
ಶಿವಮೊಗ್ಗ : 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಪ್ ಪಡೆದಿರುವುದು ಕ್ರಿಕೆಟ್ ಪ್ರಿಯರಿಗೆ ಎಲ್ಲಿಲ್ಲದ ಸಂತಸ ತಂದಿದೆ.
ಆರ್ ಸಿ ಬಿ ಕೊನೆಗೂ ‘ಈ ಸಲ ಕಪ್ ನಮ್ದೆ’ ಎನ್ನುವುದನ್ನು ಸಾಬೀತು ಪಡಿಸಿದೆ. 18 ವರ್ಷಗಳ ಶ್ರಮದ ಫಲವಾಗಿ ಆರ್ ಸಿ ಬಿ ಚಾಂಪಿಯನ್ ಪ್ರದರ್ಶನ ನೀಡಿ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಭರ್ಜರಿ ಜಯ ಗಳಿಸಿದೆ.

ಶಿವಮೊಗ್ಗದ ಜನತೆ ಅತ್ಯಂತ ಅದ್ದೂರಿಯಾಗಿ ಸಂಭ್ರಮವನ್ನು ಆಚರಿಸಿದ್ದಾರೆ. ನಗರದ ಸೀನಪ್ಪ ಶೆಟ್ಟಿ ವೃತ್ತ (ಗೋಪಿ ಸರ್ಕಲ್), ಉಷಾ ನರ್ಸಿಂಗ್ ಹೋಂ ಸೇರಿದಂತೆ ಹಲವೆಡೆ ಕ್ರಿಕೆಟ್ ಪ್ರಿಯರು ಬಾನಂಗಳದಲ್ಲಿ ಪಟಾಕಿ ಸಿಡಿಸುವುದರ ಮೂಲಕ, ಕುಣಿದು ಕುಪ್ಪಳಿಸಿದ್ದಾರೆ. ದೃಶ್ಯಾವಳಿಗಳು suddispoit ಗೆ ಲಭ್ಯವಾಗಿವೆ.