ದೇಶ್ ನೀಟ್ ಅಕಾಡೆಮಿಗೆ ಪ್ರಥಮ ಹಂತದಲ್ಲೇ ಉತ್ತಮ ಫಲಿತಾಂಶ : ಅವಿನಾಶ್

ಶಿವಮೊಗ್ಗ : ಪ್ರಸಕ್ತ ಸಾಲಿನ ನೀಟ್ ಪರೀಕ್ಷೆಯಲ್ಲಿ ಶಿವಮೊಗ್ಗದ ದೇಶ್ ನೀಟ್ ಆಕಾಡೆಮಿ ವತಿಯಿಂದ ಪರೀಕ್ಷೆಗೆ ಹಾಜರಾಗಿದ್ದ 150 ವಿದ್ಯಾರ್ಥಿಗಳಲ್ಲಿ 45 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ದೇಶ್ ನೀಟ್ ಆಕಾಡೆಮಿ ಪ್ರಥಮ ಹಂತದಲ್ಲೇ ಉತ್ತಮ ಫಲಿತಾಂಶ ಕಂಡಿದೆ ಎಂದು ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕ ಎ.ಆರ್.ಅವಿನಾಶ್ ತಿಳಿಸಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಆರಂಭವಾದ ದೇಶ್ ನೀಟ್ ಅಕಾಡೆಮಿಯಲ್ಲಿ 150 ವಿದ್ಯಾರ್ಥಿಗಳು 10 ತಿಂಗಳ ತರಬೇತಿ ಪಡೆದಿದ್ದು, ಪ್ರಥಮ ಬ್ಯಾಚ್‌ನಲ್ಲಿ ಪರೀಕ್ಷೆಗೆ ಹಾಜರಾಗಿದ್ದ 150 ವಿದ್ಯಾರ್ಥಿಗಳಲ್ಲಿ 45 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಇವರಲ್ಲಿ 35 ವಿದ್ಯಾರ್ಥಿಗಳು ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲಿದ್ದು, ಉಳಿದ 10 ವಿದ್ಯಾರ್ಥಿಗಳು ದಂತ ಹಾಗೂ ಆಯುರ್ವೇದ ಕಾಲೇಜುಗಳಲ್ಲಿ ಪ್ರವೇಶ ಪಡೆಯಲಿದ್ದಾರೆ ಎಂದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ನೀಟ್ ಪರೀಕ್ಷೆ ಅತ್ಯಂತ ಕಠಿಣವಾಗಿತ್ತು. ಹಾಗಾಗಿ ಒಟ್ಟು ಫಲಿತಾಂಶ ಸಾಕಷ್ಟು ಕಡಿಮೆಯಾಗಿದೆ. ಆದರೂ ಕೂಡ ಈ ವರ್ಷದಲ್ಲಿ ಮೆಡಿಕಲ್ ಸೀಟುಗಳ ಸಂಖ್ಯೆ ಹೆಚ್ಚು ಮಾಡಿರುವುದರಿಂದ ಕಡಿಮೆ ಅಂಕ ಪಡೆದವರಿಗೂ ಕೂಡ ಮೆಡಿಕಲ್ ಕೋರ್ಸ್‌ಗಳ ಸೀಟು ಸಿಗುವ ಸಾಧ್ಯತೆಗಳಿವೆ. ಕರ್ನಾಟಕದಲ್ಲಿ 900 ಮೆಡಿಕಲ್ ಸೀಟುಗಳು ಹೆಚ್ಚಳವಾಗಿವೆ ಎಂದರು.

ದೇಶ್ ನೀಟ್ ಅಕಾಡೆಮಿಯು ವೈದ್ಯರಾಗುವ ಕನಸುಗಳನ್ನು ನನಸು ಮಾಡುವತ್ತ ಹೆಜ್ಜೆ ಹಾಕುತ್ತಿದೆ. ಹಾಗಾಗಿ ಇಲ್ಲಿಯೇ ಹಾಸ್ಟೆಲ್ ವ್ಯವಸ್ಥೆ ಕೂಡ ಮಾಡಲಾಗಿದೆ. ಶಿವಮೊಗ್ಗದ ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಕ್ಕೆ ಶೇ.50 ರಷ್ಟು ರಿಯಾಯಿತಿ ನೀಡಲಾಗುವುದು. ಅತ್ಯಂತ ಬಡ ಮಕ್ಕಳಿಗೆ ಶುಲ್ಕದಲ್ಲಿ ರಿಯಾಯಿತಿ ಕೂಡ ನೀಡಲಾಗುವುದು.

– ಎ.ಆರ್.ಅವಿನಾಶ್, ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕರು


ವಿದ್ಯಾರ್ಥಿಗಳು ಸಾಧನೆ ಮಾಡಲು ಶ್ರಮಿಸಿದ ಅಕಾಡೆಮಿಯ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಅಭಿನಂದನೆ ಸಲ್ಲಿಸಿದ ಅವರು, 2026 ನೇ ಸಾಲಿನ ಹೊಸ ಬ್ಯಾಚ್‌ ಪ್ರವೇಶ ಆರಂಭವಾಗಿದ್ದು, ಶಿವಮೊಗ್ಗ ಮತ್ತು ಅಕ್ಕ-ಪಕ್ಕದ ಜಿಲ್ಲೆಗಳ ವಿದ್ಯಾರ್ಥಿಗಳು ಈ ಸದಾವಕಾಶ ಪಡೆಯುವಂತೆ ಕೋರಿದರು.

ಪ್ರವೇಶಾತಿ ಮತ್ತು ಮಾಹಿತಿಗಾಗಿ ದೂರವಾಣಿ ಸಂಖ್ಯೆ : 96638-61713, 70192-55688 ನ್ನು ಸಂಪರ್ಕಿಸಬಹುದಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪಸ್ ಕೋ-ಆರ್ಡಿನೇಟರ್ ವಿಜಯ್, ಜನರಲ್ ಮ್ಯಾನೇಜರ್ ಪ್ರದೀಪ್, ನಾಗರಾಜ್ ಆಚಾರಿ, ಡಿಸಿಲ್ವ ಉಪಸ್ಥಿತರಿದ್ದರು.

ಇದನ್ನೂ ಓದಿ ⇒ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾವು ಡಾರ್ಕ್ ಹ್ಯೂಮರ್ ಕ್ರೈಮ್ ಥ್ರಿಲ್ಲರ್ ಸಿನಿಮಾ: ರಾಜೇಶ್ ಕೀಳಂಬಿ 

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

I consent to receive newsletter via email. For further information, please review our Privacy Policy

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...