
ಶಿವಮೊಗ್ಗ : ಶಿವಮೊಗ್ಗ ನಗರದ ಪ್ರಸಿದ್ದ ಕೋಟೆ ಶ್ರೀ ಮಾರಿಕಾಂಬ ಕೋಟೆ ಶ್ರೀ ಮಾರಿಕಾಂಬ ಜಾತ್ರೆಗೆ ದಿನಾಂಕ ನಿಗದಿಯಾಗಿದೆ. 2026 ರ ಫೆಬ್ರವರಿ 24 ರಿಂದ 28 ರವರೆಗೆ ಜಾತ್ರೆ ನಡೆಯಲಿದ್ದು, ಈ ಸಂಬಂಧ ಪೋಸ್ಟರ್ ಕೂಡ ಬಿಡುಗಡೆ ಮಾಡಲಾಗಿದೆ.
ಇಲ್ಲಿವರೆಗೂ ನಡೆದುಕೊಂಡು ಬಂದಂತೆ ಸಂಪ್ರದಾಯ ಬದ್ಧವಾಗಿ ಅದ್ದೂರಿಯಾಗಿ ಐದು ದಿನ ಕಾಲ ಮಾರಿಕಾಂಬ ಜಾತ್ರೆ ನಡೆಯಲಿದೆ ಎಂದು ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ತಿಳಿಸಿದೆ.
ಕೋಟೆ ಶ್ರೀ ಮಾರಿಕಾಂಬ ದೇಗುಲದ ಆಡಳಿತ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಣಯ ಹೊರಬಿದ್ದಿದ್ದು, ಮಾರಿಕಾಂಬ ಜಾತ್ರೆಗೆ ಸಂಬಂಧಿದಂತೆ ಆಡಳಿತ ಮಂಡಳಿಯ ಸದಸ್ಯರು ಸರ್ವಾನುಮತದಿಂದ ದಿನಾಂಕ ನಿಗದಿಪಡಿಸಿದ್ದಾರೆ.