ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆಯಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ಭಾಗಿ, ಏನೆಲ್ಲಾ ಹೇಳಿದರು? ಇಲ್ಲಿದೆ

ಶಿವಮೊಗ್ಗ : ಶಿವಮೊಗ್ಗ ನಗರದ ವಿದ್ಯಾನಗರ ಭಾನು ಬೀದಿಯ ಶ್ರೀ ವೀರಕೇಸರಿ ವಿದ್ಯಾನಗರ್ ಕಾ ಸಾಮ್ರಾಟ್ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆಯಲ್ಲಿ ಕರ್ನಾಟಕದ ಹಿಂದೂ ಫೈರ್ ಬ್ರಾಂಡ್ ಎಂದೇ ಹೆಸರಾದಂತಹ ಬಸವನಗೌಡ ಪಾಟೀಲ್ ಯತ್ನಾಳ್  ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಈ ಭ್ರಷ್ಟ ಓಲೈಕೆಯ ರಾಜಕೀಯರನ್ನು ಕರ್ನಾಟಕದಿಂದ ಮುಕ್ತಗೊಳಿಸಬೇಕು. ಈ ಹಿಂದೆ  ಶಿವಮೊಗ್ಗ ನಗರದಲ್ಲಿ ನಡೆದಂತಹ ಗಣಪತಿ ವಿಸರ್ಜನೆಯ ವೇಳೆ ಕಲ್ಲು ತೂರಾಟ ಹಾಗೂ ಔರಂಗಜೇಬ್ ನ ಕಟೌಟ್, ಗಲಾಟೆ ಕರ್ನಾಟಕದ ಯಾವುದೇ ಮೂಲೆಯಲ್ಲೂ ಕೂಡ ಇರುವುದಿಲ್ಲ. ಇದು 2028 ರಿಂದ ಯಾವುದೇ ರೀತಿ ನಡೆಯುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಜೆಸಿಬಿ ಸರ್ಕಾರ ಇರುತ್ತದೆ. ಈ ಸರ್ಕಾರ ಬಂದ ನಂತರ ಗಣಪತಿ ಕೂರಿಸುವುದಕ್ಕಾಗಲಿ ಹಾಗೂ ಗಣಪತಿ ವಿಸರ್ಜನೆಗಾಗಲಿ ಯಾವುದೇ ರೀತಿ ರಕ್ಷಣಾ ಇಲಾಖೆಯಲ್ಲಿ ಅವಕಾಶ ಪಡೆಯುವ ಅವಶ್ಯಕತೆ ಇರುವುದಿಲ್ಲ ಹಾಗೂ ಗಣಪತಿ ಕೂರಿಸಿರುವ ಪ್ರತಿಯೊಂದು ಪೆಂಡಲಿಗೆ ಸರ್ಕಾರದ ವತಿಯಿಂದ 21 ಸಾವಿರ ರೂಪಾಯಿಗಳನ್ನು ಸ್ವತಃ ಅಧಿಕಾರಿಗಳೇ ಬಂದು ನೀಡುತ್ತಾರೆ ಎಂದರು.

ಮುಂಬರುವ ದಿನಗಳಲ್ಲಿ ನಾನು ಹಾಗೂ ಮಾಜಿ ಉಪಮುಖ್ಯಮಂತ್ರಿಯಾದಂತಹ ಕೆ.ಎಸ್.ಈಶ್ವರಪ್ಪನವರು ಶಿವಮೊಗ್ಗ ನಗರದಲ್ಲಿ ಶಿವಾಜಿ ಮಹಾರಾಜರ ಜಯಂತಿಯಿಂದ ಪ್ರತಿಯೊಂದು ಜಯಂತಿಯನ್ನು ಮಾಡಬೇಕೆಂದು ನಿರ್ಧರಿಸಿದ್ದೇವೆ. ಹಾಗೂ ಹಿಂದೆಂದೂ ಆಗದ ರೀತಿಯಲ್ಲಿ ಹಿಂದೂ ಸಮಾಜೋತ್ಸವ ಮಾಡಬೇಕೆಂದು ನಿರ್ಧರಿಸುತ್ತೇವೆ. ಮುಂಬರುವ ಚುನಾವಣೆಗೆ ಹೊಸ ಅಧ್ಯಾಯವನ್ನು ಶಿವಮೊಗ್ಗ ನಗರದಿಂದಲೇ ಪ್ರಾರಂಭ ಮಾಡೋಣ.

ಬಸವನಗೌಡ ಪಾಟೀಲ್ ಯತ್ನಾಳ್

2028 ರ ಚುನಾವಣೆಯಲ್ಲಿ ಯಾವುದೇ ಓಲೈಕೆ ಸರ್ಕಾರಗಳು ಬರುವುದಿಲ್ಲ. ಕರ್ನಾಟಕದಲ್ಲಿ ಇತಿಹಾಸ ಸೃಷ್ಟಿಸುವಂತೆ ಜೆಸಿಬಿ ಆಡಳಿತ ರಾಜ್ಯದಲ್ಲಿ ಬರಲಿದೆ. 150ಕ್ಕೂ ಹೆಚ್ಚು ಸ್ಥಾನವನ್ನು ಗಳಿಸಲಿರುವ ಪಕ್ಷವೊಂದು ಅಧಿಕಾರ ಹಿಡಿಯಲಿದೆ ಎಂದು ಹೇಳಿದರು.

ಈ ಸರ್ಕಾರ ಹಿಂದುಗಳ ಮೇಲೆ  ಹಲ್ಲೆ ಆದರೆ ಯಾವುದೇ ರೀತಿ ಪರಿಹಾರ ನೀಡುವುದಿಲ್ಲ. ಅದೇ  ಯಾವೊಬ್ಬ ಮುಸ್ಲಿಂ ಯುವಕರು ಗೋ ಕಳ್ಳತನ ಮಾಡಿದರೆ, ಅವರಿಗೆ ಸರ್ಕಾರದ ವತಿಯಿಂದ ಪರಿಹಾರ ನೀಡುತ್ತಾರೆ. ಹಾಗಾಗಿಮುಂಬರುವ ಚುನಾವಣೆಯಲ್ಲಿ ಮೊದಲು ಹಿಂದುಗಳ ರಕ್ಷಣೆ, ನಂತರ ಅಭಿವೃದ್ಧಿ ಕಾರ್ಯವನ್ನು ಮಾಡುತ್ತೇವೆ.

2028ರ ಚುನಾವಣೆಯಲ್ಲಿ ನಮ್ಮ ಸರ್ಕಾರ ಬಂದರೆ ರಕ್ಷಣಾ ಇಲಾಖೆಯ ಖಾಲಿ ಹುದ್ದೆಯನ್ನು ಭರ್ತಿ ಮಾಡಿ ರಕ್ಷಣಾ ಇಲಾಖೆಗೆ ಏಕೆ47 ಅನ್ನು ನೀಡುತ್ತೇವೆ. ಯಾವುದೇ ಒಬ್ಬ ಮುಸಲ್ಮಾನ್ ಪಾಕಿಸ್ತಾನ ಜಿಂದಾಬಾದ್ ಎನ್ನುವುದಾಗಿರಬಹುದು, ಹಿಂದುಗಳ ಮೇಲೆ ಹಲ್ಲೆ, ಗಣಪತಿ ವಿಸರ್ಜನೆ ಮೇಲೆ ಕಲ್ಲು ತೂರಾಟ, ಯಾವುದೇ ರೀತಿ ಅಹಿತಕರ ಘಟನೆ ನಡೆದರೂ ಸಹ ಆ ಕ್ಷಣದಲ್ಲಿ ಎನ್ಕೌಂಟರ್ ಮಾಡಬೇಕೆಂದು ಆದೇಶವನ್ನು ಮಾಡುತ್ತೇವೆ. ನಮ್ಮ ಈ ಜೆಸಿಬಿ ಸರ್ಕಾರದ ಮೊದಲನೇ ಗುರಿ ಹಿಂದುಗಳ ರಕ್ಷಣೆ ಬಿಟ್ಟರೆ ಬೇರೆ ಏನು ಇರುವುದಿಲ್ಲ ಎಂದು ಹೇಳಿದರು.

2028ರ ಚುನಾವಣೆಯಲ್ಲಿ ಹಿಂದುತ್ವ ಸರ್ಕಾರ ಕರ್ನಾಟಕಕ್ಕೆ ಬರುತ್ತದೆ. ಕರ್ನಾಟಕದ ವಿಧಾನ ಸಭೆಯ ಮುಂದೆ ಹಿಂದೂ ಪರವಾಗಿರುವಂತಹವರು ಮುಖ್ಯಮಂತ್ರಿ ಆಗುತ್ತಾರೆ. ಆ ಸರ್ಕಾರದ ಮೊದಲನೆಯ ಕೆಲಸ 11 ಜೆಸಿಬಿಯನ್ನು ಖರೀದಿ ಮಾಡಿ, ಯಾರ್ಯಾರು ಹಿಂದೂ ಸನಾತನ ಧರ್ಮದ ಬಗ್ಗೆ ಮಾತನಾಡುತ್ತಾರೋ ಹಾಗೂ ಪಾಕಿಸ್ತಾನ್  ಜಿಂದಾಬಾದ್ ಎಂದು ಕೂಗುತ್ತಾರೋ  ಹಾಗೂ ಭ್ರಷ್ಟಾಚಾರ ಮಾಡಿ ಹಣ ಲೂಟಿ ಮಾಡುತ್ತಾರೆ ಅವರ ಮನೆಗಳ ಮೇಲೆ, ಇದೆಲ್ಲದರ ನಂತರ ಜೆಸಿಬಿಯನ್ನು ಕರ್ನಾಟಕ ಅಭಿವೃದ್ಧಿ ಕಾಮಗಾರಿಗೆ ಬಳಸಲಾಗುತ್ತದೆ ಎಂದರು.

ಕರ್ನಾಟಕ ಸರ್ಕಾರದಲ್ಲಿ ಈಗಾಗಲೇ 2 ಲಕ್ಷ ಉದ್ಯೋಗಗಳು ಖಾಲಿ ಇದೆ. ಅದೇ ರೀತಿ ರಕ್ಷಣಾ ಇಲಾಖೆಯಲ್ಲಿ 18,000 ಉದ್ಯೋಗಗಳು ಖಾಲಿ ಇದೆ. 2028 ರ ಚುನಾವಣೆಯ ನಂತರ ಮೊದಲು ರಕ್ಷಣೆ ಇಲಾಖೆಯಲ್ಲಿರುವ ಖಾಲಿ ಹುದ್ದೆಯನ್ನು ಪೂರ್ಣ ಮಾಡಿ, ಅವರ ಕೈಯಲ್ಲಿ ಏಕೆ47 ನೀಡುತ್ತೇವೆ ಎಂದು  ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಕೆ.ಈ.ಕಾಂತೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

I consent to receive newsletter via email. For further information, please review our Privacy Policy

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...