
ಹೊಳೆಹೊನ್ನೂರು : ಗಣಪತಿ ವಿಸರ್ಜನೆ ಮಾಡುವ ವೇಳೆ ನೀರಿನಲ್ಲಿ ಮುಳುಗಿ 10 ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಕುರುಬರ ವಿಠಲಾಪುರದಲ್ಲಿ ಸೆ.1 ರ ಸೋಮವಾರ ನಡೆದಿದೆ.
ಇದನ್ನೂ ಓದಿ » ಶಿವಪ್ಪನಾಯಕ ವೃತ್ತದ ಅಂಡರ್ ಪಾಸ್ ಸ್ಥಿತಿ ಶೋಚನೀಯ, ಸ್ಥಳಕ್ಕೆ ಶಾಸಕ ಚೆನ್ನಿ ಭೇಟಿ, ತ್ವರಿತ ಕ್ರಮಕ್ಕೆ ಸೂಚನೆ

ಇಟ್ಟಿಗೆಹಳ್ಳಿಯ ಕುಶಾಲ್ (10) ಮೃತ ಬಾಲಕ. ಕುರುಬರ ವಿಠಲಾಪುರದ ಬೀದಿಯ ಪುಟಾಣಿ ಮಕ್ಕಳು ಮಣ್ಣು ಬಳಸಿ ತಾವೇ ಸ್ವತಃ ಗಣಪನ ಮೂರ್ತಿ ತಯಾರಿಸಿ ಪೂಜೆ ಸಲ್ಲಿಸಿದ್ದರು. ಸೋಮವಾರ ಸಂಜೆ ವೇಳೆಗೆ ಗಣಪನನ್ನು ಭದ್ರಾ ನಾಲೆಗೆ ವಿಸರ್ಜನೆ ಮಾಡುವಾಗ ಈ ಘಟನೆ ನಡೆದಿದೆ.
ಪಾಲಕರಿಗೆ ತಿಳಿಸದೆ 3 ಮಕ್ಕಳು ನಾಲೆಗೆ ತೆರಳಿದ್ದಾರೆ ಎನ್ನಲಾಗುತ್ತಿದ್ದು, ನಾಲೆಯಲ್ಲಿ ಗಣಪತಿ ವಿಸರ್ಜನೆ ಮಾಡುತ್ತಿದ್ದ ವೇಳೆ ಆಯಾತಪ್ಪಿದ ಕುಶಾಲ್ ನಾಲೆಗೆ ಬಿದ್ದಿದ್ದಾನೆ ಎನ್ನಲಾಗುತ್ತಿದೆ.
ಸುದ್ದಿ ತಿಳಿದು ಸ್ಥಳೀಯರು ನಾಲೆಯಲ್ಲಿ ಹುಡುಕಾಡಿ ಬಾಲಕನ ಶವವನ್ನು ಹೊರ ತೆಗೆದಿದ್ದಾರೆ. ಇಟ್ಟಿಗೆಹಳ್ಳಿಯಲ್ಲಿ ಬಾಲಕನ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಹೊಳೆಹೊನ್ನೂರು ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ಇದನ್ನೂ ಓದಿ » ಸೆ.6 ರಂದು ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಹಿನ್ನೆಲೆ ವಾಹನ ಸಂಚಾರ ಮಾರ್ಗ ಬದಲಾವಣೆಗೊಳಿಸಿ ಡಿಸಿ ಆದೇಶ