
ಶಿವಮೊಗ್ಗ : ಭಾರತೀಯ ಅಂಚೆ ಇಲಾಖೆ ಆದೇಶದಂತೆ ಅಂಚೆ ಕಚೇರಿಗಳ ಮತ್ತು ಅದರ ವ್ಯಾಪ್ತಿಯ ಎಲ್ಲಾ ಉಪ ಹಾಗೂ ಶಾಖಾ ಅಂಚೆ ಕಚೇರಿಗಳಲ್ಲಿ ಹೊಸ ತಂತ್ರಾಂಶ (ಎ.ಪಿ.ಟಿ.2.0) ಅಳವಡಿಕೆ ಮಾಡಲು ಉದ್ದೇಶಿಸಿದೆ ಎಂದು ಅಂಚೆ ಅಧೀಕ್ಷಕ ಜಯರಾಮ ಶೆಟ್ಟಿ.ಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂ.23 ರಂದು ಶಿವಮೊಗ್ಗ ಪ್ರಧಾನ ಅಂಚೆ ಕಚೇರಿ, ಜೂ.26 ರಂದು ಭದ್ರಾವತಿ ಮತ್ತು ಸಾಗರ ಪ್ರಧಾನ ಅಂಚೆ ಕಚೇರಿಗಳ ಮತ್ತು ಅದರ ವ್ಯಾಪ್ತಿಯ ಎಲ್ಲಾ ಉಪ ಹಾಗೂ ಶಾಖಾ ಅಂಚೆ ಕಚೇರಿಗಳಲ್ಲಿ ಹೊಸ ತಂತ್ರಾಂಶ (ಎ.ಪಿ.ಟಿ.2.0) ಅಳವಡಿಕೆ ಮಾಡಲು ಉದ್ದೇಶಿಸಿದೆ.
ಈ ಸಂಬಂಧ ಪೂರ್ವಸಿದ್ಧತೆಗಾಗಿ ಜೂ.21 ರಂದು ಶಿವಮೊಗ್ಗ ಹಾಗೂ ತೀರ್ಥಹಳ್ಳಿ ತಾಲೂಕುಗಳ ಅಡಿಯಲ್ಲಿ ಬರುವ ಅಂಚೆ ಕಚೇರಿಗಳಲ್ಲಿ ಎಲ್ಲಾ ರೀತಿಯ ವ್ಯವಹಾರ ವಹಿವಾಟುಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಿದೆ.
ಜೂ. 25 ರಂದು ಭದ್ರಾವತಿ, ಸಾಗರ, ಸೊರಬ, ಹೊಸನಗರ ಹಾಗೂ ಶಿಕಾರಿಪುರ ತಾಲೂಕುಗಳ ಅಡಿಯಲ್ಲಿ ಬರುವ ಅಂಚೆ ಕಚೇರಿಗಳಲ್ಲಿ ಎಲ್ಲಾ ರೀತಿಯ ವ್ಯವಹಾರ ವಹಿವಾಟುಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಿದೆ.
ಸಾರ್ವಜನಿಕರು ಸಹಕರಿಸುವಂತೆ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.