
ಪೌರ ಕಾರ್ಮಿಕರ ಹೋರಾಟಕ್ಕೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ಹಲವು ಬಾರಿ ಚರ್ಚೆ ನಡೆಸಿದರೂ ಮಾಡುತ್ತೇವೆ ಮಾಡುತ್ತೇವೆ ಎಂದು ಭರವಸೆ ನೀಡುತ್ತಿದ್ದಾರೆ. ಆದರೆ ಇದುವರೆಗೂ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ. ಅನೇಕ ಸಂಗತಿಗಳಿಗೆ ಪರಿಹಾರ ಸಿಗಲು ಮುಖ್ಯ ಮಂತ್ರಿಗಳು ಮಧ್ಯ ಪ್ರವೇಶ ಮಾಡಬೇಕು ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇವತ್ತಿನಿಂದ ಪೌರಕಾರ್ಮಿಕರು ರಸ್ತೆಗಿಳಿದಿದ್ದಾರೆ. ಹೋರಾಟಕ್ಕೆ ಶಕ್ತಿ ತುಂಬುವ ಕೆಲಸವನ್ನು ಭಾರತೀಯ ಜನತಾ ಪಾರ್ಟಿಯಿಂದ ಮಾಡಲಾಗಿದೆ ಎಂದರು.
ಬೇಡಿಕೆಗಳನ್ನು ಈಡೇರಿಸುವುದು ರಾಜ್ಯದ ಜನತೆಯ ದೃಷ್ಟಿಯಿಂದ ಒಳ್ಳೆಯದು. ಅನೇಕ ಸಂಗತಿಗಳಿಗೆ ಪರಿಹಾರ ಸಿಗಲು ಮುಖ್ಯ ಮಂತ್ರಿಗಳು ಮಧ್ಯ ಪ್ರವೇಶ ಮಾಡಬೇಕಿದೆ. ಮೂಲ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೆಲಸ ಆಗಬೇಕಿದೆ. ಈ ನಡೆ ಸರ್ಕಾರಕ್ಕೆ ಗೌರವ ತರುವಂತಹದ್ದಲ್ಲ. ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾಗಿರುವ ತುಂಗಾ ನದಿ ದಂಡೆಯ ವಾಕಿಂಗ್ ಪಾತ್ ನ್ನು ಅಧಿಕಾರಿಗಳ ಜೊತೆ ಪರಿಶೀಲನೆ ಮಾಡುತ್ತೇನೆ. ಅಲ್ಲಿರುವ ಜಾಗದಲ್ಲಿ ವೇದಿಕೆ ಮಾಡಿದ್ದೇವೆ. ಬೇರೆ ಬೇರೆ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗುವುದು. ಕೆಲವೊಂದು ಜನರು ಉಪಯೋಗ ಮಾಡಿ ಹಾಳಾಗಿದೆ. ಕೆಲವೊಂದು ಉಪಯೋಗ ಮಾಡದೇ ಹಾಳಾಗಿವೆ ಎಂದರು.
ಮೆಗ್ಗಾನ್ ಆಸ್ಪತ್ರೆ ಸ್ಥಿತಿ ಶೋಚನೀಯವಾಗಿದೆ. ಬಾಣಂತಿಯರ ವಿಭಾಗದಲ್ಲಿ ಕಳೆದ ಮೂರು ದಿನಗಳಿಂದ ನೀರು ಇಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎನ್ನುವ ಪ್ರಶ್ನೆಗೆ ಮೆಗ್ಗಾನ್ ಆಸ್ಪತ್ರೆ ಸೂಪರಿಡೆಂಟ್ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.