
ಶಿವಮೊಗ್ಗ : ಶಿವಮೊಗ್ಗ ಮೆಸ್ಕಾಂ ಘಟಕ-2 ರ ನಗರ ಉಪವಿಭಾಗ 1 ರ ವ್ಯಾಪ್ತಿಯ ರಾಘವೇಂದ್ರ ಸ್ವಾಮಿ ಮಠದ ರಸ್ತೆ ಜಿಲ್ಲಾ ಪಂಚಾಯಿತಿ ಎದುರು ಸ್ಪನ್ ಪೋಲ್ ಸ್ಥಳಾಂತರಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂ.29 ರಂದು ಬೆಳಗ್ಗೆ 9.00 ರಿಂದ ಸಂಜೆ 5.00 ಗಂಟೆಯವರೆಗೆ ರಾಘವೇಂದ್ರ ಸ್ವಾಮಿ ಮಠದ ರಸ್ತೆ, ತಿಲಕ್‌ನಗರ, ರತ್ನಮ್ಮ ಮಾಧವ ರಾವ್ ರಸ್ತೆ, ಕುವೆಂಪು ರಸ್ತೆ, ಪಾರ್ಕ್ ಬಡಾವಣೆ, ದುರ್ಗಿಗುಡಿ, ಶಿವಮೂರ್ತಿ ಸರ್ಕಲ್ ಹಾಗೂ ಜಿಲ್ಲಾ ಪಂಚಾಯಿತಿ ರಸ್ತೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಶಿವಮೊಗ್ಗ ಆಲ್ಕೊಳ ವಿ ವಿ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-8 ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂ. 29 ರಂದು ಬೆಳಗ್ಗೆ 9.00 ರಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಲಕ್ಷೀಪುರ, ಕೆಂಚಪ್ಪ ಲೇಔಟ್, ಎನ್.ಎಂ.ಸಿ. ಕಾಂಪೌಂಡ್, ಸೂಡಾ ಕಚೇರಿ, ಪೊಲೀಸ್ ಚೌಕಿ, ಸವಿ ಬೇಕರಿ ಎದುರು, 100 ಅಡಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.