
ಶಿವಮೊಗ್ಗ : ಪ್ರಸ್ತುತ ಘಟನೆಯನ್ನು ಆಧಾರಿಸಿ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ನೀಡಬೇಕು ಎನ್ನುವ ನಿಟ್ಟಿನಲ್ಲಿ ವಿಭಿನ್ನ ಕಥಾ ಹಂದರದೊಂದಿಗೆ ಚಿತ್ರೀಕರಿಸಿರುವ ‘ಕಟುದಾರಿ’ ಎಂಬ ಕಿರು ಚಿತ್ರವು ಇಂದು ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.
ಸಮಾಜದ ಪ್ರಸ್ತುತ ಸನ್ನಿವೇಶವನ್ನು ಆಧಾರವಾಗಿಟ್ಟುಕೊಂಡು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಉದ್ದೇಶ ಹೊಂದಿದೆ. ಎಲ್ಲರೂ ಯುಟ್ಯೂಬ್ ನಲ್ಲಿ ನೋಡುವುದರ ಮೂಲಕ ಸಹಕರಿಸಬೇಕು.
| ಗಗನ ಮಲ್ನಾಡ್, ಕಟುದಾರಿ ಚಿತ್ರದ ನಾಯಕ ನಟಿ

ಕಟುದಾರಿ ಚಿತ್ರದ ನಿರ್ಮಾಪಕರು ಪ್ರೀತಿ ಚಂದ್ರಪ್ಪ, ಕಥೆ-ಚಿತ್ರಕಥೆ-ನಿರ್ದೇಶನ-ಛಾಯಾಗ್ರಹಣ ರಾಜ್ ಕಿರಣ್ ನಿರ್ವಹಿಸಿದ್ದು, ಶಿವಮೊಗ್ಗದ ಗಗನ ಮಲ್ನಾಡ್ ನಾಯಕ ನಟಿಯಾಗಿ ನಟಿಸಿದ್ದಾರೆ. ಕಿರುಚಿತ್ರಕ್ಕೆ ರೋನಿತ್ ಸಾಹಿತ್ಯವನ್ನು, ಪವನ್ ಮೂರ್ತಿ ಸಂಗೀತವನ್ನು ನೀಡಿದ್ದಾರೆ.
ಸಹ ಛಾಯಾಗ್ರಾಹಕ ವಿ.ಎಸ್.ಎಫ್. ಆಕಾಶ್, ಸಂಕಲನ ಸಿಗ್ಮಾ ಸ್ಟುಡಿಯೋ, ಸಹ ನಿರ್ದೇಶನ ಭರತ್.ಕೆ, ಗೌತಮಿ, ಕಲೆ ದರ್ಶನ್ ಕಲಾ ಕುಟೀರ, ಭರತ್.ಕೆ, ನಿರ್ವಹಣೆ ನವೀನ್ ರಾಜ್, ಎ.ಎನ್.ಈಶ್ವರ್, ನಿಖಿಲ್, ಪ್ರೊಡಕ್ಷನ್ ಟೀಮ್ ಜೀವನ್, ಸುದೀಪ್, ಪ್ರಜ್ವಲ್ ನಿರ್ವಹಿಸಿದ್ದಾರೆ.
ಈ ಹಿಂದೆ ಇದೇ ಟೀಮ್ ಒಂದು ಆಲ್ಬಮ್ ಸಾಂಗ್ ನೀಡಿದ್ದು, ಇದೀಗ ಎರಡನೇ ಪ್ರಯತ್ನವಾಗಿ ಕಿರು ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ನೀಡುವ ಹಿನ್ನೆಲೆಯಲ್ಲಿ ತಯಾರಿಸಿರುವ ಈ ಚಿತ್ರವನ್ನು ಕುಟುಂಬ ಸಮೇತರಾಗಿ ವೀಕ್ಷಿಸಬಹುದಾಗಿದೆ.
ಕಟುದಾರಿ ಕಿರು ಚಿತ್ರವನ್ನು ದಾವಣಗೆರೆಯ ಸುತ್ತಮುತ್ತ ಚಿತ್ರೀಕರಿಸಿದ್ದು, ಶೂಟಿಂಗ್ ಗೆ ಬೇಕಾದ ಎಲ್ಲಾ ತಯಾರಿಯನ್ನು ಟೀಮ್ ವತಿಯಿಂದಲೇ ಚಿತ್ರೀಕರಣಕ್ಕಾಗಿಯೇ ತಯಾರಿಸಲಾಗಿದೆ. ಹಗಲು ರಾತ್ರಿ ಚಿತ್ರೀಕರಿಸಿದ್ದು, ಚಿತ್ರವನ್ನು ನೋಡಿದವರೇ ನಿಜವಾದ ಹೀರೋಗಳು. ಈ ಚಿತ್ರವನ್ನು ಎಲ್ಲರೂ AUDIOBOXINDIA CHANNEL ಯೂಟ್ಯೂಬ್ ಚಾನೆಲ್ ಮೂಲಕ ವೀಕ್ಷಿಸಬೇಕು ಎಂದು ಕಿರು ಚಿತ್ರದ ಟೀಮ್ ಕೋರಿದೆ.
ಇದನ್ನೂ ಓದಿ » ಶಿವಮೊಗ್ಗ ಡಿಸಿಸಿ ಬ್ಯಾಂಕ್ ದಾಖಲೆಯ ಲಾಭ, ರೈತರಿಗೆ ನೆರವಾಗಲು ಹೊಸ ಯೋಜನೆ ಜಾರಿ: ಆರ್.ಎಂ.ಮಂಜುನಾಥ ಗೌಡ