‘ಡಿಡಿಡಿ’ ಸಿನಿಮಾ ರಿಲೀಸ್ ಗೆ ದಿನಾಂಕ ನಿಗದಿ, ದಿನಗಣನೆ ಆರಂಭ! 

‘ಡಿಡಿಡಿ’ (ಧೈರ್ಯಂ, ಧರ್ಮಂ, ದೇಶಂ) ಸಿನಿಮಾಕ್ಕೆ ಕಥೆ, ನಿರ್ದೇಶನ ಅಲ್ಲದೆ ಕೆಬಿಎಂ ಪ್ರೊಡಕ್ಷನ್ಸ್ ಅಡಿಯಲ್ಲಿ ಕೆ.ಬಿ.ಮಂಜುನಾಥ್ ನಿರ್ಮಾಣ ಮಾಡಿದ್ದಾರೆ. ಮಹೇಶ್ ಹಾಗೂ ಚಂದ್ರಣ್ಣ ಸಹ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ “DDD” ಚಿತ್ರದ ಟ್ರೇಲರ್ ಮತ್ತು ನಾಲ್ಕು ಹಾಡುಗಳ ಬಿಡುಗಡೆ ಕಾರ್ಯಕ್ರಮವು ಎಸ್‌ಆರ್‌ವಿ ಪ್ರಿವ್ಯೂ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. “ಡಿಡಿಡಿ” ಸಿನಿಮಾವು ನವೆಂಬರ್ 07 ರಂದು ಬಿಡುಗಡೆಯಾಗಲು ಸಜ್ಜಾಗಿದೆ.

ಶಿವಮೊಗ್ಗದ ಹುಡುಗಿ ನಾನು. ಡಿಡಿಡಿ ಚಿತ್ರದಲ್ಲಿ ನಾಯಕ ನಟಿಯಾಗಿ ನಟಿಸಿರುವುದು ಹೆಮ್ಮೆಯ ಸಂಗತಿ. ಈ ಚಿತ್ರದಲ್ಲಿ ನಾನು ಮುಗ್ಧ ಹುಡುಗಿಯಾಗಿ, ಪ್ರೀತಿಯಿಂದ ಸಂಬಂಧವನ್ನು ಹೇಗೆ ರಕ್ಷಿಸುವುದು ಮತ್ತು ತಂದೆ ಮಗಳ ಬಾಂಧವ್ಯ ಯಾವ ರೀತಿಯಲ್ಲಿ ಇರುತ್ತದೆ ಎಂಬುದನ್ನು ನೋಡಬಹುದು. ಪ್ರಸ್ತುತ ನಡೆಯುತ್ತಿರುವ ಘಟನೆಗಳಾದ ರಾಜಕೀಯ, ಹಳ್ಳಿ ಸೊಗಡು, ಪ್ರೀತಿ ಸೇರಿದಂತೆ ಎಲ್ಲವನ್ನೂ ಒಳಗೊಂಡಿರುವ ಪ್ಯಾಕೇಜ್ ಸಿನಿಮಾ ಆಗಿದೆ. ಇದೊಂದು ಅದ್ಭುತ ಕಥೆಯಾಗಿದ್ದು, ಈ ಕಥೆ ಎಲ್ಲರ ಮನಮುಟ್ಟುತ್ತದೆ ಎಂದು ಭಾವಿಸಿದ್ದೇನೆ. ನಮ್ಮಂತಹ ಹೊಸ ಪ್ರತಿಭೆಗಳಿಗೆ ನಿಮ್ಮೆಲ್ಲರ ಪ್ರೋತ್ಸಾಹ ಅಗತ್ಯ.

– ಗಗನ ಮಲ್ನಾಡ್, ಡಿಡಿಡಿ ಚಿತ್ರದ ನಾಯಕ ನಟಿ


ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು, ಇಲ್ಲಿಯವರೆಗೆ ಎರಡು ಕಿರುಚಿತ್ರಗಳನ್ನು ಮಾಡಿದ್ದೇನೆ. ಇದು ನನಗೆ ಮೊದಲ ಹಿರಿತೆರೆಯ ಅನುಭವ. ಸಾಮಾನ್ಯ ಪ್ರಜೆಯಾದವನು ಧೈರ್ಯ ಮಾಡಬೇಕು. ಅಧಿಕಾರಿಗಳು ಧರ್ಮವನ್ನು ಕಾಪಾಡಬೇಕು. ಯೋಧನಾದವನು ದೇಶವನ್ನು ಕಾಪಾಡಬೇಕು. ಇವುಗಳು ಸಮಾಜದ ಮೂರು ಅಂಗಗಳಾಗಿದೆ. ಅದಕ್ಕಾಗಿ ’DDD’ ಎಂದು ಶೀರ್ಷಿಕೆ ಇಡಲಾಗಿದೆ. ನಾವುಗಳು ಸಮಾಜವನ್ನು ಹೇಗೆ ನೋಡಿಕೊಳ್ಳಬೇಕು. ಅವಘಡಗಳು ಆದಾಗ ಅದನ್ನು ಯಾವ ರೀತಿ ಎದುರಿಸಬೇಕು ಎಂಬುದನ್ನು ಹೇಳಲಾಗಿದೆ. ಮಾನವಿಯತೆ, ಪ್ರೀತಿ, ಸಂಬಂಧಗಳ ಬೆಲೆ ಇನ್ನು ಮುಂತಾದವನ್ನು ಐದು ಹಾಡುಗಳಲ್ಲಿ ತೋರಿಸಲಾಗಿದೆ. ಇದು ಸಾರ್ವತ್ರಿಕ ವಿಷಯವಾಗಿರುವುದರಿಂದ ಐದು ಭಾಗಗಳಿಗೆ ಈಗಾಗಲೇ ಚಿತ್ರಕಥೆ ಸಿದ್ದಪಡಿಸಿದ್ದೇನೆ. ಮೊದಲನೆ ಭಾಗ ಇದಾಗಿರುತ್ತದೆ. ಇದಕ್ಕೆ ಮಾಧ್ಯಮದ ಸಹಕಾರ ಬೇಕೆಂದು ಕೋರಿಕೊಂಡರು.

ಅರುಣ್‌ ವೆಂಕಟರಾಜು ನಾಯಕನಾಗಿ ಎರಡನೇ ಅವಕಾಶ ಇದಾಗಿದ್ದು, ನಾಯಕಿಯಾಗಿ ಶಿವಮೊಗ್ಗದ ಗಗನ ಮಲ್ನಾಡ್, ಇನ್ಸ್‌ಪೆಕ್ಟರ್ ಆಗಿ ರಘು ಶಿವಮೊಗ್ಗ, ಉಳಿದಂತೆ ಚಾರ್ಲ್ಸ್ ಟೋನಿ, ಸುರೇಶ್‌ಬಾಬು, ಡಿ.ವಿ.ನಾಗರಾಜು, ಸುರೇಶ್‌ ಬಾಬು, ರೋಹಿಣಿ ಮುಂತಾದವರು ಅಭಿನಯಿಸಿದ್ದಾರೆ.

ಬಹದ್ದೂರ್ ಚೇತನ್‌ ಕುಮಾರ್, ಗಜೇಂದ್ರ, ಸಂಜಯ್ ಮತ್ತು ಲಕ್ಷ್ಮಣ್ ದಿನೇಶ್ ಸಾಹಿತ್ಯದ ಐದು ಗೀತೆಗಳಿಗೆ ಸೂರಜ್‌ ಜೋಯಿಸ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಎಸ್.ಕೆ.ಮಸ್ತಾನ್ ಷರೀಫ್, ಸಂಕಲನ ಧನುಷ್.ಎಲ್.ಬೇಡಿ ಅವರದಾಗಿದೆ. ಬೆಂಗಳೂರು, ಮಂಗಳೂರು, ಕೊಳ್ಳೆಗಾಲ ಗಡಿಭಾಗದಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಸಚಿತ್ ಫಿಲಿಂಸ್‌ನ ವೆಂಕಟ್‌ಗೌಡ ಸಾರಥ್ಯದಲ್ಲಿ ಮುಂದಿನ ತಿಂಗಳು (ನವೆಂಬರ್ 07 ರಂದು) ಸುಮಾರು 40 ಕೇಂದ್ರಗಳಲ್ಲಿ ಸಿನಿಮಾವು ತೆರೆ ಕಾಣಲಿದೆ.

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

I consent to receive newsletter via email. For further information, please review our Privacy Policy

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...