ಮಲೆನಾಡಲ್ಲಿ ಮೈಸೂರು ಸಿಲ್ಕ್ ಹಾವಳಿ

ಶಿವಮೊಗ್ಗ : ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಪಂಚಾಯತ್, ಶಿವಮೊಗ್ಗ ತೋಟಗಾರಿಕೆ ಇಲಾಖೆ, ಕೈಮಗ್ಗ ಮತ್ತು ಜವಳಿ ಇಲಾಖೆ, ರೇಷ್ಮೆ ಇಲಾಖೆ, ನೇಕಾರರ ಸೇವಾ ಕೇಂದ್ರ ಬೆಂಗಳೂರು ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ “ಕರಕುಶಲ ಉತ್ಸವ ಹಾಗೂ ಫಲಪುಷ್ಪ ಪ್ರದರ್ಶನ ಮೇಳ-2026” ಮೇಳವನ್ನು ಆಯೋಜಿಸಲಾಗಿದೆ.

ಕೈಮಗ್ಗ ಉತ್ಪನ್ನಗಳ ಮಾರಾಟವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಾರುಕಟ್ಟೆ ವೇದಿಕೆಯನ್ನು ಕಲ್ಪಿಸಲು ಈ ಮೇಳವನ್ನು ಅಲ್ಲಮ ಪ್ರಭು ಮೈದಾನ (ಫ್ರೀಡಂ ಪಾರ್ಕ್) ಶಿವಮೊಗ್ಗ ಇಲ್ಲಿ ದಿನಾಂಕ: 24.01.2026 ರಿಂದ 27.01.2026 ರವರೆಗೆ ಆಯೋಜಿಸಲಾಗಿದ್ದು, ಮೊದಲನೇ ದಿನವೇ ಮೈಸೂರು ಸಿಲ್ಕ್ ಸೀರೆ ಖರೀದಿಸಲು ಶಿವಮೊಗ್ಗ ಜನತೆ ಮುಗಿಬಿದ್ದಿದ್ದಾರೆ.

ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್‌ (ಕೆಎಸ್ಐಸಿ) ಮಳಿಗೆಗಳ ಎದುರು ಮಹಿಳೆಯರು ಜಮಾಯಿಸುತ್ತಿದ್ದಾರೆ. ಮೈಸೂರು ಸಿಲ್ಕ್ ಸೀರೆಗೆ ಶಿವಮೊಗ್ಗದಲ್ಲೂ ಬೇಡಿಕೆ ಹೆಚ್ಚಿದೆ.

ಕರಕುಶಲ ಉತ್ಸವ ಹಾಗೂ ಫಲಪುಷ್ಪ ಪ್ರದರ್ಶನ ಮೇಳದಲ್ಲಿ ಭಾಗವಹಿಸುವ ಕೈಮಗ್ಗದ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ಯಾಂತ್ರೀಕೃತ ಯಂತ್ರೋಪಕರಣಗಳ ಉತ್ಪನ್ನಗಳೊಂದಿಗೆ ಸ್ಪರ್ಧಿಸಿ ಮಾರುಕಟ್ಟೆಯನ್ನು ಉತ್ತಮ ಪಡಿಸಿಕೊಳ್ಳಲು ಸಹಕಾರಿಯಾಗಿರುತ್ತದೆ.

ಉತ್ಸವದಲ್ಲಿ ದೇಶದ ವಿವಿಧ ರಾಜ್ಯಗಳ ಹಾಗೂ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ಭೌಗೋಳಿಕವಾಗಿ ಗುರುತಸಲ್ಪಟ್ಟ (GI-Geographycaly Identified) ಕೈಮಗ್ಗ ಸಂಘ ಸಂಸ್ಥೆಗಳ ನೇಕಾರರು ಉತ್ಪಾದಿಸಿರುವ ವಿವಿಧ ಪಾರಂಪರಿಕ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿರುತ್ತದೆ.

ಮೇಳದಲ್ಲಿ 20 ಕ್ಕೂ ಹೆಚ್ಚು ಕೈಮಗ್ಗ ಉತ್ಪನ್ನಗಳ ಮಾರಾಟ ಮಳಿಗೆಗಳಿದ್ದು, ಹೊರ ರಾಜ್ಯಗಳಾದ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತೆಲಂಗಾಣ, ಬಿಹಾರ, ಮಹಾರಾಷ್ಟ್ರ, ರಾಜಸ್ಥಾನ, ಜಮ್ಮು ಕಾಶ್ಮೀರ, ಮಧ್ಯ ಪ್ರದೇಶ, ಒರಿಸ್ಸಾ, ಗುಜರಾತ್, ತಮಿಳುನಾಡು, ಆಂಧ್ರ ಪ್ರದೇಶ ಮೊದಲಾದ ರಾಜ್ಯಗಳಿಂದ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ವೈವಿದ್ಯಮಯ ಕೈಮಗ್ಗ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿರುತ್ತದೆ

ಮೇಳದಲ್ಲಿ ಪಾರಂಪರಿಕ ಹಾಗೂ GI ನೊಂದಾಯಿತ ಮೊಳಕಾಲ್ಕೂರು ಸೀರೆಗಳು, ಇಳಕಲ್ ಸೀರೆಗಳು, ಉಡುಪಿ ಸೀರೆಗಳು, ಗುಳೇದಗುಡ್ಡ ಖಣ ಅಲ್ಲದೆ, ನವಲಗುಂದ ಜಮಖಾನಗಳು, ಅಪ್ಪಟ ಉಣ್ಣೆ ಕಂಬಳಿಗಳು, ಹತ್ತಿ ಟವಲ್ ಮತ್ತು ಬೆಡ್‌ ಶೀಟ್‌ಗಳು, ಉತ್ತರ ರಾಜ್ಯಗಳ ವೈವಿಧ್ಯಮಯ ಸೀರೆಗಳು. ಮತ್ತು ಪಶ್ಚಿನಾ ಶಾಲುಗಳು. ಇನ್ನಿತರ ವಿಶೇಷ ಉತ್ಪನ್ನಗಳು ದೇಶದ ನಾನಾ ಭಾಗಗಳ ಕೈಮಗ್ಗ ಉತ್ಪನ್ನಗಳನ್ನು ಮಲೆನಾಡಿನ ಜನತೆಗೆ ಒಂದೇ ಸೂರಿನಡಿ ಪರಿಚಯ ಮಾಡಿಸುವುದರ ಜೊತೆಗೆ ಸೂಕ್ತ ವೇದಿಕೆಯನ್ನು ಒಂದೇ ಸೂರಿನಡಿ ಮಲೆನಾಡಿನ ಜನತೆಗೆ ಕಲ್ಪಿಸಲಾಗಿರುತ್ತದೆ.

ಮೇಳದಲ್ಲಿ ಭಾಗವಹಿಸುವ ಸಂಘ ಸಂಸ್ಥೆಗಳು ತಮ್ಮ ವೈವಿಧ್ಯಮಯ ಅಪ್ಪಟ ಹತ್ತಿ, ಉಣ್ಣೆ ಮತ್ತು ರೇಷ್ಮೆ ಕೈಮಗ್ಗದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದರಿಂದ ಗ್ರಾಹಕರಿಗೆ ಸ್ಪರ್ಧಾತ್ಮಕ ದರದಲ್ಲಿ ಉತ್ತಮ ಕೈಮಗ್ಗ ಉತ್ಪನ್ನಗಳು ದೊರೆಯಲಿದ್ದು, ಕೈಮಗ್ಗ ನೇಕಾರರಿಗೆ ನೇರ ಮಾರುಕಟ್ಟೆ ಒದಗಿಸಿ ಅವರಿಗೆ ನಿರಂತರ ಉದ್ಯೋಗ ಒದಗಿಸಲು ಸಹಕಾರಿಯಾಗುತ್ತದೆ.

ಆಯೋಜಿಸಲಾಗಿರುವ ಉತ್ಸವದಲ್ಲಿ ಕೈಮಗ್ಗ ಉತ್ಪನ್ನಗಳನ್ನು ಖರೀದಿಸುವ ಮೂಲಕ ಕೈಮಗ್ಗ ನೇಕಾರರನ್ನು ಪ್ರೋತ್ಸಾಹಿಸಬಹುದಾಗಿದೆ.

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...