
ಶಿವಮೊಗ್ಗ : ಇಂದು ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೂಳೆಬೈಲು ದುರ್ಗಮ್ಮ ದೇವಸ್ಥಾನ ಶ್ರೀ ಮಾರುತಿ ಮಲ್ಲೇಶ್ವರ ಗಣಪತಿ ಮಂಡಳಿಯಿಂದ ಹಮ್ಮಿಕೊಂಡಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮದ ವೇಳೆ ಸ್ಥಳೀಯ ಮುಸ್ಲಿಂ ಮುಖಂಡರು ಕುಡಿಯುವ ನೀರು ಹಾಗೂ ತಂಪು ಪಾನೀಯ ನೀಡುವ ಮೂಲಕ ಹಿಂದೂ ಮುಸ್ಲಿಂ ಸಮಾಜದ ಸೌಹಾರ್ದತೆ ಹಾಗೂ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.
ಎಲ್ಲರೂ ಸೇರಿ ಹಬ್ಬವನ್ನು ಒಗ್ಗಟ್ಟಿನಿಂದ ಆಚರಿಸುವ ಮೂಲಕ ಒಂದು ಮಾದರಿ ಗ್ರಾಮವನ್ನಾಗಿ ಮಾಡಬೇಕು ಎಂಬುದೇ ನಮ್ಮ ಗುರಿ.
| ಸಲೀಂ, ಮುಸ್ಲಿಂ ಮುಖಂಡರು
ಸ್ಥಳೀಯ ಮುಸ್ಲಿಂ ಮುಖಂಡರಾದ ಸಲೀಂ, ಜಮೀಲ್, ಟಿಪ್ಪು, ನದೀಮ್, ನೂರುಲ್ಲಾ ಹಾಗೂ ಇತರರು ಕಾರ್ಯಕ್ರಮದಲ್ಲಿ ಕುಡಿಯುವ ನೀರು ಹಾಗೂ ತಂಪು ಪಾನೀಯ ನೀಡಿ ಸಹಕರಿಸಿರುತ್ತಾರೆ.

ಆನಂತರ ಗಣಪತಿ ಕಮಿಟಿಯ ನಾಗರಾಜು, ಅಶೋಕ, ಮನು, ಸಂತೋಷ, ಪುಟ್ಟರಾಜು, ಸುದೀಪ ಹಾಗೂ ಇತರರು ಮುಸ್ಲಿಂ ಬಾಂಧವರಿಗೆ ಸನ್ಮಾನ ಮಾಡಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ಮೂಲಕ ಹಿಂದೂ ಮುಸ್ಲಿಂ ಮುಖಂಡರುಗಳು ಭಾವೈಕ್ಯತೆಯನ್ನು ಸಾರಿರುತ್ತಾರೆ.
ಇದನ್ನೂ ಓದಿ » ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ಮಹಾದ್ವಾರ ನಿರ್ಮಾಣಕ್ಕೆ ಕ್ಷಣಗಣನೆ, ಈ ಬಾರಿಯ ಕಾನ್ಸೆಪ್ಟ್ ಏನು?