
ಶಿವಮೊಗ್ಗ : ಆನ್ ಲೈನ್ ವ್ಯವಸ್ಥೆ ಬಲವಾದ ಮೇಲೆ ಈಗ ಸಣ್ಣಪುಟ್ಟ ಅಂಗಡಿಗಳ ವ್ಯಾಪಾರಸ್ಥರು ಕೂಡ ಗೂಗಲ್ ಪೇ, ಫೋನ್ ಪೇ, ಆನ್‌ಲೈನ್ ಪೇಮೆಂಟ್ ಮೂಲಕ ವಹಿವಾಟು ನಡೆಸುವುದು ಸಹಜವಾಗಿದೆ. ಮತ್ತು ಚಿಲ್ಲರೆಗಾಗಿ ಇದು ಅನೂಕುಲವೂ ಕೂಡ. ಆದರೆ ಬೆಂಗಳೂರಿನ ಸಾವಿರಾರು ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ (Commercial Tax Department) ನೊಟೀಸ್ ಜಾರಿ ಮಾಡಿರುವುದು ಶಿವಮೊಗ್ಗದಲ್ಲಿಯೂ ಸಣ್ಣಪುಟ್ಟ ವ್ಯಾಪಾರಿಗಳಲ್ಲಿ ಆತಂಕ ಸೃಷ್ಟಿ ಮಾಡಿದೆ.
ಆನ್ ಲೈನ್ ಪೇಮೆಂಟ್ ಗ್ರಾಹಕರು ಮತ್ತು ವ್ಯಾಪಾರಸ್ಥರಿಗೂ ಇಬ್ಬರಿಗೂ ಅನುಕೂಲವಾಗಿತ್ತು. ಆದರೆ ಈಗ ವಾಣಿಜ್ಯ ಇಲಾಖೆಯು ಬೆಂಗಳೂರಿನಲ್ಲಿ 40 ಲಕ್ಷ ರೂ. ವಹಿವಾಟು ನಡೆಸಿದ ಸಣ್ಣಪುಟ್ಟ ವ್ಯಾಪಾರಿಗಳಿಗೆ ಜಿಎಸ್ ಟಿ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿದೆ.

ಶಿವಮೊಗ್ಗದಲ್ಲಿ ಇದುವರೆಗೂ ಯಾವುದೇ ವ್ಯಾಪಾರಸ್ಥರಿಗೆ ನೋಟಿಸ್ ಬಂದಿಲ್ಲ, ಆ ಬಗ್ಗೆ ಯಾರು ಹೇಳಿಕೊಂಡಿಲ್ಲ. ಆದರೆ ಬೆಂಗಳೂರಿನಲ್ಲಿನ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿರುವ ಬೆನ್ನಲೇ ಶಿವಮೊಗ್ಗದಲ್ಲೂ ಸಾಕಷ್ಟು ವ್ಯಾಪಾರಿಗಳು ಗೂಗಲ್ ಪೇ, ಫೋನ್ ಪೇ, ಪೇಟಿಯಂ ಬಳಕೆಗೆ ಮಿತಿ ವಿಧಿಸಿಕೊಳ್ಳುತ್ತಿದ್ದಾರೆ. ನಗದು ಮೂಲಕ ವ್ಯಾಪಾರ ಆರಂಭಿಸಿದ್ದಾರೆ. ಆದರೆ ವಹಿವಾಟು ಹೆಚ್ಚಾದರೆ ಅಂದರೆ 40 ಲಕ್ಷ ರೂ.ಗಳನ್ನು ಮೀರಿದರೆ, ಅವರಿಗೆ ನೋಟಿಸ್ ಖಚಿತವೇ ಆಗಿದೆ.
ವ್ಯಾಪಾರ ವಹಿವಾಟಿನಲ್ಲಿ ಹಣ ಸಂದಾಯಕ್ಕೆ ಯುಪಿಐ ಬಳಸುತ್ತಿರುವ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ವಾಣಿಜ್ಯ ಇಲಾಖೆ ನೋಟೀಸ್ ಆತಂಕ ಸೃಷ್ಟಿ ಮಾಡಿದೆ. ಶಿವಮೊಗ್ಗದಲ್ಲೂ ಸಾಕಷ್ಟು ವ್ಯಾಪಾರಿಗಳು ಗೂಗಲ್ ಪೇ, ಫೋನ್‌ಪೇ, ಪೇಟಿಯಂ ಬಳಕೆಗೆ ಮಿತಿ ವಿಧಿಸಿಕೊಳ್ಳುತ್ತಿದ್ದಾರೆ. ನಗದು ಮೂಲಕ ವ್ಯಪಾರ ಆರಂಭಿಸಿದ್ದಾರೆ.
ಇದನ್ನೂ ಓದಿ ⇒ ಹೊಸನಗರದ ಅಬ್ಬಿ ಫಾಲ್ಸ್ ನಲ್ಲಿ ಕಾಲು ಜಾರಿ ಯುವಕ ನೀರು ಪಾಲು