
ಶಿವಮೊಗ್ಗ : ಶಿವಮೊಗ್ಗ ಮಾತೃ ವಾತ್ಸಲ್ಯ ಆಸ್ಪತ್ರೆಗೆ ಸುಮಾರು ಮೂವತ್ತೈದು ವರ್ಷಗಳ ಸುದೀರ್ಘ ಅನುಭವವನ್ನು ಹೊಂದಿರುವ ಖ್ಯಾತ ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರುಗಳಾದ ಡಾ. ಗೀತಾ ರವಿ ಹಾಗೂ ಡಾ. ಅಮಿತಾ ಹೆಗ್ಡೆಯವರು ಇದೀಗ ಪೂರ್ಣಾವಧಿಯಾಗಿ ಮಾತೃವಾತ್ಸಲ್ಯ ಆಸ್ಪತ್ರೆಯಲ್ಲಿ ಲಭ್ಯವಿರುತ್ತಾರೆ ಎಂದು ಮಾತೃ ವಾತ್ಸಲ್ಯ ಆಸ್ಪತ್ರೆಯ ನಿರ್ದೇಶಕರಾದ ಡಾ. ಪೃಥ್ವಿ.ಬಿ.ಸಿ. ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವೈದ್ಯರು 20 ವರ್ಷಗಳಿಂದ ನೋವು ರಹಿತ ಹೆರಿಗೆಯಲ್ಲಿ ವಿಶೇಷ ಪರಿಣಿತರಾಗಿರುತ್ತಾರೆ. ಅಲ್ಲದೇ ಬಂಜೆತನ ನಿವಾರಣೆ ಹಾಗೂ ಲ್ಯಾಪ್ರೋಸ್ಕೋಪಿಕ್ ತಜ್ಞರಾಗಿ ಸೇವೆ ಸಲ್ಲಿಸಿದ್ದಾರೆ. ಮಾತೃವಾತ್ಸಲ್ಯ ಆಸ್ಪತ್ರೆಯಲ್ಲಿ ಅತೀ ಕಡಿಮೆ ದರದಲ್ಲಿ ಶಸ್ತ್ರಚಿಕಿತ್ಸೆ ಹಾಗೂ ಸಹಜ ಹೆರಿಗೆ ಸೌಲಭ್ಯ ಲಭ್ಯವಿದ್ದು, ಡಾ. ಗೀತಾ ರವಿ ಹಾಗೂ ಡಾ. ಅಮಿತಾ ಹೆಗ್ಡೆ ಇವರುಗಳ ಪಾಲ್ಗೊಳ್ಳುವಿಕೆಯಿಂದಾಗಿ ರೋಗಿಗಳಿಗೆ ಭರವಸೆಯ ಚಿಕಿತ್ಸೆ ಹಾಗೂ ಸಲಹೆ ಸಿಗಲಿದೆ ಎಂದು ಹೇಳಿದರು.
ಅಲ್ಲದೇ, ವಿಶೇಷವಾಗಿ ರೋಗಿಗಳಿಗಾಗಿ ರಿಯಾಯಿತಿಯ “ಮಾತೃವಾತ್ಸಲ್ಯ ಆರೋಗ್ಯ ಕಾರ್ಡ್” ಜಾರಿಗೊಳಿಸಲಾಗಿದ್ದು, ಆಸಕ್ತರು ಆಸ್ಪತ್ರೆಯಲ್ಲಿ ಪಡೆದುಕೊಳ್ಳಬಹುದು ಎಂದು ಮನವಿ ಮಾಡಿದ ಅವರು, ಈ ಕಾರ್ಡ್ ಮೂಲಕ ಒಳರೋಗಿ ಹಾಗೂ ಹೆರಿಗೆ ಮತ್ತು ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ರಿಯಾಯಿತಿ ಪಡೆಯಬಹುದು ಎಂದರು.

ಮಾತೃವಾತ್ಸಲ್ಯ ಆಸ್ಪತ್ರೆಯಲ್ಲಿ ಯಶಸ್ವಿನಿ ಯೋಜನೆ ಸೇರಿದಂತೆ ಹಲವು ಖಾಸಗಿ ವಿಮಾ ಸೌಲಭ್ಯಗಳು ಕೂಡ ಜಾರಿಯಲ್ಲಿದ್ದು, ಅರ್ಹರು ಇದರ ಪ್ರಯೋಜನ ಪಡೆದುಕೊಳ್ಳಬಹುದು.
| ಡಾ. ಪೃಥ್ವಿ.ಬಿ.ಸಿ., ಮಾತೃ ವಾತ್ಸಲ್ಯ ಆಸ್ಪತ್ರೆಯ ನಿರ್ದೇಶಕರು
ನೋವು ರಹಿತ ಹೆರಿಗೆ ಸೌಲಭ್ಯ ಇರುವುದರಿಂದ, ಅನೇಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಎಷ್ಟೋ ಜನರಿಗೆ ಈ ಕುರಿತು ಸಂಪೂರ್ಣ ಮಾಹಿತಿ ಇರುವುದಿಲ್ಲ.
| ಡಾ. ಅಮಿತಾ ಹೆಗ್ಡೆ, ಹಿರಿಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು
20 ವರ್ಷಗಳಿಂದ ನಿರಂತರ ರಜೆ ತೆಗೆದುಕೊಳ್ಳದೇ ಕಾರ್ಯನಿರ್ವಹಿಸಿದ್ದೇವೆ. ಬೇರೆಡೆ ಆಪರೇಶನ್ ಆದ 1-2 ಗಂಟೆಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಆದರೆ ನಮ್ಮಲ್ಲಿ ನಾವು ನೀಡುವ ಇಂಜೆಕ್ಷನ್ ಮೂಲಕ ಆ ನೋವು ಬಾರದಂತೆ ಆಪರೇಶನ್ ಮಾಡಬಹುದು.
| ಡಾ. ಗೀತಾ ರವಿ, ಹಿರಿಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು
ಅತಿ ಕಡಿಮೆ ದರದಲ್ಲಿ ಶಿವಮೊಗ್ಗ ಜನತೆಗೆ ಹಾಗೂ ಶಿವಮೊಗ್ಗದ ಸುತ್ತಮುತ್ತಲಿನ ಜನತೆಗೆ ಎಲ್ಲ ರೀತಿಯ ಸೌಲಭ್ಯ ನೀಡಿದ್ದೇವೆ. 24/7 ಎಲ್ಲ ತಜ್ಞರು ಲಭ್ಯವಿದ್ದಾರೆ. ಇದೀಗ ಖ್ಯಾತ ತಜ್ಞರು ಸೇರ್ಪಡೆಯಾಗಿರುವುದು ಹೆಚ್ಚು ಸಂತೋಷ ತಂದಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು.
| ನಾಗಮಣಿ.ಎಂ.ಸಿ., ಹಿರಿಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು
ಪತ್ರಿಕಾಗೋಷ್ಠಿಯಲ್ಲಿ ಮಾತೃ ವಾತ್ಸಲ್ಯ ಆಸ್ಪತ್ರೆಯ ನಿರ್ದೇಶಕರಾದ ಡಾ. ಪೃಥ್ವಿ.ಬಿ.ಸಿ., ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರುಗಳಾದ ಡಾ. ಗೀತಾ ರವಿ, ಡಾ. ಅಮಿತಾ ಹೆಗ್ಡೆ ಹಾಗೂ ಡಾ. ನಾಗಮಣಿ.ಎಂ.ಸಿ. ಉಪಸ್ಥಿತರಿದ್ದರು.
ಇದನ್ನು ಓದಿ » ವಿಭಿನ್ನ ಕಥಾ ಹಂದರ ಹೊಂದಿರುವ ‘ಕಟುದಾರಿ’ ಕಿರು ಚಿತ್ರವು ಇಂದು ಬಿಡುಗಡೆ