
ಶಿವಮೊಗ್ಗ : ಶಿವಮೊಗ್ಗ ನಗರದ ವಾತ್ಸಲ್ಯ ಆಟೋ ನಿಲ್ದಾಣದ ಆಟೋ ಚಾಲಕರಾದ ಹರೀಶ್ ಬಿನ್ ಹನುಮಂತಪ್ಪ, ಗೊಂಧಿ ಚಟ್ನಳ್ಳಿ ಇವರ ಆಟೋದಲ್ಲಿ ಮಂಗಳವಾರ (ನ.11 ರಂದು) ಪ್ರಯಾಣಿಕರೊಬ್ಬರು ತಮ್ಮ ಬ್ಯಾಗನ್ನು ಆಟೋದಲ್ಲೇ ಬಿಟ್ಟು ಹೋಗಿದ್ದು, ಆಟೋ ಚಾಲಕರು ಆ ಬ್ಯಾಗ್ ನ್ನು ಪಶ್ಚಿಮ ಸಂಚಾರ ಪೊಲೀಸ್ ಠಾಣೆಗೆ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಆ ಬ್ಯಾಗಿನಲ್ಲಿದ್ದ ದಾಖಲಾತಿ ಆಧಾರದ ಮೇಲೆ ಬ್ಯಾಗಿನ ಮಾಲೀಕರಾದ ನಕ್ಷ ಬಿನ್ ಮಾಲತಿ ತೀರ್ಥಹಳ್ಳಿ ಇವರಿಗೆ ಕರೆ ಮಾಡಿ, ಆ ಬ್ಯಾಗಿನಲ್ಲಿದ್ದ ರೂ.13,500/- ಗಳು ಮತ್ತು ದಾಖಲಾತಿಗಳು, ಇತರೆ ವಸ್ತುಗಳನ್ನು ವಾಪಸ್ ಪ್ರಯಾಣಿಕರಿಗೆ ಹಿಂದಿರುಗಿಸಿದ್ದಾರೆ.
ಆಟೋ ಚಾಲಕರಾದ ಹರೀಶ್ ಬಿನ್ ಹನುಮಂತಪ್ಪ, ಗೊಂಧಿ ಚಟ್ನಳ್ಳಿ ಇವರ ಪ್ರಾಮಾಣಿಕತೆಗೆ ಬ್ಯಾಗ್ ಮಾಲೀಕರು ಹಾಗೂ ಶಿವಮೊಗ್ಗ ನಗರದ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ » ಶಿವಮೊಗ್ಗ ನಗರದ ಈ ಭಾಗಗಳಲ್ಲಿ ವಾಹನಗಳ ಪಾರ್ಕಿಂಗ್ ನಿಷೇಧ, ಇಲ್ಲಿದೆ ಕಂಪ್ಲೀಟ್ ಲೀಸ್ಟ್