
ಶಿವಮೊಗ್ಗ : ಶಿವಮೊಗ್ಗ ನಗರದ ಪ್ರಸಿದ್ಧ ಹಿಂದೂ ಮಹಾ ಸಭಾ ಗಣಪತಿಯ ವಿಸರ್ಜನಾ ಪೂರ್ವ ರಾಜ ಬೀದಿ ಉತ್ಸವದ ಮೆರವಣಿಗೆಯು ನಗರದಲ್ಲಿ ವೈಭವದಿಂದ ಆರಂಭಗೊಂಡಿದೆ. ಅಪಾರ ಜನಸಂಖ್ಯೆಯ ಸಮೂಹ ಇದಕ್ಕೆ ಸಾಕ್ಷಿಯಾಗಿದೆ.

ನಗರದಕೋಟೆ ಭೀಮೇಶ್ವರ ದೇವಸ್ಥಾನದ ಮುಂಭಾಗದಿಂದ ಹಿಂದೂ ಮಹಾ ಸಭಾ ಗಣಪತಿಯ ರಾಜ ಬೀದಿ ಉತ್ಸವಕ್ಕೆ ಚಾಲನೆ ದೊರೆತಿದ್ದು, ಈ ಸಂದರ್ಭದಲ್ಲಿ ವಿಘ್ನ ವಿನಾಶಕ ವಿನಾಯಕನಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು.
ಅಲ್ಲಿಂದ ಭಾರೀ ಜಯ ಘೋಷದೊಂದಿಗೆ ರಾಜ ಬೀದಿ ಉತ್ಸವವು ಬೆಳಗ್ಗೆ 11.00 ಗಂಟೆಯಿಂದ ಆರಂಭವಾಯಿತು. ಅಪಾರ ಸಂಖ್ಯೆಯ ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಇಡೀ ನಗರವೇ ಕೇಸರೀಕರಣಗೊಂಡಿದ್ದು, ಮೆರವಣಿಗೆಯುದ್ದಕ್ಕೂ ಕಲಾತಂಡಗಳು, ಮಂಗಳ ವಾದ್ಯ, ಚಂಡೆ ಮೇಳ, ಡೊಳ್ಳು ಕುಣಿತ, ಕಹಳೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಇನ್ನಷ್ಟು ಮೆರಗು ತಂದಿವೆ.
ಈ ಸಂದರ್ಭದಲ್ಲಿ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ, ಆರ್‌ಎಸ್‌ಎಸ್ ಪ್ರಮುಖ್ ಪಟ್ಟಾಭಿ, ಹಿಂದೂ ಮಹಾಸಭಾ ಸಂಘಟನೆಯ ಪ್ರಮುಖರು, ಗಣ್ಯರು ಸೇರಿದಂತೆ ಸಮಿತಿಯ ಮುಖಂಡರು ಹಾಗೂ ಅಪಾರ ಸಂಖ್ಯೆಯ ಜನರು ಇದ್ದರು.
ನಗರದಾದ್ಯಂತ ಖಾಕಿ ಭದ್ರತೆ :
ಮೆರವಣಿಗೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ನಗರದ ಎಲ್ಲೆಡೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಸಿಸಿ ಟಿವಿ, ಡ್ರೋನ್ ಕ್ಯಾಮೆರಾಗಳಲ್ಲಿ ಹೆಚ್ಹು ಎಚ್ಚರಿಕೆ ವಹಿಸಲಾಗಿದೆ.

ಇಂದು ಶಿವಮೊಗ್ಗ ನಗರದಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ನಡೆಯಲಿದ್ದು, ಇದಕ್ಕಾಗಿ ಶಿವಮೊಗ್ಗ ನಗರದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಭದ್ರತೆಗಾಗಿ ಸುಮಾರು 5 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಮೆರವಣಿಗೆ ಹಿನ್ನಲೆ 5 ಎಸ್‌ಪಿ, 2 ಎಎಸ್‌ಪಿ, 21 ಡಿವೈಎಸ್‌ಪಿ, 58 ಇನ್ಸ್‌ಪೆಕ್ಟರ್, 65 ಪಿಎಸ್‌ಐ, 198 ಪ್ರೊಬೆಷನರಿ ಪಿಎಸ್‌ಐ, 114 ಎಎಸ್‌ಐ, 2259 ಹೆಡ್ ಕಾನ್ಸ್‌ಟೇಬಲ್ ಮತ್ತು ಕಾನ್ಸ್‌ಟೇಬಲ್‌ಗಳು, 692 ಹೋಮ್ ಗಾರ್ಡ್ಸ್ ಸೇರಿದಂತೆ ಕೆಎಸ್‌ಆರ್‌ಪಿ, ಎಸ್‌ಎಎಫ್, ಆರ್‌ಎಎಫ್ ಸೇರಿದಂತೆ 5 ಸಾವಿರ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿದೆ.