
ಶಿವಮೊಗ್ಗ : ಶ್ರೀ ಗುರು ಸಿದ್ದರಾಮೇಶ್ವರ ಭೋವಿ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾ ಸಭೆಯು ಸೆ.04 ರಂದು ಭಾನುವಾರ ನಗರದ ಬಾಲರಾಜ್ ರಸ್ತೆಯಲ್ಲಿರುವ ಭೋವಿ ಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಕೌಶಿಕ್ ಚಂದನ್ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಶ್ರೀ ಗುರು ಸಿದ್ದರಾಮೇಶ್ವರ ಭೋವಿ ವಿವಿಧೋದ್ದೇಶ ಸಹಕಾರ ಸಂಘವು 2024-25 ನೇ ಸಾಲಿನಲ್ಲಿ ಸುಮಾರು 50 ಲಕ್ಷ ಸಾಲವನ್ನು ಭೋವಿ ಸಮಾಜದ ಸದಸ್ಯರಿಗೆ ವಿತರಣೆ ಮಾಡುವ ಮೂಲಕ
ಪ್ರಗತಿಯತ್ತ ದಾಪು ಗಾಲು ಇಟ್ಟಿದ್ದು, ಸಂಘದ ಪ್ರಗತಿಗೆ ಸದಸ್ಯರ ಸಹಕಾರ ಅತ್ಯಗತ್ಯವಾಗಿದೆ. ಸಂಘದಲ್ಲಿ ಪಡೆದ ಸಾಲವನ್ನು ಸರಿಯಾಗಿ ಪಾವತಿ ಮಾಡುವ ಮೂಲಕ ಸಂಘದ ಏಳಿಗೆಗೆ ಶ್ರಮಿಸಬೇಕಿದೆ. ಸಂಘದವು ಲಾಭದಾಯಕವಾಗಿದ್ದರೆ ಸದಸ್ಯರಿಗೆ ಇನ್ನಷ್ಟು ಅನುಕೂಲ ಕಲ್ಪಿಸಲು ಸಹಾಯವಾಗುತ್ತದೆ ಎಂದರು.
ಸಮಾಜದ ಬಡಜನರಿಗೆ ಉಪಯುಕ್ತವಾಗುವಂತ ಸಾಲ ಸೌಲಭ್ಯಗಳನ್ನು ಠೇವಣಿಗಳನ್ನು ಸಂಘವು ನೀಡುತ್ತಿದ್ದು, ನಮ್ಮ ಜನಾಂಗದ ಸದಸ್ಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಂಘದಿಂದ ಹಲವಾರು ರೀತಿಯ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಮುಂದೆಯೂ ಇನ್ನಷ್ಟು ಯೋಜನೆಗಳನ್ನು ಜಾರಿಗೆ ತರುವ ಉದ್ದೇಶ ಹೊಂದಿದ್ದೇವೆ, ಸಮಾಜದ ಬಡವಜನರು ಇದರ ಸದುಪಯೋಗವನ್ನು ಪಡೆದುಕೊಳ್ಳಿ.
| ಕೌಶಿಕ್ ಚಂದನ್, ಸಂಘದ ಅಧ್ಯಕ್ಷ
ಸಂಘದ ಲೆಕ್ಕ ಪರಿಶೋಧನೆಯ ವರದಿಯನ್ನು ಸಲ್ಲಿಸಿದರು. ಸಂಘವು ಪ್ರತಿವರ್ಷದಂತೆ ಈ ವರ್ಷವೂ ಲಾಭದತ್ತ ಸಾಗಿದೆ ಎಂದು ವರದಿ ಸಲ್ಲಿಸಿದರು. ಖಜಾಂಚಿ ಮುರುಳಿಧರ್ ಎ ಎಸ್ ಅವರು ಮಾತನಾಡಿ, ಸಂಘದಲ್ಲಿ 1600 ಜನ ಸದಸ್ಯರಿದ್ದು, ಎಲ್ಲ ಸದಸ್ಯರು ಸಂಘದಲ್ಲಿ ವ್ಯವಹರಿಸಿ.
| ಮಾರುತಿ ಎಂ., ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿ
ಸಂಘದ ಹೆಚ್ಚಿನ ಅಭಿವೃದ್ಧಿಗಾಗಿ ಡಿ ಸಿ ಸಿ ಬ್ಯಾಂಕಿನಲ್ಲಿ ಸುಮಾರು 50 ಲಕ್ಷ ಸಾಲ ಪಡೆಯುವ ಸಂಬಂಧ ಸಭೆಯಲ್ಲಿ ನಿರ್ಣಯಿಸಿ, ಅನುಮೋದನೆ ನೀಡಲಾಯಿತು. ಇದಕ್ಕೂ ಮುನ್ನ ಸಂಘದ ನಿರ್ದೇಶಕರಾದ ಮಂಜುಳಾ ಆರ್ ಪ್ರಾರ್ಥನೆ ಮಾಡಿದರು. ನಿರ್ದೇಶಕ ಕೆ ಎನ್ ವಿರೇಶಪ್ಪ ಸ್ವಾಗತ ಕೋರಿದರು. ಕೊನೆಯಲ್ಲಿ ಸಂಘದ ನಿರ್ದೇಶಕ ಬಸರಾಜ್ ಟಿ ಅವರು ವಂದಿಸಿದರು.