
ಗುಜರಾತಿನ ಅಹಮದಬಾದ್ ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಭರ್ಜರಿ ಜಯ ಗಳಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 190 ರನ್ ಗಳಿಸಿತು. ವಿರಾಟ್ ಕೊಹ್ಲಿ 43 (35) ರನ್ ಗಳಿಸುವ ಮೂಲಕ ಆರ್‌ಸಿಬಿ ಪರ ಗರಿಷ್ಠ ಸ್ಕೋರರ್ ಆಗಿದ್ದರು.

ಆರ್‌ಸಿಬಿ ಜಯ ಸಾಧಿಸುವ ಉದ್ದೇಶದಿಂದ ಇಡೀ ದೇಶದ ಜನರು, ವಿಶೇಷವಾಗಿ ಕರ್ನಾಟಕದಲ್ಲಿ ಈ ಪಂದ್ಯ ಬಾರೀ ಕುತೂಹಲ ಕೆರಳಿಸಿತ್ತು. ಆರ್ ಸಿ ಬಿ ವಿಜಯದ ಹಿಂದೆ 18 ವರ್ಷಗಳ ತಪಸ್ಸಿದೆ. ಚಾಂಪಿಯನ್ ಪ್ರದರ್ಶನ ನೀಡುವಲ್ಲಿ ಆರ್ ಸಿ ಬಿ ಯಶಸ್ವಿಯಾಗಿದೆ. ಆರ್ ಸಿ ಬಿ ಕೊನೆಗೂ ಇಡೇರಿಸಿದ ಅಭಿಮಾನಿಗಳ ಟ್ರೋಫಿ ಕನಸು. ಹೆಮ್ಮೆಯಿಂದ ಹೇಳಿ ಈ ಸಲ ಕಪ್ ನಮ್ದೆ.