
ಶಿವಮೊಗ್ಗ : ಶಿವಮೊಗ್ಗ ನಗರ ಹೊರವಲಯದ ಬೊಮ್ಮನಕಟ್ಟೆಯ ಇ-ಬ್ಲಾಕ್‌ನಲ್ಲಿ ಸ್ನೇಹಿತರ ನಡುವೆ ನಡೆದ ಎಣ್ಣೆ ಪಾರ್ಟಿ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ವರದಿಯಾಗಿದೆ. ಕುಡಿದ ಮತ್ತಿನಲ್ಲಿ ನಡೆದ ಜಗಳದ ಪರಿಣಾಮ ಪವನ್ ಎಂಬ ಯುವಕನ ಹತ್ಯೆಯಾಗಿದೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಜಿಲ್ಲಾ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಪವನ್ (28) ಮತ್ತು ಶಶಿಕುಮಾರ್ (49) ರಾತ್ರಿ ಪಾರ್ಟಿ ಮುಗಿಸಿ ಊಟ ಮಾಡಿದ್ದಾರೆ. ಪಾರ್ಟಿ ವೇಳೆ ಸ್ನೇಹಿತರ ನಡುವೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ. ಈ ಜಗಳದ ವೇಳೆ ಶಶಿಕುಮಾರ್, ಪವನ್ ನನ್ನು ಹತ್ಯೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.
ಆರೋಪಿ ಶಿವಕುಮಾರ್ ನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ವೇಳೆ ರಾತ್ರಿ ಎರಡೂವರೆ ಹೊತ್ತಿಗೆ ಹತ್ಯೆ ಮಾಡಿರುವುದ್ದಾಗಿ ಶಿವಕುಮಾರ್ ಬಾಯಿಬಿಟ್ಟಿದ್ದಾನೆ ಎಂದು ತಿಳಿಸಿದ್ದಾರೆ.