
ಶಿವಮೊಗ್ಗ : ಧರ್ಮಸ್ಥಳ ಬುರುಡೆ ಪ್ರಕರಣದ ಆರೋಪಿಯಾಗಿರುವ ಚಿನ್ನಯ್ಯನಿಗೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಶನಿವಾರ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡದ ಪೊಲೀಸರು ಚಿನ್ನಯ್ಯನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಕೋರ್ಟ್ ಚಿನ್ನಯ್ಯನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತು.
ಇದನ್ನೂ ಓದಿ » ಸಾಗರ-ತಾಳಗುಪ್ಪ ರೈಲು ಮಾರ್ಗ ಪರೀಶೀಲನೆ, ವಾಹನಗಳ ಒಡಾಟಕ್ಕೆ ತಾತ್ಕಾಲಿಕ ಬದಲಿ ಮಾರ್ಗ
ಕೋರ್ಟ್ ಆದೇಶದ ಅನ್ವಯ 15 ದಿನಗಳ ಎಸ್‌ಐಟಿ ಕಸ್ಟಡಿಯಲ್ಲಿದ್ದ ಚಿನ್ನಯ್ಯನನ್ನು ಶಿವಮೊಗ್ಗ ಜೈಲಿಗೆ ಕಳುಹಿಸಲು ಪೊಲೀಸರು ಸಿದ್ಧತೆ ನಡೆಸಿದ್ದು, ನಿನ್ನೆ ಸಂಜೆ ದಕ್ಷಿಣ ಕನ್ನಡದಿಂದ ಚಿನ್ನಯ್ಯನನ್ನು ಕರೆದುಕೊಂಡು ಬಂದಿದ್ದ ದಕ್ಷಿಣ ಕನ್ನಡದ ಪೊಲೀಸರು ನಡುರಾತ್ರಿ ಜೈಲಿಗೆ ರವಾನಿಸಿದ್ದಾರೆ.
ಭದ್ರತಾ ದೃಷ್ಟಿಯಿಂದ ಆರೋಪಿ ಚಿನ್ನಯ್ಯನನ್ನು ಪೊಲೀಸರು ಮಂಗಳೂರಿನ ಬದಲು ಶಿವಮೊಗ್ಗ ಜೈಲಿಗೆ ಕಳುಹಿಸಲು ಮುಂದಾಗಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಶಿವಮೊಗ್ಗ ಜೈಲ್ ಅಧಿಕಾರಿಗಳು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಚಿನ್ನಯರನ್ನು ಒಳಪಡಿಸಿ ಬೆಳ್ತಂಗಡಿಯ ಜೆಎಂಎಫ್ ಸಿ ನ್ಯಾಯಾಲಯ ಆದೇಶಿಸಿದ್ದು, ಶಿವಮೊಗ್ಗದ ಜೈಲಿನಲ್ಲಿ ಇಡುವ ಸಾಧ್ಯತೆ ಯಿದೆ. ಆದರೆ ಆದೇಶಕ್ಕಾಗಿ ಕಾಯಲಾಗುತ್ತಿದೆ ಎಂದಿರುವಾಗಿ ವರದಿ ಆಗಿದೆ.