
ಶಿವಮೊಗ್ಗ : ಇನ್ನರ್ ವ್ಹೀಲ್ ಶಿವಮೊಗ್ಗ ನಾರ್ಥ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಶನಿವಾರದಂದು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ತಮ್ಮ ಜೀವನದಲ್ಲಿ ಸಾಧನೆ ಗೈದ ಹಾಗೂ ನಿಸ್ವಾರ್ಥ ಸೇವೆ ಗೈದ ಸ್ತ್ರೀ ರೋಗ ತಜ್ಞೆಯಾದ ಡಾ. ವಿಮಲಾ ಬಾಯಿ, ಮಹಿಳೆಯರನ್ನು ಆರ್ಥಿಕವಾಗಿ ಸದೃಢ ಮಾಡಿದ ಶ್ರೀಮತಿ ಶಿವಲೀಲಾ ಮತ್ತು ಕುಟುಂಬವು ಆರ್ಥಿಕವಾಗಿ ಕುಸಿದಾಗ ತಮ್ಮ ಅಡುಗೆಯ ದುಡಿಮೆಯಿಂದ ಕುಟುಂಬಕ್ಕೆ ಆಸರೆಯಾದ ಶ್ರೀಮತಿ ಆಶಾ ಎ ಕಿಣಿ ಈ ಮೂವರು ಮಹಿಳೆಯರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಫ್ಯಾಷನ್ ಶೋ ಮತ್ತು ಸಾಂಪ್ರದಾಯಿಕ ಧಿರಿಸು ಧರಿಸುವ ಸ್ಪರ್ಧೆಯನ್ನು ಏರ್ಪಡಿಸುವುದರ ಮೂಲಕ ಅನೇಕ ವಿನೋದದ ಆಟಗಳನ್ನು ಆಡಿಸಿ, ವಿಜೇತರಿಗೆ ಬಹುಮಾನವನ್ನು ನೀಡಲಾಯಿತು.
ಗಣೇಶನ ವಂದನೆಯೊಂದಿಗೆ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮವು ಆಕರ್ಷಕ ಶ್ರೀ ಕೃಷ್ಣ ನೃತ್ಯ ರೂಪಕದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಇದನ್ನೂ ಓದಿ » ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಜಾಗತಿಕ ಗಂಭೀರ ಸಮಸ್ಯೆ : ಉಮಾ ರೆಡ್ಡಿ