
ಶಿವಮೊಗ್ಗ : ನಗರದ ಬಿ.ಹೆಚ್. ರಸ್ತೆಯಲ್ಲಿರುವ ಮೇನ್ ಮಿಡ್ಲ್ ಸ್ಕೂಲ್ ಗೆ ತನ್ನದೇ ಆದ ಇತಿಹಾಸವಿದೆ. ಈಗ ಅದು ಆಂಗ್ಲ ಮಾಧ್ಯಮ ಶಾಲೆಯಾಗಿದೆ ಎಂದು ಮೇನ್ ಮಿಡ್ಲ್ ಸ್ಕೂಲ್ ನ ಪ್ರಭಾವಿ ಮುಖ್ಯ ಶಿಕ್ಷಕಿ ಕವಿತಾ.ಆರ್ ಹೇಳಿದರು.
ಮಕ್ಕಳಿಗೆ ಮಕ್ಕಳಿಗೆ ನೋಟ್ಸ್ ಬುಕ್, ಪೆನ್ಸಿಲ್ ಮತ್ತು ಬಣ್ಣದ ಡಬ್ಬಿಗಳನ್ನು ನೀಡಿ ವಿಶೇಷವಾಗಿ ಶಾಲೆಗೆ ಬರಮಾಡಿಕೊಂಡು ಮಾತನಾಡಿದ ಅವರು, ಎಲ್ ಕೆ ಜಿ ಯುಕೆಜಿಯು ಸಹ ಆರಂಭಗೊಂಡಿದೆ. ಎಲ್ಲ ರೀತಿಯ ಸೌಲಭ್ಯಗಳು ಇವೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಶಿಕ್ಷಕರು ಕೂಡ ಸಹಕರಿಸುತ್ತಿದ್ದಾರೆ ಎಂದರು.
ಈಗಾಗಲೇ ವಿಶೇಷ ದಾಖಲಾತಿ ಆಂದೋಲನ ಕೂಡ ನಡೆಯುತ್ತಿದ್ದು, ಎಲ್ ಕೆ ಜಿ ಯುಕೆಜಿ ಪ್ರವೇಶ ಆರಂಭವಾಗಿದೆ.