
ಶಿವಮೊಗ್ಗ : ಹಿಂದೂ ಸಂಘಟನಾ ಮಹಾ ಮಂಡಳಿಯ ಹಿಂದು ಮಹಾಸಭಾ ಗಣಪತಿಯನ್ನು ಇಂದು ಶಿವಮೊಗ್ಗ ನಗರದ ಭೀಮೇಶ್ವರ ದೇವಾಲಯದಲ್ಲಿ ಪೂಜೆ ಮೂಲಕ ಅತ್ಯಂತ ಯಶಸ್ವಿಯಾಗಿ ಪ್ರತಿಷ್ಠಾಪಿಸಲಾಯಿತು.
ಇದಕ್ಕೂ ಮುನ್ನ 4 ಅಡಿ ಎತ್ತರವಿರುವ ಗಣಪತಿಯನ್ನು ಕುಂಬಾರಗುಂಡಿಯಲ್ಲಿರುವ ಮಹೇಶಪ್ಪನವರ ಮನೆಯಿಂದ ಮೆರವಣಿಗೆಯಲ್ಲಿ ತರಲಾಯಿತು. ನಂತರ ಮೂರ್ತಿಯನ್ನು ಪೀಠಾರೋಹಣ ಮಾಡಲಾಯಿತು.
ಹಿಂದೂ ಸಂಘಟನಾ ಮಹಾ ಮಂಡಳಿಯ 81ನೇ ವರ್ಷದ ಗಣೇಶೋತ್ಸವ ಅತ್ಯಂತ ಯಶಸ್ವಿಯಾಗಿ ನಡೆಯಲಿದೆ. ಇದಕ್ಕೆ ಬೇಕಾಗಿರುವ ಎಲ್ಲಾ ಸಕಲ ಸಿದ್ಧತೆಗಳನ್ನು ಹಿಂದೂ ಸಂಘಟನಾ ಮಹಾ ಮಂಡಳಿಯ ಎಲ್ಲಾ ಸದಸ್ಯರು ಒಟ್ಟಾಗಿ ಸೇರಿ ಆಯೋಜನೆ ಮಾಡಲಾಗಿದೆ. ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
– ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ನಗರ ಶಾಸಕರು
ಈ ವೇಳೆ ಮಾತನಾಡಿದ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ, 11 ದಿನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕಲಾರೋಹಣ ತಂಡದವರಿಂದ ಹಾಸ್ಯ ನಾಟಕ, ಸೆ.02 ರಂದು ನರಕಾಸುರ ವಧೆಯ ಯಕ್ಷಗಾನ, ಸೆ.03 ರಂದು ಕೋಣಂದೂರು ತೀರ್ಥಹಳ್ಳಿಯವರಿಂದ ಗಾನಾಂಜಲಿ, ಸೆ.05 ರಂದು ಸುದರ್ಶನ ವಿಜಯ ಯಕ್ಷಗಾನ ನಡೆಯಲಿದೆ ಎಂದರು.
ಸೆ.06 ರಂದು ರಾಜಬೀದಿ ಉತ್ಸವ ನಡೆದರೆ, ಹಿಂದಿನ ದಿನ ಸೆ.05 ರಂದು ಮಹಾಮಂಗಳಾರತಿ ನಡೆಯಲಿದೆ ಎಂದು ತಿಳಿಸಿದರು.
ಪ್ರತಿಷ್ಠಾಪನೆಯ ವೇಳೆ ಶಾಸಕ ಚೆನ್ನಬಸಪ್ಪ ಮತ್ತು ಹಿಂದೂ ಮಹಾಸಭಾ ಗಣಪತಿ ಸಮಿತಿ ಸುರೇಶ್ ಕುಮಾರ್ ಶೆಟ್ಟಿ, ದತ್ತಣ್ಣ, ರಾಜು ಮಾಲ್ತೇಶ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.