ಕ್ರಿಯಾಶೀಲತೆಗೆ ಯೋಗವೇ ಬುನಾದಿ | ಯೋಗದಿಂದಾಗುವ ಪ್ರಯೋಜನಗಳೇನು?

ಯೋಗ ವಿದ್ಯೆ ಎಂಬುದೊಂದು ಮಹಾಸಾಗರವಿದ್ದಂತೆ, ಸಾಗರದ ಮೇಲೆ ಅದರ ಸೌಂದರ್ಯವನ್ನು ಅರಿಯಬಹುದಾದರೂ ಅದರ ಸಮೃದ್ಧತೆ, ಸಂಪತ್ತು ಇರುವುದು ಅದರ ತಳಪಾಯದಲ್ಲಿ, ಅದೇ ರೀತಿ ಯೋಗದ ಮಹತ್ವವನ್ನರಿಯಲು ಆಳವಾಗಿ ಇಳಿದು ಅಧ್ಯಯನ ಮಾಡಬೇಕು. ಆಗ ಮಾತ್ರ ಯೋಗ ವಿದ್ಯೆಯ ಒಂದೊಂದು ದಿವ್ಯ ರತ್ನಗಳನ್ನು ಪೊಂದಲು ಸಾಧ್ಯ.

ಯೋಗವು ಭಾರತದಲ್ಲಿ ಪ್ರಾಚೀನ ದೈಹಿಕ, ಆಧ್ಯಾತ್ಮಿಕ ಮತ್ತು ಮಾನಸಿಕ ಅಭ್ಯಾಸವಾಗಿ ಹುಟ್ಟಿಕೊಂಡಿತು. ಜಗತ್ತಿನಾದ್ಯಂತ ಭಾರತದ ಪ್ರಾಚೀನ ಯೋಗವನ್ನು ಅಚೆರಣೆಯಲ್ಲಿ ತರುವ ಒಂದು ಸಾರ್ಥಕ ಪ್ರಯತ್ರ ಜೂನ್ 21 ಅಂತರಾಷ್ಟ್ರೀಯ ಯೋಗ ದಿನಾಚರಣೆ ಮನುಷ್ಯ ಮಾನವನಾಗಲು, ಮಾನವ ದೇವಮಾನವನಾಗಲು ಅತಿ ಸಹಜ ಉಪಾಯ ಯೋಗ, ಶರೀರ, ಆತ್ಮ, ಮನಸ್ಸು, ಬುದ್ಧಿ ಹಾಗೂ  ಸರಿಯಾದ ಉಸಿರಾಟದ ಪ್ರಯೋಗ ಮಾಡಿ ಸ್ವಾಸ್ತ್ಯ ಜೀವನ ಹೊಂದಲು ಯೋಗವೇ ಪರಿಹಾರ, ಯೋಗದಿಂದ ಮನಸ್ಸು-ದೇಹದ ಆಲಸ್ಯ ದೂರವಾಗುವುದು. ಯೋಗದಿಂದ ರೋಗದ ಭಯವಿಲ್ಲ. ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ರೋಗಗಳನ್ನು ದೂರ ಮಾಡುವ, ದೇಹಕ್ಕೆ ನವ ಚೈತನ್ಯವನ್ನು ನೀಡುವ ಶಕ್ತಿ ಮತ್ತು ಪ್ರಭಾವಶಾಲಿ ಸಹಜ ಚಿಕಿತ್ಸೆ ಎಂದರೆ ಯೋಗ.

ಬಹಳಷ್ಟು ಜನರಲ್ಲಿ ಧ್ಯಾನವೇ ಬೇರೆ, ಯೋಗವೇ ಬೇರೆ ಎಂಬ ತಪ್ಪು ಅಭಿಪ್ರಾಯವಿದೆ. ಆದರೆ ಅದು ಸರಿಯಲ್ಲ. ಧ್ಯಾನ ಯೋಗದ ಒಂದು ಭಾಗ. ಯೋಗವು ಧ್ಯಾನಸ್ಥವಾಗಿರಬೇಕು. ಇಲ್ಲವಾದರೆ ಅದು ಮತ್ತೊಂದು ದೈಹಿಕ ವ್ಯಾಯಾಮದಂತೆ ಆಗುತ್ತದೆ. ಯೋಗಭ್ಯಾಸವು ದೈಹಿಕ ಮತ್ತು ಮಾನಸಿಕ ದೃಢತೆಗೆ ಸಹಕಾರಿ.

ಶರೀರಕ್ಕೆ ಬರುವ ರೋಗಗಳಿಗೆ ಹಲವು ಚಿಕಿತ್ಸಾ ವಿಧಾನಗಳು, ಹಲವು ಬಗೆಯ ಔಷಧಗಳು ಇದ್ದು ಇವೆಲ್ಲವನ್ನೂ ಹಣದಿಂದಲೇ ಪಡೆಯಬೇಕಾಗಿದೆ. ವರ್ತಮಾನದ ಆಧುನಿಕ ಜೀವನ ಶೈಲಿ, ಆಧುನಿಕ ಆಹಾರ ಪದಾರ್ಥಗಳು, ಆಕರ್ಷಕ ಜಾಹಿರಾತುಗಳು, ಮಾನವನಲ್ಲಿ ಮನೋವಿಕಾರಗಳನ್ನು ಸೃಷ್ಟಿ ಮಾಡಿ ಆಶಾಂತರು, ಅನಾರೋಗ್ಯವಂತರನ್ನಾಗಿಸಿ ಪ್ರತಿಕ್ಷಣ ಒತ್ತಡ, ಭಯ, ಆತಂಕ, ನಿರಾಸೆಯಲ್ಲಿ ಬದುಕುವಂತೆ ಮಾಡಿದೆ. ಈ ಎಲ್ಲಾ ಅಡ್ಡಿ ಆತಂಕಗಳ ನಿವಾರಣೆಗೆ ದಿವ್ಯ ಔಷಧ ಯೋಗ.

ಅಂತರಾಷ್ಟ್ರೀಯ ಯೋಗ ದಿನವು ಯೋಗಾಭ್ಯಾಸದ ಹಲವಾರು ಪ್ರಯೋಜನಗಳ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಬಗ್ಗೆ ಅರಿವು ಮೂಡಿಸಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪ್ರಪಂಚದಾದ್ಯಂತದ ಜನರನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದು ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದ ಪ್ರಾಮುಖ್ಯತೆಯ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ.

ಯೋಗವು ದೇಹ ಮತ್ತು ಮನಸ್ಸಿಗೆ ಕಲಿಕೆ ಕಠಿಣತೆಯಿಂದ ವಿಶ್ರಾಂತಿ ಪಡೆಯಲು ಸಮಯವನ್ನು ನೀಡುತ್ತದೆ. ಯೋಗಭ್ಯಾಸ ಮಾಡಲು ಬೇಕಾಗುವುದು ದಿನಕ್ಕೆ ಕೆಲವು ನಿಮಿಷಗಳು ಮಾತ್ರ ಆದರೆ ಜನಕ್ಕಿರುವ ಸಮಸ್ಯೆ ಸಮಯದಲ್ಲ, ಮನಸ್ಸಿನ ಸಂಕಲ್ಪದ್ದು.

ಒತ್ತಡವನ್ನು ಕಡಿಮೆ ಮಾಡುವುದು ಮತ್ತು ಮನಸ್ಸನ್ನು ವಿಶ್ರಾಂತಿ ಮಾಡುವುದರ ಜೊತೆಗೆ ಯೋಗವು ವ್ಯಕ್ತಿಯ ಏಕಾಗ್ರತೆಯನ್ನು ಸುಧಾರಿಸುತ್ತದೆ. ಇದು ಜನರಿಗೆ ತುಂಬಾ ಸಹಾಯಕವಾಗಿದೆ. ಇದು ಮನಸ್ಸನ್ನು ಆರೋಗ್ಯವಾಗಿರಿಸುತ್ತದೆ ಮತ್ತು ಭಿನ್ನತೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

ಅಷ್ಟೇ ಅಲ್ಲ, ಯೋಗ ಮತ್ತು ಧ್ಯಾನವು ನಡವಳಿಕೆಯ ಸಮಸ್ಯೆಗಳನ್ನು ಸಹ ಕಡಿಮೆ ಮಾಡುತ್ತದೆ. ಯೋಗದ ಅಭ್ಯಾಸವು ಒಟ್ಟಾರೆ ಯೋಗಕ್ಷೇಮ ಮತ್ತು ಮನಸ್ಸು, ದೇಹ ಮತ್ತು ಆತ್ಮದ ನಡುವೆ ಸಾಮರಸ್ಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಯೋಗಭ್ಯಾಸವು ದೇಹ ಮತ್ತು ಪ್ರಜ್ಞೆಯ ಒಕ್ಕೂಟವನ್ನು ಸಂಕೇತಿಸುತ್ತದೆ.

| ಅಮೃತ.ಕೆ ಶಿವಮೊಗ್ಗ

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

I consent to receive newsletter via email. For further information, please review our Privacy Policy

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...