಣೆಯಾಗುತ್ತದೆ. ಮಾನವೀಯ ದೃಷ್ಟಿಯಿಂದ ಕೂಡಲೇ ನಮ್ಮ ಬೇಡಿಕೆಯನ್ನು ಈಡೇರಿಸಿ, ನಮ್ಮ ಜೀವನದಲ್ಲಿ ಬೆಳಕು ಮೂಡಿಸಿ. ಸಕಾರಾತ್ಮಕ ಸ್ಪಂದನೆಯನ್ನು ನಿರೀಕ್ಷಿಸುತ್ತಿರುವುದಾಗಿ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮದ ಪವನ ನಾಯ್ಕ್, ಶ್ರೀಕಾಂತ್ ನಾಯ್ಕ್ ಮನು ನಾಯ್ಕ್. ಕಾಂತರಾಜ್ ನಾಯ್ಕ್ ನಾರಾಯಣ, ಚೇತನ್ ಕುಮಾರ್. ಮಹಿಂದ್ರ ವಿನೋದ್. ಅನಿಲ್. ಧನರಾಜ್. ದರ್ಶನ್ ಹಾಗೂ ದೊಡ್ಡ ತಾಂಡ, ವಡ್ಡಿಗೆರೆ ತಾಂಡದ ಹಲವು ಯುವಕರು ಉಪಸ್ಥಿತರಿದ್ದರು.

ಇದನ್ನೂ ಓದಿ » ಸಿಟಿ ಬಸ್ ಮಾಲೀಕರಿಗೆ ಎಚ್ಚರಿಕೆ ನೀಡಿದ ಸಂಚಾರ ಪೊಲೀಸರು, ಸಂಚಾರ ನಿಯಮ‌‌ ಪಾಲನೆ ಕಡ್ಡಾಯ

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...