
ಶಿವಮೊಗ್ಗ : ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆ, ಗಾಳಿ ಇರುವುದರಿಂದ ಬೃಹತ್ ಮರಗಳು ಗಾಳಿ ರಭಸಕ್ಕೆ ಧರೆಗುರುಳುತ್ತಿವೆ. ಅಂತೆಯೇ ಇಂದು ಸಂಜೆ ಸುಮಾರಿಗೆ ಆಗುಂಬೆ ಘಾಟಿ ಫಾರೆಸ್ಟ್ ಚೆಕ್ ಪೋಸ್ಟ್ ಬಳಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ಕೆಲ ಸಮಯ ಸಂಚಾರಕ್ಕೆ ಅಡಚಣೆಯಾಗಿತ್ತು.

Agumbe Ghat: A huge tree has fallen – Traffic jam for some time
ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ, ಆಗುಂಬೆ ಮಾರ್ಗವಾಗಿ ಬಂದ ಆಂಬುಲೆನ್ಸ್‌ಗಳು ಶಿವಮೊಗ್ಗಕ್ಕೆ ಬರಲಾಗದೆ ಜಾಮ್ ಆಗಿ ನಿಲ್ಲುವಂತಾಗಿತ್ತು. ಆಂಬುಲೆನ್ಸ್‌ಗಳು ಮಾತ್ರವಲ್ಲದೆ, ಘಾಟಿ ಹತ್ತಿ ಮೇಲೆ ಬಂದ ವಾಹನಗಳು ಮತ್ತು ಘಾಟಿಯಿಂದ ಇಳಿಯಲು ಹೊರಟಿದ್ದ ವಾಹನಗಳು ಚೆಕ್ ಪೋಸ್ಟ್ ಬಳಿಯೇ ಸಿಲುಕಿದ್ದವು.
ಬೃಹತ್ ಗಾತ್ರದ ಮರವಾದ್ದರಿಂದ ಅದನ್ನು ತೆರವುಗೊಳಿಸುವುದು ಸುಲಭದ ಕೆಲಸವಾಗಿರಲಿಲ್ಲ. ಹೀಗಾಗಿ ವಾಹನ ಸವಾರರು ನೆರವಿಗೆಗಾಗಿ ಕಾಯುತ್ತಿದ್ದರು. ಸದ್ಯದ ಮಾಹಿತಿ ಪ್ರಕಾರ, ಬಿದ್ದ ಮರವನ್ನು ತೆರವುಗೊಳಿಸಲಾಗಿದೆ. ವಾಹನಗಳು ಸಂಚರಿಸುತ್ತಿವೆ ಎನ್ನಲಾಗುತ್ತಿದೆ.
ಇದನ್ನೂ ಓದಿ ⇒ ದೇಶ್ ನೀಟ್ ಅಕಾಡೆಮಿಗೆ ಪ್ರಥಮ ಹಂತದಲ್ಲೇ ಉತ್ತಮ ಫಲಿತಾಂಶ : ಅವಿನಾಶ್