
ಶಿವಮೊಗ್ಗ : ಕರ್ನಾಟಕ ಮತ್ತು ಗೋವಾ ತಂಡಗಳ ನಡುವಿನ ರಣಜಿ ಟ್ರೋಫಿ ಪಂದ್ಯಾ ವಳಿಯ ಮೊದಲ ದಿನ ಆಟ ಕ್ರೀಡಾ ಪ್ರೇಮಿ ಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡವು ದಿನದ ಆಟ ಮುಗಿಯುವ ಹೊತ್ತಿಗೆ 5 ವಿಕೆಟ್ ಗಳ ನಷ್ಟಕ್ಕೆ 29 ಒವರ್ ಗಳಲ್ಲಿ 222 ರನ್ ಪಡೆಯಿತು.
ನಗರದ ನವುಲೆಯ ಕೆಎಸಿಎ ಕ್ರಿಕೆಟ್ ಮೈದಾನದಲ್ಲಿ ಕರ್ನಾಟಕ ಮತ್ತು ಗೋವಾ ತಂಡಗಳ ನಡುವಿನ ರಣಜಿ ಟ್ರೋಫಿ ಪಂದ್ಯಾ ವಳಿ ಆರಂಭಗೊಂಡಿದೆ. ಬಿಸಿಸಿಐ ಆಯೋಜಿಸಿರುವ ಈ ಪಂದ್ಯಾವಳಿಗೆ ಶನಿವಾರ ಬೆಳಗ್ಗೆ ಶಾಸಕ ಎಸ್.ಎನ್.ಚನ್ನಬಸಪ್ಪ ಅಧಿಕೃತವಾಗಿ ಚಾಲನೆ ನೀಡಿದರು. ಒಂದು ಗಂಟೆ ತಡವಾಗಿ ಆಟ ಶುರುವಾಯಿತು. ಟಾಸ್ ಗೆದ್ದ ಗೋವಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡರೆ, ಟಾಸ್ ಸೋತ ಕರ್ನಾಟಕ ತಂಡವು ಬ್ಯಾಂಟಿಂಗ್ ಶುರು ಮಾಡಿತು.
ಶಿವಮೊಗ್ಗ ನಗರದಲ್ಲಿ ನಡೆಯುತ್ತಿ ರುವ ಈ ಕ್ರಿಕೆಟ್ ಪಂದ್ಯಾವಳಿ ಅತ್ಯಂತ ಮಹತ್ವ ಪಡೆದಿದ್ದು, ಕ್ರೀಡಾಪ್ರೇಮಿ ಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ. ಪ್ರಸಿದ್ಧ ಕ್ರೀಡಾಪಟುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. ಶಿವಮೊಗ್ಗದಲ್ಲಿ ಕೂಡ ಪ್ರತಿಭಾವಂತ ಕ್ರಿಕೆಟ್ ಆಟಗಾರರಿದ್ದು ಅವರಿಗೆ ಈ ಪಂದ್ಯಾವಳಿ ಪ್ರೋತ್ಸಾಹ ನೀಡಲಿ ಮತ್ತು ಈ ಪಂದ್ಯಾವಳಿಯ ಎರಡೂ ತಂಡಗಳ ಕ್ರಿಕೆಟ್ ಆಟಗಾರರು ಉತ್ತಮ ಪ್ರದರ್ಶನ ನೀಡಲಿ.
– ಎಸ್. ಎನ್.ಚನ್ನಬಸಪ್ಪ, ಶಿವಮೊಗ್ಗ ನಗರ ಶಾಸಕರು

ರಣಜಿ ಕ್ರಿಕೆಟ್ ಪಂದ್ಯಾವಳಿಗೆ ಶಾಸಕ ಚೆನ್ನಿ ಅಧಿಕೃತ ಚಾಲನೆ
ಕರ್ನಾಟಕ ತಂಡದ ಆಟಗಾರರಾದ ಕರುಣ್ ನಾಯರ್ 86, ಶ್ರೇಯಸ್ ಗೋಪಾಲ್ 48 ರನ್ ಪಡೆದು ಆಕರ್ಷಕ ಆಟ ಪ್ರದರ್ಶಿಸಿ ದರು. ಇನ್ನು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ಗೋವಾ ತಂಡದ ಪರವಾಗಿ ಅರ್ಜುನ್ ತೆಂಡೂಲ್ಕರ್ 3 ವಿಕೆಟ್ ಮತ್ತು ವಿ. ಕೌಶಿಕ್ 2 ವಿಕೆಟ್ ಪಡೆದರು.
ಬೆಳಗ್ಗೆಯಿಂದ ಲಂಚ್ ಬ್ರೇಕ್ ವರೆಗೆ ಯಾವುದೇ ವಿಕೆಟ್ ಕಳೆದುಕೊಳ್ಳದ ಕರ್ನಾಟಕ ತಂಡ 12 ಓವರ್‌ಗೆ 15 ರನ್ ಪಡೆದು ನೋಲಾಸ್ ಆಗಿತ್ತಾದರೂ, ಲಂಚ್ ಬ್ರೇಕ್ ನಂತರ ಬ್ಯಾಟ್ ಮಾಡಲು ಬಂದ ಕರ್ನಾಟಕ ತಂಡಕ್ಕೆ ಅರ್ಜುನ್ ತೆಂಡೂಲ್ಕರ್ ಅಕ್ಷರಶಃ ಹಾವಳಿಯಿಟ್ಟರು. ಅವರ ಬಿರುಗಾಳಿ ಎಸೆತಕ್ಕೆ ಕರ್ನಾಟಕ ತಂಡದ ಆಟಗಾರರು ತತ್ತರಿಸಿದರು.
ಕರ್ನಾಟಕ ತಂಡದ ಒಪನರ್ ಆಗಿ ಆಗಮಿಸಿದ ನಿಖಿನ್ ಜೋಸೆ ಮತ್ತು ಮಾಯಾಂಕ್ ಅಗರ್ ವಾಲ್ 6 ಓವರ್ ನಲ್ಲಿ ವಿಕೆಟ್ ಕಳೆದುಕೊಳ್ಳದೆ 12 ರನ್ ಗಳಿಸಿದರು. ಗೋವಾ ತಂಡದ ಆರಂಭಿಕ ಬೌಲರ್ ಆಗಿ ಅರ್ಜುನ್ ತೆಂಡೂಲ್ಕರ್ 3 ಓವರ್ ಮಾಡಿ 6 ರನ್ ನೀಡಿದರು. ಇದರಲ್ಲಿ ಒಂದು ಒವರ್ ಮೇಡಿನ್ ಮಾಡಿದರು. ಮುಂದೆ ಕೌಶಿಕ್ ವಿ ಮೂರನೇ ಓವರ್ ಎಸೆತಕ್ಕೆ 6 ರನ್ ನೀಡಿದರು. ಲಂಚ್ ಬ್ರೇಕ್ ನಂತರ ಬ್ಯಾಟ್ ಮಾಡಲು ಬಂದ ಕರ್ನಾಟಕ ತಂಡಕ್ಕೆ ಗೋವಾ ತಂಡದ ಬೌಲರ್ ಅರ್ಜುನ್ ತೆಂಡೂಲ್ಕರ್ ಅಕ್ಷರಶಃ ಹಾವಳಿಯಿಟ್ಟರು.

ಕರ್ನಾಟಕ ತಂಡ 22 ಓವರ್ ಗೆ 3 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿತು. ಮಾಯಾಂಕ್ ಅಗರ್ ವಾಲ್ 68 ಬಾಲ್ ಗೆ 28 ರನ್ ಹೊಡೆದು ಔಟಾದರು. ಕರುಣ್ ನಯ್ಯರ್ 17 ಬಾಲ್ ಗೆ 12 ರನ್ ಹೊಡೆದು ಸ್ಟ್ರೀಜ್ ನಲ್ಲಿ ಇದ್ದರು. ನಿಕಿನ್ ಜೋಸೆ 3 ರನ್ ಹೊಡೆದು ಮತ್ತು ತ್ರಿ ಜಿತ್ ಸೊನ್ನೆಗೆ ಅರ್ಜುನ್ ತೆಂಡೂಲ್ಕರ್ ಬೌಲಿಂಗ್ ಗೆ ಔಟಾದರು. ಕರುಣ್ ನಯ್ಯರ್ ಮತ್ತು ಮಾಯಾಂಕ್ ಅಗರ್ ವಾಲ್ ನಡುವೆ 21 ರನ್ ಗಳ ಜೊತೆಯಾಟ ಬಂದಿದೆ ಒಪನರ್ ಆಗಿ ಬಂದಿದ್ದ ಮಯಾಂಕ್ ಮತ್ತು ನಿಕಿನ್ ಜೋಸೆ ನಡುವೆ 18 ರನ್ ಬಂದಿತ್ತು. ನಿಖಿನ್ ಔಟಾದ ನಂತರ ಶ್ರೀಜಿತ್ ಜೊತೆ ಅಗರ್ ವಾಲ್ 8 ರನ್ ಜೊತೆಯಾಡಿದ್ದರು. ಕೌಶಿಕ್ ವಿ ಬೌಲಿಂಗ್ ಗೆ ಮಾಯಾಂಕ್ ಸ್ಲಿಪ್ ನಲ್ಲಿ ಕ್ಯಾಚಿತ್ತು ಔಟಾದರು. ದಿನದ ಆಟ ಮುಗಿಯುವ ಹೊತ್ತಿಗೆ ಕರ್ನಾಟಕ ತಂಡವು 5 ವಿಕೆಟ್ ಗಳ ನಷ್ಟಕ್ಕೆ 29 ಒವರ್ ಗಳಲ್ಲಿ 222 ರನ್ ಪಡೆಯಿತು.
ಈ ಸಂದರ್ಭದಲ್ಲಿ ಶಾಸಕರಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಸೂಡಾ ಆಯುಕ್ತ ವಿಶ್ವನಾಥ್, ತೋಟಗಾರಿಕಾ ಮತ್ತು ಕೃಷಿ ವಿವಿ ಕುಲಪತಿ ಜಗದೀಶ್, ಕೆಎಸ್ ಸಿಎ ವಲಯ ಸಂಚಾಲಕ ಹೆಚ್.ಎಸ್. ಸದಾನಂದ್, ಪ್ರಮುಖರಾದ ರಾಜೇಂದ್ರ ಕಾಮತ್, ಡಿ.ಆರ್.ನಾಗರಾಜ್, ಐಡಿಯಲ್ ಗೋಪಿ, ಎಸ್.ಪಿ.ಶೇಷಾದ್ರಿ, ವೈ.ಹೆಚ್. ನಾಗರಾಜ್ ಮತ್ತಿತರರಿದ್ದರು.

ಇದನ್ನೂ ಓದಿ » ದೀಪಾವಳಿ ಹಬ್ಬದ ಪ್ರಯುಕ್ತ “ಫಸ್ಟ್ ಸ್ಯಾಲರಿ” ಕಿರುಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ಚಿತ್ರತಂಡ