
ಶಿವಮೊಗ್ಗ : ಮ್ಯಾಂಗೋ ಲೈಫ್ ಹಾಲಿಡೇಸ್ ಸಂಸ್ಥೆ ವತಿಯಿಂದ ನಗರದ ಹೊರಭಾಗದಲ್ಲಿರುವ ಮಲವಗೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಇಂದು ನೋಟ್ ಬುಕ್ ಗಳನ್ನು ನೀಡಲಾಯಿತು.
ಮಲವಗೊಪ್ಪ ಸರ್ಕಾರಿ ಶಾಲೆಯ ಒಟ್ಟು 130 ವಿದ್ಯಾರ್ಥಿಗಳಿಗೆ ನೋಟ್ ಬುಕ್ ಗಳನ್ನು ವಿತರಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಮಂಜುನಾಥ್, ಸರ್ಕಾರಿ ಶಾಲೆ ಉಳಿಸಬೇಕು ಬೆಳೆಸಬೇಕು ಎಂಬುದು ಸಂಸ್ಥೆಯ ಉದ್ದೇಶವಾಗಿದ್ದು, ಶಾಲೆ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲ ಆಗಲೆಂದು ಮಕ್ಕಳಿಗೆ ನೋಟ್ ಬುಕ್ ಗಳನ್ನು ನೀಡುವ ಮೂಲಕ ಮಕ್ಕಳ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದ ಅವರು, ಸರ್ಕಾರಿ ಶಾಲೆಗಳನ್ನು ಉಳಿಸಲು ಉದ್ಯಮಿಗಳು, ದಾನಿಗಳು ಮುಂದಾಗಿ ಸರ್ಕಾರಿ ಶಾಲೆಗಳಿಗೆ ಸಹಾಯ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮ್ಯಾಂಗೋ ಲೈಫ್ ಹಾಲಿಡೇ ಸಂಸ್ಥೆಯ ಸಿಬ್ಬಂದಿಗಳು ಮಂಜುನಾಥ, ರಾಜೇಶ್ವರಿ, ಅನ್ನಪೂರ್ಣ, ಸುಮಯ್ಯ ರೋಹಿತ್ ತೇಜಸ್, ಪತ್ರಕರ್ತ ಶಶಿಕುಮಾರ್, ಗ್ರಾಮಸ್ಥರಾದ ಗಿರೀಶ್, ಸಂತೋಷ್, ಗೋವಿಂದ್ ರಾಜ್, ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.