
ಶಿವಮೊಗ್ಗ : ಇತ್ತೀಚೆಗೆ ಬೃಹತ್ ಕೈಗಾರಿಕಾ ಸಚಿವ ಕುಮಾರಸ್ವಾಮಿಯವರು ಭದ್ರಾವತಿ ಕಾರ್ಖಾನೆ ಯನ್ನು ಪುನಶ್ಚೇತನಗೊಳಿಸುವ ಕುರಿತು ಭರವಸೆ ನೀಡಿದ ಬೆನ್ನಲ್ಲೇ SAIL ನ ನಿಯೋಗವು ಇಂದು ಕಾರ್ಖಾನೆಗೆ ಭೇಟಿ ನೀಡಿರುವುದು ಮಹತ್ವ ಪಡೆದುಕೊಂಡಿದೆ.
ಉಕ್ಕು ಪ್ರಾಧಿಕಾರಿದ ಅಧ್ಯಕ್ಷ ಅಮರೇಂದು ಪ್ರಕಾಶ್, ಉಕ್ಕು ಸಚಿವಾಲಯದ ಕಾರ್ಯದರ್ಶಿ ಸಂದೀಪ್ ಪಾಂಡ್ರಿಕ್, ಜಂಟಿ ಕಾರ್ಯದರ್ಶಿ ಅಭಿಜಿತ್ ನರೇಂದ್ರ ಅವರ ನಿಯೋಗ ವಿಐಎಎಸ್‌ಎಲ್ ಕಾರ್ಖಾನೆಗೆ ಭೇಟಿ ನೀಡಿದ್ದರು.
ಈ ವೇಳೆ ಗುತ್ತಿಗೆ ಕಾರ್ಮಿಕ ನೌಕರರ ಸಂಘ ಮನವಿ ಸಲ್ಲಿಸಿದ್ದು, ಮನವಿಯಲ್ಲಿ ರೋಗ ಗ್ರಸ್ತ ಕಾರ್ಖಾನೆಯನ್ನು ಈಗಿರುವ ಜಾಗದಲ್ಲಿಯೇ ಪುನಶ್ಚೇತನಗೊಳಿಸಬೇಕು. ಹೆಚ್ಚುವರಿಯಾಗಿ, 150 ಎಕರೆ ಕಬ್ಬಿಣದ ಅದಿರು ಗಣಿಗಾರಿಕೆ ಭೂಮಿಗೆ ಅರಣ್ಯ ತೆರವುಗೊಳಿಸಲು SAIL ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಪ್ರಸ್ತುತ ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿರುವ NEB ರೇಂಜ್, ಸಂಡೂರ್‌ನಲ್ಲಿರುವ 140 ಹೆಕ್ಟೇರ್ ಕಬ್ಬಿಣದ ಅದಿರು ಗಣಿಗೆ ಕಾನೂನು ಅನುಮತಿಯನ್ನು ಪಡೆಯಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ವೇಳೆ ಮನವಿ ಸ್ವೀಕರಿಸಿದ SAIL ನ ಕಾರ್ಯದರ್ಶಿ, ಕೇಂದ್ರ ಸರ್ಕಾರ ಕಾರ್ಖಾನೆಯನ್ನು ಪುನಶ್ಚೇತನ ಗೊಳಿಸುವ ಭರವಸೆಯನ್ನು ಹೊಂದಿದೆ. ಲಾಭದಾಯಕ ಉದ್ಯಮವನ್ನು ನಿರ್ಮಿಸುವ ಅಗತ್ಯವನ್ನು ಮತ್ತು ಮುಂದಿನ ಎರಡು ಮೂರು ತಿಂಗಳೊಳಗೆ ಹೂಡಿಕೆ ಯೋಜನೆಯನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ ಎಂದು ಭರವಸೆ ನೀಡಿದ ಅವರು, ಕಬ್ಬಿಣದ ಅದಿರು ಗಣಿ ತೆರವು ವಿಷಯವನ್ನು ಪರಿಶೀಲಿಸುವಂತೆ ಅವರು SAIL ಅಧ್ಯಕ್ಷರೊಂದಿಗೆ ಚರ್ಚಿಸುವ ಬಗ್ಗೆ ತಿಳಿಸಿದರು.
ಇದನ್ನೂ ಓದಿ – ಜೂ.9: ‘ಹೆಜ್ಜೆಗೊಲಿದ ಬೆಳಕು’ ಏಕವ್ಯಕ್ತಿ ನಾಟಕ ಪ್ರದರ್ಶನ