
ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಆಚರಣೆಯ ಭಾಗವಾಗಿಯೇ ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ಸೆ.21 ರಂದು ಬೆಳಗ್ಗೆ 6.30 ಕ್ಕೆ ʼನಶೆ ಮುಕ್ತ ಭಾರತಕ್ಕಾಗಿ ಎಂಬ ಘೋಷಣೆʼಯಡಿಯಲ್ಲಿ ನಮೋ ಯುವ ರನ್ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ್ ಕುಕ್ಕೆ ತಿಳಿಸಿದ್ದಾರೆ.
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಒಟ್ಟು 100 ನಗರಗಳಲ್ಲಿ ಈ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದ್ದು, ಇದು ಗಿನ್ನಿಸ್ ದಾಖಲೆಯಾಗಲಿದೆ. ಪ್ರಧಾನಿ ಮೋದಿ ಅವರು ದೆಹಲಿಯಲ್ಲಿ ಈ ಕಾಯಕ್ರಮಕ್ಕೆ ಸೆ.21 ರಂದು ಬೆಳಗ್ಗೆ ಚಾಲನೆ ನೀಡಲಿದ್ದಾರೆ. ಅದೇ ವೇಳೆ ಶಿವಮೊಗ್ಗದ ನಗರದಲ್ಲೂ ನಮೋ ಯುವ ರನ್ ಮ್ಯಾರಥಾನ್ ಗೆ ಅಂದು ಬೆಳಗ್ಗೆ 6.30ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಚಾಲನೆ ನೀಡಿದ್ದು, ಯುವ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಶಾಸಕ ಧೀರಜ್ ಮುನಿರಾಜು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಒಟ್ಟು ಜಿಲ್ಲೆಯಲ್ಲಿ ಈಗಾಗಲೇ ಈ ಮ್ಯಾರಾಥಾನ್ ಗೆ ಕ್ಯೂಆರ್ ಕೋಡ್ ಮೂಲಕ 4700 ಜನ ನೋಂದಣಿ ಮಾಡಿದ್ದಾರೆ. 18 ವರ್ಷದೊಳಗಿನ ಪುರುಷರು ಮತ್ತು ಮಹಿಳೆಯರು, 18 ರಿಂದ 45 ವರ್ಷದೊಳಗಿನ ಪುರುಷರು ಮತ್ತು ಮಹಿಳೆಯರು, 45 ವರ್ಷ ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರು ಒಟ್ಟು 6 ವಿಭಾಗ ಮಾಡಲಾಗಿದೆ. ಪ್ರಥಮ ಬಹುಮಾನ 5,000 ರೂ.ಗಳು, ದ್ವಿತೀಯ 3,000 ರೂ,ಗಳು, ತೃತೀಯ 2,000 ರೂ. ಬಹುಮಾನಗಳನ್ನು 6 ವಿಭಾಗಕ್ಕೆ ನೀಡಲಾಗುವುದು.
| ಪ್ರಶಾಂತ್ ಕುಕ್ಕೆ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷರು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್ ಹಾಗೂ ಜಿಲ್ಲೆಯ ಹಾಲಿ ಮತ್ತು ಮಾಜಿ ಶಾಸಕರು ಭಾಗವಹಿಸಲಿದ್ದು, ಖ್ಯಾತ ನಟ ಗೌರಶಂಕರ್, ನಟಿ ಕಾರುಣ್ಯಾರಾಮ್, ರಾಷ್ಟ್ರೀಯ ಅಥ್ಲೆಟಿಕ್ ಸೌಮ್ಯಾ ಸಾವಂತ್ ಮತ್ತು ಗ್ರ್ಯಾಂಡ್ ಮಾಸ್ಟರ್ ಜಿ.ಎ.ಸ್ಟ್ಯಾನಿ ಅವರು ಪ್ರಚಾರದ ರಾಯಭಾರಿಗಳಾಗಿ ಭಾಗವಹಿಸಲಿದ್ದಾರೆ ಎಂದರು
3.5 ಕಿ.ಮೀ. ದೂರದ ಈ ಮ್ಯಾರಥಾನ್ ಗೆ ಉಚಿತ ನೋಂದಣಿ ಇದ್ದು, ನೆಹರೂ ಕ್ರೀಡಾಂಗಣ, ಮಹಾವೀರ ವೃತ್ತ, ಬಿ.ಹೆಚ್.ರಸ್ತೆ, ಸಾವರ್ಕರ್ ವೃತ್ತ, ಶೀನಪ್ಪಶೆಟ್ಟಿ ವೃತ್ತ, ಜೈಲ್ ಸರ್ಕಲ್, ಕುವೆಂಪು ರಸ್ತೆ ಮಾರ್ಗವಾಗಿ ಮತ್ತೆ ನೆಹರೂ ಕ್ರೀಡಾಂಗಣಕ್ಕೆ ಮ್ಯಾರಥಾನ್ ಮುಕ್ತಾಯಗೊಳ್ಳಲಿದ್ದು, ಮಾಹಿತಿ ಮತ್ತು ನೋಂದಣಿಗಾಗಿ ಧ್ರುವಕುಮಾರ್ 9611312971, ಸಂಜಯ್ ಕುಮಾರ್ 9980299905, ರಾಹುಲ್ ಬಿದರೆ 8095337876 ನ್ನು ಸಂಪರ್ಕಿಬಹುದು. ಭಾಗವಹಿಸಿದ ಎಲ್ಲರಿಗೂ ಟೀ ಶರ್ಟ್ ಅನ್ನು ಉಚಿತವಾಗಿ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಾಹುಲ್ ಬಿದರೆ, ದರ್ಶನ್, ಅಭಿ, ಅರುಣ್ ಕುಗ್ವೆ, ಧ್ರುವಕುಮಾರ್, ಸಂಜಯ್, ಸಂತೋಷ್ ಶೇಟ್, ಪರಶುರಾಮ್, ಯಶಸ್ವಿ, ಪವನ್, ಅನಿಲ್, ಜಯರಾಮ್, ಅಣ್ಣಪ್ಪ ಇದ್ದರು.