ನಂಜಪ್ಪ ಲೈಫ್‌ ಕೇರ್‌ನಲ್ಲಿ ಇಂದು ಮಧುಮೇಹ ಜಾಗೃತಿ ಶಿಬಿರ, ಉಚಿತ ತಪಾಸಣೆ

ಶಿವಮೊಗ್ಗ : ನ.14 ಅನ್ನು ವಿಶ್ವ ಮಧುಮೇಹದ ದಿನವಾಗಿ ಆಚರಿಸಲಾಗುತ್ತದೆ. ಇದು ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ತಡೆಗಟ್ಟುವಿಕೆ, ರೋಗ ನಿರ್ಣಯ ಮತ್ತು ಚಿಕಿತ್ಸೆಯ ಮಹತ್ವವನ್ನು ಒತ್ತಿ ಹೇಳಲು ಮೀಸಲಾದ ಒಂದು ಜಾಗತಿಕ ದಿನವಾಗಿದೆ.

ನಂಜಪ್ಪ ಲೈಫ್‌ಕೇ‌ರ್ ಆಸ್ಪತ್ರೆಯಲ್ಲಿ ಇಂದು (ನ.14 ರಂದು) ಬೆಳಗ್ಗೆ 9.00 ರಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಮಧುಮೇಹ ಅರಿವು ಮೂಡಿಸುವ ಆರೋಗ್ಯ ಶಿಕ್ಷಣ ಮಾಹಿತಿಗಳನ್ನು ಕೊಡುವುದರ ಜೊತೆಗೆ ಉಚಿತ ರಕ್ತದಲ್ಲಿನ ಸಕ್ಕರೆ ಅಂಶ (ಆರ್.ಬಿ.ಎಸ್.), ರಕ್ತದೊತ್ತಡ(ಬಿ.ಪಿ.), ಬಾಡಿ ಮಾಸ್ ಇಂಡೆಕ್ಸ್ ಪರೀಕ್ಷೆ ಮತ್ತು ತಪಾಸಣೆ ಮಾಡಲಾಗುತ್ತದೆ.

ಭಾರತವು ಮಧುಮೇಹದ ರಾಜಧಾನಿ ಆಗುವತ್ತ ಸಾಗುತ್ತಿದೆ. ಸದ್ಯ ಅಂದಾಜು ಹತ್ತು ಕೋಟಿ ಟೈಪ್-2 ಮಧುಮೇಹಿಗಳಿದ್ದರೆ, ಸುಮಾರು 13 ಕೋಟಿ ಪೂರ್ವಭಾವಿ ಮಧುಮೇಹಿಗಳು ಇದ್ದಾರೆ. ಇನ್ನೂ ಅಪಾಯಕಾರಿ ಅಂಶ ಎಂದರೆ ಶೇಕಡ 50ರಷ್ಟು ಜನರಿಗೆ ತಮಗೆ ಮಧುಮೇಹದ ಕಾಯಿಲೆ ಇದೆ ಅನ್ನುವುದೇ ಗೊತ್ತಿಲ್ಲ. ಈ ನಿಟ್ಟಿನಲ್ಲಿ ನಂಜಪ್ಪ ಲೈಫ್‌ಕೇ‌ರ್ ಆಸ್ಪತ್ರೆಯಲ್ಲಿ ನ.14 ರಂದು ಬೆಳಗ್ಗೆ 9.00 ರಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಮಧುಮೇಹ ಅರಿವು ಮೂಡಿಸುವ ಆರೋಗ್ಯ ಶಿಕ್ಷಣ ಮಾಹಿತಿಗಳನ್ನು ಕೊಡುವುದರ ಜೊತೆಗೆ ಉಚಿತ ರಕ್ತದಲ್ಲಿನ ಸಕ್ಕರೆ ಅಂಶ (ಆರ್.ಬಿ.ಎಸ್.), ರಕ್ತದೊತ್ತಡ(ಬಿ.ಪಿ.), ಬಾಡಿ ಮಾಸ್ ಇಂಡೆಕ್ಸ್ ಪರೀಕ್ಷೆ ಮತ್ತು ತಪಾಸಣೆ ಮಾಡಲಾಗುತ್ತದೆ.

ಮಧುಮೇಹ ಅನ್ನುವುದು ಒಂದು ‘ನಿಶ್ಯಬ್ದ ಹಂತಕ (ಸೈಲೆಂಟ್ ಕಿಲ್ಲರ್)’ ಆಗಿರುವುದರಿಂದ ಸ್ವಯಂ ಪರೀಕ್ಷೆ ಮಾಡಿಸಿಕೊಳ್ಳಲು ಈ ಅವಕಾಶವನ್ನು ಬಳಸಿಕೊಳ್ಳಲು ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯಿಂದ ಕೋರಿಕೊಳ್ಳಲಾಗಿದೆ

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...