
ಶಿವಮೊಗ್ಗ : ಭದ್ರಾ ಜಲಾಶಯದ ಎಡದಂಡೆ ನಾಲೆಗೆ ಹೊಸ ಗೇಟು ಅಳವಡಿಸಬೇಕಾಗಿದ್ದು, ಅಂದಾಜು ಒಂದೂವರೆ ತಿಂಗಳು ಕಾಲಾವಕಾಶ ಬೇಕಾಗಿದ್ದು, 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಎಡದಂಡೆ ನಾಲೆಗೆ ನೀರು ಹರಿಸಲು ಸಾಧ್ಯವಾಗುವುದಿಲ್ಲ ಎಂದು ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿರುತ್ತಾರೆ.
ಭದ್ರಾವತಿ ಕಾರ್ಯಪಾಲಕ ಇಂಜಿನಿಯರ್ ರವರ ವರದಿಯಂತೆ ಭದ್ರಾ ಜಲಾಶಯದ ಎಡದಂಡೆ ನಾಲೆಗೆ ಹೊಸ ಗೇಟು ಅಳವಡಿಸಲು ಸುಮಾರು ಒಂದೂವರೆ ತಿಂಗಳು ಬೇಕಾಗುತ್ತದೆ.
ಭದ್ರಾ ಜಲಾಶಯದ ಎಡದಂಡೆ ನಾಲೆಯ ವ್ಯಾಪ್ತಿಗೆ ಒಳಪಡುವ ಅಚ್ಚುಕಟ್ಟುದಾರರು ಎಡದಂಡೆ ನಾಲೆಯ ನೀರನ್ನು ಅವಲಂಬಿಸಿ ಭತ್ತ ಅಥವಾ ಇನ್ಯಾವುದೇ ಹೆಚ್ಚು ನೀರು ಅವಲಂಬಿತ ಬೆಳೆಗಳನ್ನು ಬೆಳೆಯಬಾರದು. ಒಂದು ವೇಳೆ ಬೆಳೆಗಳನ್ನು ಬೆಳೆದು ನಾಲೆಯಿಂದ ನೀರು ಸಿಗದೇ ಬೆಳೆ ನಷ್ಟವಾದಲ್ಲಿ ನೀರಾವರಿ ಇಲಾಖೆಯು ಯಾವುದೇ ರೀತಿಯಲ್ಲಿಯೂ ಜವಾವಾಬ್ದಾರಿಯಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಭದ್ರಾ ಜಲಾಶಯದ ಎಡದಂಡೆ ನಾಲೆಯ ವ್ಯಾಪ್ತಿಗೆ ಒಳಪಡುವ ಅಚ್ಚುಕಟ್ಟು ಭಾಗದ ಎಲ್ಲಾ ರೈತ ಬಾಂಧವರು ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಪ್ರಕಟಣೆಯಲ್ಲಿ ಕೋರಲಾಗಿದೆ.
ಇದನ್ನೂ ಓದಿ ⇒ ದೇಶ್ ನೀಟ್ ಅಕಾಡೆಮಿಗೆ ಪ್ರಥಮ ಹಂತದಲ್ಲೇ ಉತ್ತಮ ಫಲಿತಾಂಶ : ಅವಿನಾಶ್