
ಶಿವಮೊಗ್ಗ : ‘ಶಿವನ ತುರುಬಿಗೆ ಪಂಜರದ ಗಿಳಿ ಹಾರಿತು ಎಚ್ಚರ’. ಇದು ಈ ಬಾರಿಯ ಮೈದೊಳಲು ಗ್ರಾಮದ ಹನುಮಂತ ದೇವರ ಕಾರ್ಣಿಕ ಭವಿಷ್ಯವಾಗಿದೆ.
ಪ್ರತಿ ನಾಗರ ಪಂಚಮಿಯಂದು ಇಲ್ಲಿ ಕಾರ್ಣಿಕ ನಡೆಯಲಿದೆ. ವ್ಯಕ್ತಿಯೊಬ್ಬರ ಮೈಮೇಲೆ ಹನುಮಂತ ದೇವರು ಆಹಾವನೆಯಾಗಿ ಪಿಳ್ಳೆಮಟ್ಟಿ ಗುಡ್ಡದಲ್ಲಿ ಕಾರ್ಣಿಕ ನುಡಿಯಲಿದೆ. ಕಂಬವೇರಿ ಜೋರಾಗಿ ಕಾರ್ಣಿಕ ಭವಿಷ್ಯ ನುಡಿಯಲಾಗುತ್ತದೆ. ಇದರ ಆಧಾರದಲ್ಲಿಯೇ ಇಲ್ಲಿನ ಸುತ್ತಮುತ್ತಲಿನ ಗ್ರಾಮದ ಜನರು ಕೃಷಿ ಚುಟುವಟಿಕೆ ನಡೆಸುವುದು ವಾಡಿಕೆ.
Suddispot whatsapp group ಗೆ ಸೇರಲು https://chat.whatsapp.com/Elg9Rs299CZCthsWMjcDDr?mode=ac_t
ಈ ಬಾರಿಯ ಕಾರ್ಣಿಕದಲ್ಲಿ ಶಿವನ ತುರುಬಿಗೆ ಪಂಜರದ ಗಿಳಿ ಹಾರಿತು ಎಚ್ಚರ ಎಂದು ಭವಿಷ್ಯ ನುಡಿಯಲಾಗಿದೆ. ಈ ಬಾರಿ ಮುಂಗಾರು ಮಳೆಗಿಂತಲು ಹಿಂಗಾರು ವ್ಯಾಪಕವಾಗಿರಬಹುದು. ರಾಜಕೀಯದಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ನಡೆಯಲಿದೆ. ಕೊನೆಗೆ ಎಚ್ಚರಿಕೆ ಎಂದು ಹೇಳಿರುವುದರಿಂದ ಪಕೃತಿ ವಿಕೋಪಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಗ್ರಾಮದ ಹಿರಿಯರು ಕಾರ್ಣಿಕವನ್ನು ವಿಶ್ಲೇಷಿಸಿದ್ದಾರೆ.
ಪಿಳ್ಳೆಮಟ್ಟಿಯ ಹನುಮಂತ ದೇವರು, ಪರಶುರಾಮ, ಲಕ್ಷ್ಮೀದೇವಿ, ಶ್ರೀರಾಮ ದೇವರುಗಳ ಉತ್ಸವ ಮೂರ್ತಿಗಳಿಗೆ ಕಾರ್ಣಿಕ ಸಂದರ್ಭ ಪೂಜೆ ಸಲ್ಲಿಸಲಾಯಿತು.
ಇದನ್ನೂ ಓದಿ ⇒ ವ್ಯಾಘ್ರ ಗಾಂಭೀರ್ಯ ನಡೆ ಬಲು ಆಕರ್ಷಣೀಯ….