
ಶಿವಮೊಗ್ಗ : ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವದ ಅಂಗವಾಗಿ ಶಿವಮೊಗ್ಗದಲ್ಲಿ ರಾಷ್ಟ್ರ ಮಟ್ಟದ ಟಗರು ಕಾಳಗ ಪಂದ್ಯಾವಳಿಯನ್ನು ಫೆ.15 ರಂದು ಶಿವಮೊಗ್ಗದ ಅಲ್ಲಮ ಪ್ರಭು ಮೈದಾನ (ಫ್ರೀಡಂ ಪಾರ್ಕ್) ಇಲ್ಲಿ ಆಯೋಜಿಸಲಾಗಿದೆ.
ಇದನ್ನೂ ಓದಿ » ಜಾನುವಾರುಗಳ ಜೀವಕ್ಕೆ ಕಂಟಕವಾಯಿತೇ ಪ್ಲಾಸ್ಟಿಕ್…!

ನಮ್ಮೂರ ಬಳಗ, ಶಿವಮೊಗ್ಗ ವತಿಯಿಂದ, ಪ್ರತಿಷ್ಠಿತ ಕೋಟೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ’ ಅಂಗವಾಗಿ ಪ್ರಪ್ರಥಮ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಫೆ.15 ರಂದು ಆಯೋಜಿಸಿರುವ ರಾಷ್ಟ್ರ ಮಟ್ಟದ ಭಾರಿ ಟಗರು ಕಾಳಗ ಪಂದ್ಯಾವಳಿಗಳ ಪ್ರಚಾರದ ಪೋಸ್ಟರ್ ಬಿಡುಗಡೆ ಹಾಗೂ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಇನ್ಸ್ಟಾಗ್ರಾಂ, ಟ್ವಿಟ್ಟರ್ ಖಾತೆಗಳ ಚಾಲನೆ ಕಾರ್ಯಕ್ರಮವನ್ನು ಕೋಟೆ ಮಾರಿಕಾಂಬ ಸಮಿತಿಯ ಅಧ್ಯಕ್ಷರಾದ ಎಸ್.ಕೆ.ಮರಿಯಪ್ಪನವರು ನೆರವೇರಿಸಿದರು.
ರಾಷ್ಟ್ರೀಯ ಮಟ್ಟದ ಟಗರು ಕಾಳಗ ಪಂದ್ಯಾವಳಿಯಲ್ಲಿ ನೆರೆಯ ಆಂದ್ರ, ತೆಲಂಗಾಣ, ಮಹಾರಾಷ್ಟ್ರ , ತಮಿಳುನಾಡು ಸೇರಿದಂತೆ 6 ರಾಜ್ಯದ ಟಗರುಗಳು ಪ್ರದರ್ಶನ ನೀಡಲಿವೆ. ರಾಷ್ಟ್ರಮಟ್ಟದ ಟಗರು ಕಾಳಗ ಪಂದ್ಯಾವಳಿಯಲ್ಲಿ ಒಟ್ಟು 4 ವಿಭಾಗಗಳನ್ನು ಮಾಡಲಾಗಿದ್ದು, ಅದರಲ್ಲಿ 8 ಹಲ್ಲಿನ ಟಗರು, 6 ಹಲ್ಲಿನ ಟಗರು, 4 ಮತ್ತು 2 ಹಲ್ಲಿನ ಟಗರುಗಳಿಗೆ ಫೆ.15 ರಂದು ರೋಚಕ ಹಣಾಹಣಿ ನಡೆಯಲಿದೆ.
ಪ್ರಥಮ ಬಹುಮಾನ ಗೆದ್ದ ಟಗರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬಿರುದಿನ ಟ್ರೋಫಿ ಜೊತೆ 1ಲಕ್ಷ ನಗದು ಬಹುಮಾನ ಘೋಷಿಸಲಾಗಿದೆ. ತೀರ್ಪು ಪಾರದರ್ಶಕವಾಗಿರಬೇಕೆಂಬ ದೃಷ್ಟಿಯಿಂದ ಬೇರೆ ರಾಜ್ಯಗಳಿಂದ ತೀರ್ಪುಗಾರರನ್ನು ಕರೆಸಲಾಗುತ್ತಿರುವುದು ವಿಶೇಷ. ನಾಲ್ಕು ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಿದ ಟಗರುಗಳಿಗೆ ಶಿವಪ್ಪ ನಾಯಕ , ಭಗೀರಥ, ವೀರ ಸಿಂಧೂರ ಲಕ್ಷ್ಮಣ ಬಿರುದು ಹಾಗೂ ಟ್ರೋಫಿ ಜೊತೆಗೆ ಪ್ರಥಮ, ದ್ವಿತೀಯ ತೃತೀಯ ಆಕರ್ಷಕ ಬಹುಮಾನ ನೀಡಲಾಗುವುದು.
ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ, ಕಳೆದ ಐದಾರು ವರ್ಷಗಳಿಂದ ವಿವಿಧೆಡೆ ಟಗರು ಕಾಳಗದಲ್ಲಿ ಭಾಗವಹಿಸಿರುವ ಶಿವಮೊಗ್ಗದ ನ್ಯೂಮಂಡ್ಲಿಯ ಚೌಡೇಶ್ವರಿ ಮಚ್ಚಾಬಾಯ್ಸ್ ತಂಡದ ಸುಗ್ರೀವ ಹೆಸರಿನ ಟಗರು ಎಲ್ಲರ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಮಾರಿಕಾಂಬ ಸಮಿತಿಯ ಪದಾಧಿಕಾರಿಗಳಾದ ಎನ್.ಉಮಾಪತಿ, ಹನುಮಂತಪ್ಪ ರಾಮಯ್ಯ, ಸುಧೀರ್, ನಮ್ಮೂರ ಬಳಗದ ಪ್ರಧಾನ ಸಂಚಾಲಕ ಕೆ.ರಂಗನಾಥ್, ಗೌರವ ಸಂಚಾಲಕರುಗಳಾದ ನಾಗರಾಜ್ ಕಂಕಾರಿ, ಹೆಚ್.ಪಾಲಾಕ್ಷಿ, ಐಡಿಯಲ್ ಗೋಪಿ, ಸಿ.ಹೆಚ್.ಮಾಲೇಶ್, ಜಿ.ಡಿ.ಮಂಜುನಾಥ್, ಸಿ.ರವಿ, ಸಂಚಾಲಕರುಗಳಾದ ಕೆ.ಆರ್.ಸುರೇಶ್, ರಾಮಕೃಷ್ಣಮುಡ್ಲಿ, ರವಿ ಕುಳ್ಳಿ, ಹರೀಶ್ ಆರ್., ವಿಜಯ್ ಕುಮಾರ್, ಹೆಚ್.ಪಿ.ಗಿರೀಶ್, ಬಿ.ಲೋಕೇಶ್, ಆಂಜನೇಯ ವಿದ್ಯಾನಗರ, ಪ್ರಶಾಂತ್ ರಾಯ್, ಆರ್.ಕಿರಣ್, ಚಂದ್ರು ಗೆಡ್ಡೆ, ಎಸ್.ಕುಮಾರೇಶ್, ಕೇಶವ, ಎಂ.ರಾಕೇಶ್, ಕೆ.ಎಲ್.ಪವನ್, ರಾಹುಲ್, ಕೇಬಲ್ ಲೋಕೇಶ್, ಜಿ.ಕಿರಣ್, ಪತ್ರೇಶ್, ಸೂರಿ, ಸುನಿಲ್ ಹಾಗೂ ಬಳಗದ ಸಂಚಾಲಕರುಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.