
ಶಿವಮೊಗ್ಗ : ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಶಿವಮೊಗ್ಗದ ಪ್ರಸಿದ್ಧ ಶ್ರೀ ಕೋಟೆ ಮಾರಿಕಾಂಬ ದೇವಸ್ಥಾನದಲ್ಲಿ ಶಿವರಾಜ್ ಕುಮಾರ್ ಅವರಿಗೆ ಹೆಚ್ಚಿನ ಆರೋಗ್ಯ, ಆಯಸ್ಸು, ಯಶಸ್ಸು ನೀಡಲೆಂದು ಗ್ರಾಮ ದೇವತೆ ಕೋಟೆ ಮಾರಿಕಾಂಬಾ ದೇವಿಗೆ ವಿಶೇಷವಾದ ಪೂಜೆ ಸಲ್ಲಿಸಿ, ಸಿಹಿ ವಿತರಣೆ ಸಂಭ್ರಮಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುನಿಲ್ಎ.ಹೆಚ್, ಪ್ರಭಾಕರ ಗೌಡ, ಸತೀಶ್, ಯುವ ಮುಖಂಡ ವಿನಯ್ ತಾಂಡಲೆ, ಶಿವಮೊಗ್ಗ ಜಿಲ್ಲಾ ಅಲೆಮಾರಿ ನಿಗಮದ ಸದಸ್ಯ ಸಂದೀಪ್.ಜಿ, ಗ್ಯಾರಂಟಿ ಯೋಜನೆ ಸದಸ್ಯ ಬಸವರಾಜ್, ಹೋಟೆಲ್ ಬಸವಣ್ಣ, ಮಂಜುನಾಥ್ ನವುಲೆ, ಮೆಸ್ಕಾಂ ಸದಸ್ಯ ಮಧುಸೂದನ್, ಶಿವಮೂರ್ತಿ ಮಹಾರಾಜ್, ಓಬಿಸಿ ನಗರ ಅಧ್ಯಕ್ಷ ಮೋಹನ್, ಯುವ ಮುಖಂಡ ಪುರ್ಲೆ ಮಂಜು, ಗಿರೀಶ್ ಸಾಕ್ರೆ, ಶಿವುಕುಮಾರ್, ಪ್ರವೀಣ್, ಶಬರಿ, ಚಂದನ್, ದರ್ಶನ್, ಭರತ್, ಹಾಲೇಶ್, ವಿಜಯ್, ಸುಜಿತ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.