
ಶಿವಮೊಗ್ಗ : ಜಾಗತಿಕ ಮಟ್ಟದಲ್ಲಿ ಶ್ರೇಷ್ಠ ನಾಯಕರಾಗಿ ಗುರುತಿಸಿಕೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಭಿವೃಧ್ಧಿ ಪರ್ವದತ್ತ ದಾಪುಗಾಲು ಇಡುತ್ತಿದ್ದೇವೆ. ಇಡೀ ಜಗತ್ತು ಭಾರತದ ಕಡೆಗೆ ತಿರುಗಿ ನೋಡುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹರ್ಷ ವ್ಯಕ್ತಪಡಿಸಿದರು.
ಶನಿವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮೂರನೇ ಬಾರಿಗೆ ಕೇಂದ್ರ ಸರ್ಕಾರ ಆಡಳಿತ ತಂದು 11 ವರ್ಷ ಅಭಿವೃದ್ಧಿ ಪರ್ವ ಕಾರ್ಯ ನಡೆಸುತ್ತಿದೆ. ಇಡೀ ದೇಶ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ. ಮೋದಿಯವರು ಅನೇಕ ಸಾಧನೆ ಮಾಡಿ, ಭಾರತವನ್ನು ವಿಶ್ವ ಗುರುವನ್ನಾಗಿ ಮಾಡುವ ನಿಟ್ಟಿನಲ್ಲಿ ಕಾರ್ಯವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಯಶಸ್ಸಿನ ಬಗ್ಗೆ ಹೆಮ್ಮೆ ಇದ್ದು, ಹೊಸ ಸಂಕಲ್ಪದ ಜೊತೆಗೆ ಬರುವ ದಿನಗಳಲ್ಲಿ ಹೆಚ್ಚಿನ ಭರವಸೆಯನ್ನು ನೋಡುತ್ತಿದ್ದೇವೆ. ಇದರ ಅರ್ಥ ಮೋದಿಜಿಯವರ ಅಖಂಡತೆ ಸದೃಢತೆ. ಇದು ಮೋದಿಜಿಯವರ ಶತಕೋಟಿಗಳ ಭರವಸೆಯನ್ನು ಈಡೇರಿಸುವ ಭರವಸೆ ಇಟ್ಟುಕೊಂಡು ವಿಶೇಷವಾಗಿ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ಕೊಡಲಾಗಿದೆ ಎಂದರು.
ಸ್ವಾವಲಂಬಿ ಮತ್ತು ಆದ್ಯತೆಯ ಮೇರೆಗೆ ದೇಶದ ಕಟ್ಟಕಡೆಯ ವ್ಯಕ್ತಿಗೂ ಮೂಲಭೂತ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು. ದೇಶದ ನಾಯಕತ್ವ ಹಿಂದಿಗಿಂತ ಹೆಚ್ಚು ಬಲಿಷ್ಠವಾಗಿ ಹೋಗುತ್ತಿದೆ ಎಂದು ಮೋದಿಜಿಯವರ ನಾಯಕತ್ವದ ಮೈಲಿಗಲ್ಲಿನ ಸಾಧನೆಯನ್ನು ವಿವರಿಸಿದರು.
ವಿರೋಧ ಪಕ್ಷಗಳು ಸಹಜವಾಗಿ ಟೀಕೆ ಮಾಡಬಹುದು, ಸಿಟ್ಟನ್ನು ತೋರಬಹುದು ಆದರೆ, ಯಾವತ್ತೂ ಕೂಡಾ ಮೋದಿಜಿಯವರ ನಾಯಕತ್ವ ದುರ್ಬಲವಾಗಿದೆ ಎಂದು ಅನಿಸಿಕೆ ಬರಲು ಸಾಧ್ಯವಿಲ್ಲ. ಸ್ವಾತಂತ್ರ್ಯ ನಂತರ ಭಾರತದ ಅತ್ಯಂತ ಶಕ್ತಿಯುತ ಪ್ರಧಾನಿ ನರೇಂದ್ರ ಮೋದಿ ಎನುವುದನ್ನು ಇಡೀ ದೇಶ ಒಪ್ಪಿದೆ. ಅದಕ್ಕೆ ಸಾಕಷ್ಟು ಕಾರಣಗಳಿವೆ.
– ಬಿ.ವೈ.ರಾಘವೇಂದ್ರ, ಸಂಸದರು
ಕಪ್ಪು ಹಣದ ನಿರ್ಮೂಲನೆ, ರದ್ಧತಿಯ ಕ್ರಮವನ್ನು ದೇಶ ಗಮನಿಸಿದೆ. ದೇಶದ ಭವಿಷ್ಯದ ಬೆಳೆವಣಿಗೆಗೆ ದಿಕ್ಸೂಚಿಯಾಗಿದೆ. ಮೊನ್ನೆ ಪ್ರಧಾನಮಂತ್ರಿ ನೀಡಿರುವ 34.5 ಲಕ್ಷ ಕೋಟಿ ಬಜೆಟ್ ನಲ್ಲಿ ಸುಮಾರು 11 ಲಕ್ಷ ಕೋಟಿಯನ್ನು ಮೂಲಭೂತ ಸೌಲಭ್ಯಕ್ಕಾಗಿ ಹಾಗೂ ಕಲ್ಯಾಣ ಕಾರ್ಯಕ್ರಮಕ್ಕಾಗಿ ಆದ್ಯತೆ ನೀಡಿದೆ ಎಂದು ಶ್ಲಾಘಿಸಿದರು.
ಮೋದಿಜಿಯವರ ದೃಢವಾದ ನಿಲುವು ಅಭಿವೃಧ್ಧಿಯ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಲಾಗುತ್ತದೆ. ಸ್ವಾತಂತ್ರ್ಯ ನಂತರ ಇಂತಹ ಗೌರವಾನ್ವಿತ ನಾಯಕರನ್ನು ಹಾಗೂ ಅತ್ಯಂತ ಶಕ್ತಿಯುತ ಪ್ರಧಾನಿ ಮೋದಿಜಿಯವರನ್ನು ಕಂಡಿದ್ದೇವೆ. ದೇಶದ ಸದೃಢತೆಗೆ ಶಕ್ತಿ ತುಂಬುವ ಸಂಕಲ್ಪ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ನವರದು ಒಂದೇ ಅಜೆಂಡಾ :
ಕಾಂಗ್ರೆಸ್ ಸರ್ಕಾರ ಇರುವುದನ್ನು ಮುಚ್ಚಿಟ್ಟು ಇಲ್ಲದೆ ಇರುವುದನ್ನು ಹೇಳುತ್ತಿದ್ದಾರೆ. ಅವರದು ಇಂದೊದೆ ಅಜೆಂಡಾ. ಸರ್ಕಾರದ ವಕ್ರದೃಷ್ಟಿ ಬಿದ್ದಿದ್ದೆ ಹಾಗಾಗಿ ಈ ರೀತಿ ಮಾತನಾಡುತ್ತಾರೆ ಎಂದ ಅವರು, ಮೋದಿ ಸರ್ಕಾರ ಸುಮಾರು 5 ಲಕ್ಷ ಕೋಟಿಗಿಂತ ಹೆಚ್ಚು ಹಣವನ್ನು ನಮ್ಮ ರಾಜ್ಯಕ್ಕೆ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುತ್ತಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಾರ್ಯಕರ್ತರು ಮರಳಿ ಪಕ್ಷಕ್ಕೆ ಸೇರ್ಪಡೆಯಾದರು. ಅವರಿಗೆ ಶಾಲು ಹಾಕುವುದರ ಮೂಲಕ ಪಕ್ಷಕ್ಕೆ ಬರ ಮಾಡಿಕೊಳ್ಳಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಕೆ.ಜಗದೀಶ್, ಬಿಜೆಪಿ ನಗರ ಅಧ್ಯಕ್ಷ ಮೋಹನ್ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಧನಂಜಯ ಸರ್ಜಿ, ಎಸ್.ದತ್ತಾತ್ರಿ, ಸುರೇಖಾ ಮುರಳೀಧರ್, ಟಿ.ಡಿ.ಮೇಘರಾಜ್, ಎಸ್.ರಮೇಶ್, ವಿನ್ಸೆಂಟ್ ರೋಡ್ರಿಗಸ್, ಚಂದ್ರಶೇಖರ್, ಅಣ್ಣಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.