
ಸಾಗರ : ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ, ಇಂದು ಸಾಗರ ನಗರದ ವಿವಿಧ ಪಡೆಗಳ ಪೊಲೀಸರು ಪಥ ಸಂಚಲನ ನಡೆಸಿದರು. ವಿಶೇಷ ಕಾರ್ಯಪಡೆ, ಕ್ಷಿಪ್ರ ಕಾರ್ಯಪಡೆ ಹಾಗೂ ಸ್ಥಳೀಯ ಠಾಣೆಗಳ ಪೊಲೀಸರು ಪಥ ಸಂಚಲನದಲ್ಲಿ ಭಾಗಿಯಾಗಿದ್ದರು ಎಂದು ಜಿಲ್ಲಾ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ » ಜಿಲ್ಲೆಯಲ್ಲಿ ಸಡಗರ-ಸಂಭ್ರಮದ ಗೌರಿ ಗಣೇಶ ಹಬ್ಬ, ಮಾರುಕಟ್ಟೆಯಲ್ಲೀಗ ಗಣಪನದೇ ಮೆರಗು..
ಪೊಲೀಸ್ ಪಥ ಸಂಚಲನವನ್ನು ಸಾಗರದ ಎಸ್.ಎನ್.ನಗರದಿಂದ ಪ್ರಾರಂಭಿಸಿ ಆವಿನಹಳ್ಳಿ ರಸ್ತೆ, ಮಹಾಲಕ್ಷ್ಮಿ ರೈಸ್ ಮಿಲ್, ಜನ್ನತ್ ನಗರ ಕಬರಸ್ಥಾನ, ಉಪ್ಪಾರ ಕೇರಿ ಸರ್ಕಲ್, ನೆಹರು ನಗರ ಅರಳಿ ಕಟ್ಟೆ, ಫಿಶ್ ಮಾರ್ಕೆಟ್, ಆಜಾದ್ ಮಸೀದಿ, ಅಶೋಕ ರಸ್ತೆ, ಸಾಗರ್ ಸರ್ಕಲ್, ಮಾರಿಗುಡಿ, ಐತಪ್ಪ ಸರ್ಕಲ್ ಮೂಲಕ ಗಣಪತಿ ಕೆರೆ ಜಾಮಿಯಾ ಮಸೀದಿ ಹತ್ತಿರ ಬಂದು ಮುಕ್ತಾಯಗೊಂಡಿತು.
ಪಥ ಸಂಚಲನದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಸ್.ರಮೇಶ್ ಕುಮಾರ್, ಬೆನಕ ಪ್ರಸಾದ್ ಸೇರಿದಂತೆ ಸಾಗರ ಗ್ರಾಮಾಂತರ ಹಾಗೂ ಸಾಗರ ಪೇಟೆ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರು, ಕಾರ್ಗಲ್ ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ಸಾಗರದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಮತ್ತು ಎಸ್.ಎ.ಎಫ್. ಹಾಗೂ ಆರ್.ಎ.ಎಫ್. ನ ಪೋಲಿಸ್ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಗಳಿಂದ ನೇರ ಸಂದರ್ಶನ, ಯಾವಾಗ, ಎಲ್ಲಿ?