
ಶಿವಮೊಗ್ಗ : ಶರಾವತಿ ಮುಳುಗಡೆ ಸಂತ್ರಸ್ಥರ ಏಳು ದಶಕದ ಕನಸಾದ ಸೇತುವೆ ನಿರ್ಮಾಣದ ಬೇಡಿಕೆ ಈಡೇರಿದ ನಂತರ, ಕೆಎಸ್‌ಆರ್‌ಟಿಸಿಯ ಶಿವಮೊಗ್ಗ ವಿಭಾಗವು ಈಗ ಹೆಚ್ಚುವರಿ ಬಸ್ ಸೇವೆಗಳನ್ನು ಯೋಜಿಸುತ್ತಿದೆ. ಈ ಹಿಂದೆ ಸಿಗಂದೂರಿಗೆ ಕೇವಲ ಮೂರು ಬಸ್‌ಗಳು ಮಾತ್ರ ಇದ್ದವು.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸಾಗರದ ಅಂಬರಗೋಡ್ಲು ಮತ್ತು ಕಳಸವಳ್ಳಿ ಗ್ರಾಮ ಸಂಪರ್ಕಿಸುವ ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಿದ ಭಾರತದ ಎರಡನೇ ಅತಿದೊಡ್ಡ ಕೇಬಲ್ ಸೇತುವೆ ಉದ್ಘಾಟನೆಯ ನಂತರ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಸಿಗಂದೂರಿಗೆ ತಲುಪಲು ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಕೆಎಸ್‌ಆರ್‌ಟಿಸಿಯ ಶಿವಮೊಗ್ಗ ವಿಭಾಗವು ಈಗ ಹೆಚ್ಚುವರಿ ಬಸ್ ಸೇವೆಗಳನ್ನು ಯೋಜಿಸುತ್ತಿದೆ. ವರ್ಷವಿಡೀ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿದ್ದ ಸಿಗಂದೂರಿಗೆ ಇಲ್ಲಿಯವರೆಗೂ ಬೆಳಿಗ್ಗೆ ಬಸ್ ಸೇವೆ ಲಭ್ಯವಿತ್ತು.
ಇದೀಗ ಈ ಭಾಗಗಳಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ. ಈ ಹೊಸ ಮಾರ್ಗವು ದಿನವಿಡೀ ಸೇವೆಯೊಂದಿಗೆ ಹೆಚ್ಚುವರಿ ಹಳ್ಳಿಗಳನ್ನು ಸೇರಿಸುತ್ತದೆ. ಬಸ್ ಸೇವೆಗೆ ಅನುಗುಣವಾಗಿ ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯದ ಬಳಿ ಪಾರ್ಕಿಂಗ್ ವ್ಯವಸ್ಥೆಯನ್ನು ಹೆಚ್ಚಿಸಬೇಕಿದೆ.

ರಾತ್ರಿ 9.00 ಗಂಟೆಯವರೆಗೆ ದೇವಿ ದರ್ಶನಕ್ಕೆ ಅವಕಾಶ
ಇಷ್ಟು ವರ್ಷಗಳ ಕಾಲ ರಾತ್ರಿಯ ಸಮಯದಲ್ಲಿ ಲಾಂಚ್ ಪ್ರಯಾಣ ಸೇವೆ ಇಲ್ಲದ ಕಾರಣಕ್ಕೆ ಸಂಜೆ 7.30 ರವರೆಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈಗ ಸೇತುವೆಯಾದ ನಂತರ ರಾತ್ರಿ 9.00 ಗಂಟೆಯವರೆಗೂ ಚೌಡೇಶ್ವರಿ ತಾಯಿ ದರ್ಶನಕ್ಕೆ ದೇವಸ್ಥಾನ ಆಡಳಿತ ಮಂಡಳಿ ಅವಕಾಶ ಕಲ್ಪಿಸಿಕೊಟ್ಚಿದೆ. ಭಕ್ತರು ಇದರ ಉಪಯೋಗ ಪಡೆಯಬಹುದಾಗಿದೆ.
ಇದನ್ನೂ ಓದಿ ⇒ ಸಿಗಂದೂರು ಲಾಂಚ್ ಹೋಟೆಲ್ ಆಗಿ ಪರಿವರ್ತನೆ : ಬೇಳೂರು ಗೋಪಾಲಕೃಷ್ಣ